ಪುಟ:ಚೆನ್ನ ಬಸವೇಶವಿಜಯಂ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕy ಚನ್ನಬಸವೇಶವಿಜಯ, (ಕಾಂಡ 4) [ಅಧ್ಯಾಯ ಸತ್ಕಾರವನ್ನು ಕೈಕೊಂಡು ಗಮ್ಮನೆ ಹೋಗುವುದನ್ನು ಬಿಟ್ಟು, ಈಕೆಯ ವಿಚಾರವನ್ನೆಲ್ಲ ಕೇಳುವುದಕ್ಕೆ ಕಾರಣವೇನು ? ಎಂದರು, ಯತಿಯುಕೇಳಿದಮಾತ್ರದಿಂದಲೇ ಆದ ನಷ್ಯವೇನು ? ಅಯ್ಯೋ ! ಇಂತಹ ತುಂಬಿ ದಯವನದಲ್ಲಿ ಈ ಸಂದರವತಿಯು ಕಠಿನತಪಸ್ಸನ್ನು ಮಾಡುತ್ತಿದ್ದರೆ ಮರುಗಿ ಇದನ್ನು ಬಿಡಿಸುವವರು ಯಾರೂ ಇಲ್ಲದೆ ಹೋದರೆ ? ಎಂದನು. ಯಾರೂ ಆಡದೆಯಿದ್ದ ಈ ಮಾತು ತನ್ನ ಕಿವಿಯನ್ನು ಸೋಂಕಿದಕೂಡಲೇ ಶರತಿಯು ಕಣ್ಣನ್ನು ತೆರೆದಳು. ಆಗ ಯತಿಯು ದೇವಿಯನ್ನು ಕುರಿತು ಯುವತಿಯೆ ! ಗಂಧಕೇಸರಿಗಳನ್ನು ಅನುಲೇಪಿಸಿಕೊಳ್ಳಬೇಕಾದ ನಿನ್ನ ಶರೀರದಲ್ಲಿ ಈ ಭಸ್ಮ ಲೇಪವನ್ನೂ; ಪಟ್ಟ ಪೀತಾಂಬರಗಳನ್ನು ಉಡಬೇ ಕಾದ ನಿನ್ನ ನಡುವಿನಲ್ಲಿ ಈ ನಾರುಮಡಿಯನ್ನೂ, ಧರಿಸಿಕೊಳ್ಳಬಹುದೆ ? ಮೊಲ್ಲೆ ಮಲ್ಲಿಗೆ ಮಂದಾರ ಮೊದಲಾದ ಹೂವುಗಳನ್ನು ಮುಡಿಯಲುಯೋ ಗ್ಯವಾದ ಕೆಶಮಾಶವನ್ನು ಜಡೆಗಟ್ಟಿಸಿಕೊಳ್ಳಬಹುದೆ ? ಕಾಮಸುಖನ ನ್ನು ಪಡೆಯುವ ಈ ಯವನಕಾಲದಲ್ಲಿ ಈ ತಪೋದುಃಖವನ್ನು ೬ರಿಸಬ ಹುದೆ ? ಯಾರನ್ನೋಲಿಸುವುದಕ್ಕಾಗಿ ಇದನ್ನಾಚರಿಸುತ್ತಿರುವೆ ? ಎಂದನು. ಪಾರ್ವತಿಯು.- ಎಲೈ ಯತಿಯೆ ! ಲೋಕೇಶರನಾದ ಪರಮಶಿವನನ್ನು ಮೆಚ್ಚಿಸಿಕೊಳ್ಳುವುದಕ್ಕಾಗಿ ನಾನೀ ತಪಸ್ಸನ್ನು ಮಾಡುತ್ತಿರುವೆನು, ಎಂದ ಳು, ಅದನ್ನು ಕೇಳಿ ಯತಿಯು ಕೇಕೆ ಹಾಕಿ ನಕ್ಕು, ಓಹೋ ! ನಿನು ತಿರಿಕನನ್ನು ! ಕಾಮಧಂನಿಯನ್ನು ! ವಿಷಕಂಠನನ್ನು ! ಚರಾಂಬರನ ನ್ನು ' ಸ್ಮಶಾನವಾಸಿಯನ್ನು ! ಮೋಹಿನಿ ತಪಸ್ಸನ್ನು ಮಾಡುವೆಯಾ ? ಬಲುಚೆನ್ನಾಯಿತು ! ಎಂದು ನಿಂದಿಸಿ ನುಡಿಯಲು, ಪಾರ್ವತಿಯು ಕೆರಳ, “ ಛ? ! ನಿಚನೆ ! ಶಿವದೂಷಣೆಯನ್ನು ಮಾಡುವುದಕ್ಕೆ ಬಂದೆಯಾ ? ತಲಗು ” ಎಂದು ಗರ್ಜಿಸಿ ತಿರಸ್ಕರಿಸಿದಳು. ಶಿವನು ಪಾರ್ವತಿಯ ದೃ ಢಮನಸ್ಸಿಗೆ ಮೆಚ್ಚಿ, ನಿಜರೂಪದಿಂದ ಪ್ರತ್ಯಕ್ಷನಾದನು. ಚಂದ್ರರೇಖೆ ಯನ್ನು ಧರಿಸಿದ ಜಡೆಮುಡಿಯೂ, ಸರ್ಸಕುಂಡಲ ಹಾರ ಕಟಕಗಳೂ, ನಗೆಮೊಗವೂ, ಶೂಲ ಡಮರುಗ ವರಾಭಯ ಹಸ್ತಗಳ, ಮುಕ್ಕಣ್ಣ, ಕೆಂದುಟಿ ಸುಲಿಪಲ್ಲುಗಳೂ, ಕಂಠವಿಷವೂ, ವ್ಯಾಘಗಜಚರವಸನವೂ, ತನ್ನಲ್ಲಿ ಒಪ್ಪಿರಲು, ಕರುಣಾಮಯನಾದ ಮಹಾದೇವನು ಮಹಾತೇಜೋ