ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿ] ಕುಮರ ಘರಕಸೇನ ೩ ದನು. ಬಿರುಗಾಳಿಯಿಂದ ತೂರಿಹೋಗುವ ಹೊಟ್ಟನಂತೆ ಒಂದೊಂದು ಬಾರಿಗೆ ಲಕ್ಷೇಪಕ್ಷ ಸೇನೆಯು ಕೊಚ್ಚಿ ಹೋಗುತ್ತಿದ್ದಿತು. ರಾಕ್ಷಸ ರು ಬಿಟ್ಟ ಬಾಣಗಳನ್ನು ಕುಮಾರನು ಕೊಚ್ಚಿ ಕೊಚ್ಚಿ ಕೆಡಹಲಾಗಿ, ಅ ವುಗಳು ಮಧ್ಯದಲ್ಲಿ ಬೆಟ್ಟ ಬೆಟ್ಟಗಳಂತೆ ಬೆಳೆದು ಅಡ್ಡಗಟ್ಟಿಯಾಗುತ್ತಿದ್ದು ವು, ಕಡೆಕಡೆಗೆ ಕಂದಸಾಮಿಯು ಬಾಣಗಳು ರಾಕ್ಷಸರನ್ನೆಲ್ಲ ಆವರಿಸಿ ಪಂಜರದಲ್ಲಿ ಸಿಕ್ಕಿಸಿಕೊಂಡಂತೆ ಮಾಡಿದುವು, ರಾಕ್ಷಸರ ರಥಗಳು ಆನೆ ಗಳು ಕುದುರೆಗಳು ಕಾಲಾಳ್ಳಳು ಛತ್ರಗಳು ಚಾಮರಗಳು ಧ್ವಜಗಳು ಪತಾಕೆಗಳು ವಾದ್ಯಗಳು ಕಿರೀಟಗಳು ಬಾಹುಪೂರಗಳು ಬತ್ತಳಿಕೆಗಳು ಕತ್ತಿಗಳು ಗದೆಗಳು ಭಲ್ಲೆ ಯಗಳು ಕಡಿತುಂಡಾಗಿ ರಣಾಂಗದಲ್ಲೆಲ್ಲ ಗು ಚೌಗುಡ್ಡೆಯಾಗಿ ಬಿದ್ದು ವು, ರಕ್ತವು ಮಡುಗಟ್ಟಿ ಹರಿಯಹತ್ತಿತು. ಅದರೊ ೪ಗೆ ತಲೆಬುರುಡೆಗಳು, ದೇಹದ ಖಂಡಗಳು, ತೋಳ್ಕೊಡೆಗಳು, ತೇಲಿ ತೇಲಿ ಹೋಗುತ್ತಿದ್ದುವು, ಭೂತ ಬೇತಾಳ ಪೈಶಾಚಾದಿಗಳು ಮಾಂಸವನ್ನು ತಿಂದು ರಕ್ತವನ್ನು ಕುಡಿದು ಕುಣಿದಾಡುತ್ತಿದ್ದು ವು, ರಕ್ಕಸರು ಭೀಕರವಾ ಗಿ ರೋದಿಸುತ್ಯ ದಿಕ್ಕು ದಿಕ್ಕಿಗೆ ಓಡಿದರು, ಪ್ರಮುಖದೈತ್ಯರಲ್ಲಿ ಶಂಖಕ ರ್ಣನ ತಲೆಯೇ ಹಾರಿಯೋಯಿತು. ಶಬಲನು ಎರಡು ತುಂಡಾದನು, ಶರ ಭನು ಮುಂದೆ ಬರುವ ತಾರಕನ ವಾಸಕ್ಕೆ ಯಮಲೋಕದಲ್ಲಿ ಅನುಕೂಲ ವಾಗಿ ಅರಮನೆಯನ್ನು ಕಟ್ಟಿಸುವುದಕ್ಕೆ ಹೋದವನಂತೆ ದೇಹವಳದುಹೋ ದನು. ಹೀಗೆಯೇ ಎಲ್ಲರಿಗೂ ಕುನೂರನು ಭಂಗವನ್ನುಂಟುಮಾಡಿದನು. ತಾರಕನ ಒಡಹುಟ್ಟಿದ ರಾಕ್ಷಸರೆಲ್ಲ ಸತ್ತರು ; ಸೇನಾನಾಯಕರೆಲ್ಲ ಮಡಿದ ರು; ಚತುರಂಗಸೇನೆಯ ಕಡಿವಡೆದಿತು ; ಆಪ್ತ ಬಾಂಧವರೆಲ್ಲ ಅಳಿದರು ; ದೇವಸೇನಾಪತಿಗೆ ಇದಿರಾಗಿ ನಿಲ್ಲುವವರು ತಾರಕನ ಕಡೆಯಲ್ಲಿ ಒಬ್ಬ ರೂ ಇಲ್ಲವಾದರು, ದೇವತೆಗಳ ಕೈಮೇಲಾಯಿತು. ಮಹಾಜಯವಾದ್ಯ ವನ್ನು ಮಾಡಿಕೊಂಡು ದೇವತೆಗಳು ಅಟ್ಟಿಕೊಂಡು ಬರುತ್ತಿರುವುದನ್ನು ಕಾರಕಾಸುರನು ಕಂಡನು, ಕಿಡಿಕಿಡಿಯಾಗಿ ಘುಡುಘುಡಿಸಿದನು. ಕಾ ರುದ್ರನ ಹಣೆಗಣ್ಣಿನ ಬೆಂಕಿಯೇ ಆ ದೈತ್ಯನ ಕಣ್ಣಿನಲ್ಲಿ ಬಂದು ಸೇರಿದಂ ತೆ ಅವು ಕೆಂಪಾಗಿ ಉರಿಯುತ್ತಿದ್ದುವು, ಜಗತ್ತೆಲ್ಲ ತಲ್ಲಣಿಸುವಂತೆ ಮಹಾ ರ್ಭಟವನ್ನು ಮಾಡಿ, ತನ್ನ ಮರೆಹೊಕ್ಕಿರುವ ಸೇನೆಗೆ ಅಭಯವನ್ನು ಕೊ