ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪ ಜೆನ್ನಬಸವೇಶವಿಜಯಂ (wಂಥಳಿ) ಅಭಿಯ ತಾರಕಾಕ್ಷನು ಆ ಶೂರರನ್ನೆಲ್ಲ ಉಚಿತವಚನಗಳಿಂದ ಗೌರವಿಸಿ, ಓಲಗ ವನ್ನು ವಿಸರ್ಜಿಸಿ, ಮೂರು ಪುರಗಳ ಕೋಟೆಗಳ ಕಾವಲಿನವರಿಗೂ ಎ ಚರಿಕೆಯನ್ನು ಹೇಳಿಸಿ, ತಾನು ಅಂತಃಪುರಕ್ಕೆ ಹೋದನು, ಆಳೋರಿಯ ಮೇಲೆ ಕಾವಲಿನವರು ತಮ್ಮ ಟೆಗಳನ್ನು ಹೊಡೆದು, ಕಹಳೆಗಳನ್ನೂದಿ, ಗಟ್ಟಿಯಾಗಿ ಕೂಗಿ ಎಚ್ಚರಿಸಿ, ಪಂಜಗಳನ್ನು ಹತ್ತಿಸಿ ಸುತ್ತುತ್ತ, ನಿದ್ರೆ ಯಿಲ್ಲದೆ ಕಾಯುತ್ತಿದ್ದರು. ಕಾಸಿದ ಮಳಲಗುಡ್ಡೆಗಳು, ಕಾಸಿದ ಎಣ್ಣೆ, ಹುಲ್ಲನ್ನು ತುಂಬಿದ ಚೀಲಗಳು, ದನಿಗಳು, ತೊಲೆಗಳು, ಗುಂಡುಗೋವಿ ಗಳು, ಸುಣ್ಣದ ಚೀಲಗಳು, ಕಲ್ಲು ಗುಂಡುಗಳು, ಕವಣೆಗಳು, ಕತ್ತಿ ಗುರಾಣಿಗಳು, ಭಲ್ಲೆಯಗಳು, ಹಂದಿಯ ತಲೆಗಳು, ಮೊದಲಾದ ಪರಿಕ ರವನ್ನೆಲ್ಲ ಆಳೋರಿಯಮೇಲೆ ಜೋಡಿಸುತ್ತಿದ್ದರು. ಅದ್ಮರಲ್ಲಿ ಬೆಳಗಾಯಿ ತು, ತ್ರಿಪುರವನ್ನು ಲಗ್ಗೆ ಹತ್ತುವುದಕ್ಕೆ ಸನ್ನಾಹಗೊಳ್ಳಬೇಕೆಂದು ದೇ ವಸೇನೆಯಲ್ಲಿ ಡಂಗುರದಿಂದ ಅಪ್ಪಣೆಯಾಯಿತು. ಅತ್ತ ತ್ರಿಪುರದ ಜನರು ಶಿವನು ತಮ್ಮ ಪಟ್ಟಣದಮೇಲೆ ದಂಡೆತ್ತಿ ಬರುವುದನ್ನು ನೋಡಬೇಕೆಂದು ಆಳೇರಿಗಳಮೇಲೆ ಹತ್ತಿ ಸಾಲಾಗಿ ನಿಂತಿದ್ದರು. ರಾಕ್ಷಸಾಂಗನೆಯರು ಇನ್ನು ನಮ್ಮ ಗತಿಯೇನು ? ದೇವತೆಗಳು ನಮ್ಮ ಪಟ್ಟಣವನ್ನು ಸೂರೆ ಮಾಡಿಕೊಳ್ಳುವರಂತೆ! ಎಂದು ಒಬ್ಬರೊಡನೊಬ್ಬರು ಮಾತನಾಡಿಕೊ ಳ್ಳುತ್ತಿದ್ದರು. ಇತ್ತ ಇಂದ್ರಾದಿಕಾಲಕರು ತಮ್ಮ ನಿತ್ಯಕ್ರಿಯೆಗಳನ್ನು ಮುಗಿಸಿಕೊಂಡು, ಶಿವನ ಬಳಿಗೆ ಹೋಗಿ ನಮಸ್ಕರಿಸಿ ಅಪ್ಪಣೆ ಯೇನೆಂ ದು ಬೆಸಗೊಳ್ಳಲು, ಮೊದಲು ತ್ರಿಪುರವನ್ನು ಲಗ್ಗೆ ಹತ್ತುವುದಕ್ಕೆ ಇಂದು ನಿಗೆ ಅಪ್ಪಣೆ ಮಾಡಿದನು. ಆತನು ಐರಾವತದಮೇಲಣ ಅಂಬಾರಿಯ ಸ್ನೇರಿ ತನ್ನ ಸೇನಾಸಮೂಹದೊಡನೆ ಬಿರುದಾವಳಿಗಳನ್ನು ಹೊಗಳಿಸಿಕೊ ಳುತ್ತ ತ್ರಿಪುರದಮೇಲೆ ಸಾಗಿದನು, ಅದರ ಕೋಟೆಗಳು ಪ್ರತಿಸೂನಂ ಡಲಗಳಂತ ಥಳಥಳನೆ ಹೊಳೆಯುತ್ತ ಕ್ಷಣಮಾತ್ರವೂ ನಿಲ್ಲದೆ ಗರಗರನೆ ಸುತ್ತುತ್ತ ನೋಡುವವರನ್ನು ದಿಗ್ವಮೆಗೊಳಿಸುತ್ತಿದ್ದು ವು, ಅವುಗಳ ಸವಿಾಪಕ್ಕೆ ಇಂದ್ರನು ಬಂದು, ತನ್ನ ಕಡೆಯ ಸಿದ್ಧಸಾಧ್ಯವಿದ್ಯಾಧರ ಕಿ ನ್ಯರ ಕಿಂಪುರುಷಾಧಿಗಳಿಗೆಲ್ಲ ಕೋಟೆಯನ್ನು ಲಗ್ಗೆ ಹತ್ತುವುದಕ್ಕೆ ಅಪ್ಪಣೆ ಮಾಡಿದನು. ಕೂಡಲೇ ಹೆಗ್ಗಾಳೆಗಳು ಕೂಗಿದುವು; ಭೇರಿಗಳು ಭೂ