ಪುಟ:ಚೆನ್ನ ಬಸವೇಶವಿಜಯಂ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಕವಿಜಯಂ (Fಂಡಳಿ) [ಅಧ್ಯಾಯ ತಿರುತಿರುಗಿಸಿ ಕಡಿಯುತ್ತಲೂ, ಮುದ್ದರ ಕುಂತ ಮುಸಲಾದಿ ಆಯುಧದ ವರು ಸದೆಬಡಿಯುತ್ತಲೂ, ರಾವುತರು ವಾಷೆಯನ್ನೆಳೆದು ಕುದುರೆಗಳನ್ನು ಸರಿಸಿ, ಭಲ್ಲೆ ಯಗಳಂದಿರಿದು, ಕತ್ತಿಗಳಿಂದ ನೀ೪, ತಲೆಗಳನ್ನು ಹಾರಿ ಸುತ್ತಲೂ, ಮಾವಟಗರು ಕಾಲಿನಿಂದ ವಿಾಂಟಿ, ಅಂಕುಶದಿಂದಿರಿದು, ಪ್ರ ತಿಸೈನ್ಯದಲ್ಲಿ ತಮ್ಮಾನೆಗಳನ್ನು ನುಗ್ಗಿ ನಿ, ಇದಿರಾನೆಯನ್ನು ಒತ್ತರಿಸಿ, ಮೇ ಲಣ ಮಾವುತನನ್ನು ಕೆಡಹಿಸಿ, ಕಾಲ್ ಸಿಕ್ಕಿದವರನ್ನು ಹೊಸಗಿಸಿ, ಮ ಈು ಲಿಗೆ ಬಂದವರನ್ನು ಸುಂಡಿಲಿನಿಂ ಪಿಡಿಸಿ ಬೀಸಾಡಿಸಿ, ಹಿಂದೆ ಬಂದವ ರನ್ನು ಬಾಲದಿಂ ಝಾಡಿಸಿ ಮಲಗಿಸಿ, ಲಯಗೊಳಿಸುತ್ತಲೂ, ರಥಿಕರು ಮುಂಗಡೆಗೆ ರಥಗಳನ್ನು ಸರಿಸಿ ಬಾಣವರ್ಷವನ್ನು ಕರೆದು ನಿಕ್ಕನಾದ ಮಾಡಿ ಏಟುಏಟಿಗೆ ಅನಂತಸ್ತನ್ಯವನ್ನು ಆಹುತಿಗೊಳ್ಳುತ್ತಲೂ ಇದ್ದರು. ಗಿರಿಗಿರಿಗಳು ಸೆಣಸಾಡಿ ನುಚ್ಚುನೂರಾಗಿ ಹರಡಿದಂತೆ ರುಂಡಮುಂಡಾದಿ ಗಳು ರಣಾಂಗಣದಲ್ಲಿ ಚೆಲ್ಲಾಡಿದುವು. ರಕ್ತವು ಹರಿದಿತು. ಅಸ್ಟ್ರಲ್ಲಿ ಸಂ ಧ್ಯಾಕಾಲವಾಗಲು ಸೂನು ಅಸ್ತ್ರಗೊಂಡನು. ತಾವರೆಗಳು ಮೊಗ್ಗಾ ದುವು, ನೈದಿಲುಗಳು ಅರಲಿದುವು. ನಕ್ಷತ್ರಗಳು ಮಿರುಗಿದುವು. ನಿಶಾಂಗ ನೆಯು ಶಿವಸೈನ್ಯಕ್ಕೆ ವಿದ್ಯುಚ್ಛಕ್ತಿಯ ದೀಪಗಳನ್ನಿಟ್ಟು ಬೆಳಕುಗೊಳಿಸಿ, ಈ ರೂಪವಾದ ಸೇವೆಯಿಂದ ಶಿವನನುಗ್ರಹಕ್ಕೆ ಪಾತ್ರಳಾಗಬೇಕೆಂದು ಯೋಚಿಸಿ ರಚಿಸಿದಂತೆ ಅಂತರಿಕ್ಷದ ನಕ್ಷತ್ರ ರಾಶಿಗಳು ತೋರುತ್ತಿದ್ದುವು. ಎರಡು ಸೇನೆಯೂ ತಮ್ಮ ತಮ್ಮ ದಳಪತಿಗಳ ಆಜ್ಞೆಯಮೇಲೆ ಯುದ್ಧ ವನ್ನು ಬಿಟ್ಟು ಅಲ್ಲಲ್ಲೇ ಬೀಡನ್ನು ಬಿಟ್ಟಿತು. ಆನೆ ಕುದುರೆಗಳ ಪಕ್ಷರಕ್ಷೆ ಗಳನ್ನು ಕಳೆದು ಗೂಟಗಳನ್ನು ಹೊಡೆದು ಕಟ್ಟಿದರು. ರಥದ ಕುದುರೆಗ ಳನ್ನು ಬಿಚ್ಚಿದರು. ನೀರನ್ನು ಕುಡಿಸಿದರು.” ಮೇವನ್ನು ಹಾಕಿದರು. ಧನುಸ್ಸಿನ ನಿಂಜೆನಿಯನ್ನು ಇಳಿಸಿದರು, ಲೋಹಕವಚ ಟೊಪ್ಪಿಗೆಗಳನ್ನು ಕಳೆದರು. ಗಾಯಗಳಿಗೆ ಪಟ್ಟಿಯನ್ನು ಅಂಟಿಸಿದರು, ಮುರಿದ ಮಳೆಗ ಳನ್ನು ಕಟ್ಟಿದರು, ಮದ್ದುಗಳನ್ನು ಕುಡಿದು, ಗೂಡಾರಗಳಲ್ಲಿ ದೀಪಗ ಳು ಮಿನುಗುಟ್ಟುತ್ತಿದ್ದುವು, ಭೂಮಿಯಸ್ಕೃಗಲಕ್ಕೂ ಎರಡು ಸೈನ್ಯಗಳೂ ಹರಡಿಕೊಂಡು ಇಳಿದಿದ್ದುವು. ಶಿವನು ತನ್ನ ಸೈನ್ಯದ ಇರುಳುಗಾವಲಿಗೆ ಎಂಟುಕಡೆಗೂ ದಿಕ್ಕಾಲಕರನ್ನು ಅವರ ಸೇನಾಸಮೇತವಾಗಿ ನಿಯಮಿಸಿ