ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6) ಸುಖಾವಹವಲೀಲೆ ܘܰܩ܀ ಅಯ್ಯಾ ! ನೀನು ಚಂಡಾಲನಾದರೇನಾಯ್ತು ? ಹೆದರಬೇಡ; ನಾವು ನಿನ್ನನ್ನು ದಂಡಿಸುವುದಿಲ್ಲ, ಈ ಕಟ್ಟಿಗೆಯ ಕ್ರಯವೇನು? ಹೇಳು, ಎಂದು ಕೇಳಿ, ಅವನು ಕೇಳಿದಂತೆ ಹಾಗದಕಾಸನ್ನು ಕೊಟ್ಟು ತೆಗೆದುಕೊಂಡು, ಬೆಂಕಿಯನ್ನು ತರಿಸಿಕೊಟ್ಟು, ಅದರಲ್ಲಿ ಕಾಸಿಕೊಳ್ಳೆಂದು ಹೇಳಲು, ಹೊ ಲೆಯನು ಪರಮಾತ್ಮ ಪಟ್ಟು ಬೆಂಕಿಯಿಂದ ಕಾನಿ ಸೇಕಮಾಡಿಕೊಂಡ ನು, ಆಗ ಅವನ ಹೊಟ್ಟೆಯ ಹಸಿವು ಹೆಚ್ಚಾಯಿತು, ಅದರಿಂದ ನರಳುತ್ತ ಅನ್ನವನ್ನು ಬೇಡಿದನು. ಬ್ರಾಹ್ಮಣನು ಮರುಗಿ, ಒಳಕ್ಕೆ ಹೋಗಿ, ಅನ್ನ ತುಪ್ಪ ತೊವೆ ಕಾಯಿಪಲ್ಯ ಉಪ್ಪಿನಕಾಯಿಗಳನ್ನೆಲ್ಲ ಒಂದು ಹೊಸವಕ್ಕರಿ ಯಲ್ಲಿ ಬಡಿಸಿ ತಂದು ಕೊಡಿಸಿದನು. ಅದನ್ನು ಚಂಡಾನು ಉಂಡು ತೃ ಪ್ತಿಪಟ್ಟು, ಉಳಿದನ್ನವನ್ನೂ ಕಟ್ಟಿಗೆಯ ಮಾರಿದ ಕ್ರಯವನ್ನೂ ಹೆಂಡತಿ ಗೆ ತಂದುಕೊಟ್ಟು, ಅನ್ನವನ್ನಿಕ್ಕಿದ ಬ್ರಾಹ್ಮಣನನ್ನು ಕುರಿತು ಅವಳೊಡ ನೆ ಕೊಂಡಾಡುತ್ತಿದ್ದನು, ಅತ್ತ ಗಂಗಾವತಿ ಪಟ್ಟಣಕ್ಕೆ ಬಂದುಯೋಜ ನದಲ್ಲಿ ಜಯಂತಿಪುರವೆಂಬ ಊರಿದ್ದಿ ತು, ಅದರಲ್ಲಿರುವ ಸಂಜ್ಞನೆಂಬ ಬ್ರಾ ಹ್ಮಣನ ಮಗನನ್ನು ಒಂದು ಬ್ರಹ್ಮರಾಕ್ಷಸನು ಹಿಡಿದುಕೊಂಡಿದ್ದಿ ತು. ಯಾವ ಯಾವ ಮಂತ್ರತಂತ್ಕಷಧಗಳಿಂದಲೂ ಬಿಡದೆ ಇದ್ದಿತು. ಈ ವ ರಮಾನವನ್ನು ಗಂಗಾವತೀಪಟ್ಟಣದ ಅನಂತಭಟ್ಟನು ಕೇಳಿ, ಅಲ್ಲಿಗೆ ಬ ರಲು, ಹುಡುಗನ ಮೈಮೇಲಿದ್ದ ಬ್ರಹ್ಮರಾಕ್ಷಸನು ಭಯಭಕ್ತಿಯಿಂದ ಈತನಿಗೆ ಕೈಮುಗಿದಿತು, ನಿನಾರು ? ಅದೇಕೆ ಕೈಮುಗಿದೆ? ಎಂದು ಭ ಟ್ಟನು ಕೇಳಲು, C ಬ್ರಾಹ್ಮಣೋತ್ತಮನೆ ! ನಾನು ಹಿಡಿದುಕೊಂಡಿರುವ ಈಹುಡುಗನೂ ನಾನೂ ಪೂರಜನ್ಮದಲ್ಲಿ ಜತೆಯಾಗಿಓದುತ್ತಿದ್ದೆವು; ಇವನಿ ಗಿಂತಲೂ ನನ್ನಲ್ಲಿ ವಿದ್ಯೆಯು ಹೆಚ್ಚಾಗಲು, ಇವನು ಅದನ್ನು ನೋಡಿ ಸೈರಿ ಸದೆ, ನನ್ನ ತಲೆಯಮೇಲೆ ಕಲ್ಲನ್ನೆತ್ತಿ ಹಾಕಿ ಕೊಂದನು; ಅದುಕಾರಣ ಈ ದುರಾತ್ನನ್ನು ನಾನು ಹಿಡಿದು ಕೊಲ್ಲಬೇಕೆಂದಿರುವೆನು ; ಆದರೆ ನೀನು ಹೊಲೆಯನಿಗೆ ಅನ್ನದಾನವನ್ನು ಮಾಡಿರುವ ಪುಣ್ಯಫಲವನ್ನು ನನಗೆ ಕೊ ಟ್ಟು ಬಿಟ್ಟರೆ ಈತನನ್ನು ಬಿಟ್ಟು ಹೋಗುವೆನು ” ಎಂದು ಬ್ರಹ್ಮರಾಕ್ಷಸ ನು ನುಡಿದನು. ತಂದೆಯಾದ ಸರನು ಅದನ್ನು ಕೇ೪, ಹೆಂಡತಿಯಸ ಮೇತನಾಗಿ ಅನಂತಭಟ್ಟನ ಪಾವಕ್ಕೆ ಬಿದ್ದು, ಬ್ರಾಹ್ಮಣೋ ಮನೆ | 41