ܩ ಚನ್ನ ಬಸವೇಕೆವಿಜಿಯಂ (ಕಾಂಡ ೫) [ಅಧ್ಯಾಯ ರೂ ತನ್ನೊಡೆಯನು ಹೇಳಿದುದಕ್ಕೆ ೧ ಕ್ಕೆ ನೂರಾಗಿ ಈ ಪಾತಕಿಗಳನ್ನು ಶಿಕ್ಷಿಸುತ್ತ, ನಾನಾನಾಯಕನರಕಗಳಲ್ಲಿ ಕೆಡಹಿ, ಹಿಂಸೆಗೊಳಿಸಿ, ಬಹು ಕಾಲ ನರಲಿಸುತ್ತಿರುವರು ಎಂದು ಮುನಿಪತಿಯು ನುಡಿಯಲು, ಸಾನಂ ದಗಕಶನು ಎಲ್ಲವನ್ನೂ ಕೇಳಿ, ಮನದಲ್ಲಿ ಬಹಳವಾಗಿ ನೊಂದು, “ ಶಿವ ಶಿವಾ ! ಮುಂದಾಗುವುದನ್ನು ಕಾಣದೆ ನರರು ಅಕೃತ್ಯವನ್ನು ಮಾಡಿದರೆ, ಅವರನ್ನು ಯಮುಧರನು ಇಷ್ಟೊಂದು ಸರಿಯಾಗಿ ಹಿಂಸಿಸಬಹುದೆ ? ಅ ! ಆ ಪ್ರಾಣಿಗಳು ಎಷ್ಟು ನೊಂದುಕೊಳ್ಳುತ್ತಿರುವರೋ ! ೨” ಎಂ ದು ಪರಿತಪಿಸಿ, “ ಓ ಪರಶಿವನೇ ! ನೀವು ಇಂಥವರನ್ನೆಲ್ಲ ಹಿಂಸೆಗೆ ಒಳ ಗುವಾಡಿ ನೋಡಿಕೊಂಡು ಸುಮ್ಮನಿರಬಹುದೆ ? ನೀವೇ ತಟಸ್ಥರಾದ ಬ ೪ಕ, ಇನ್ನು ಆ ಬಡವರನ್ನು ಉದ್ಧರಿಸುವರಾರು ? ಸರದಯಾಪರ, ಶಂ ಕರ, ಸರಗತ, ಎಂಬ ಬಿರುದು 'ನಿಮಗಲ್ಲದೆ ಮತ್ತಾರಿಗಿರುವುದು ? ಕೆ ರದ ಕಾಲಿಂದೊದೆದರೂ, ಬಿಲ್ಲಿನಿಂದ ಹೊಡೆದರೂ, ಕಲ್ಲಿನಿಂದ ಇಟ್ಟರೂ, ಅವರನ್ನೆಲ್ಲ ಮೆಚ್ಚಿ ಕೈಲಾಸಕ್ಕೆ ಕರೆದುಕೊಂಡು ಹೋದ ನಿಮ್ಮ ದಯೆಯು ಈ ದೀನಪ್ರಾಣಿಗಳ ಮೇಲೆ ಅದೇಕೆ ಪ್ರಸರಿಸಲಿಲ್ಲ? ಹರಹರಾ ! ನಮಕ್ಕಿ ವಾಯ ! " ಎಂದು ಪರಿಪರಿಯಾಗಿ ಪ್ರಲಾಪಿಸಿ, ಇದನ್ನು ಕೇಳಿಕೊಂಡು ಸುಮ್ಮನಿರುವುದು ಸರಿಯಲ್ಲವಾದುದರಿಂದ ಈಗಳೇ ಯಮಪುರಿಗೆ ಹೋಗಿ, ಅಲ್ಲಿ ಯಾತನೆಗೊಳಗಾಗಿರುವವರನ್ನೆಲ್ಲಾ ಶಿವಲೋಕಕ್ಕೆ ಕರೆದುಕೊಂಡು ಹೋಗುವುದೇ ಕರವ್ಯವೆಂದು ಯೋಚಿಸಿ, ಥಟ್ಟನೆದ್ದನು, ಬಳಿಯಲ್ಲಿದ್ದ ಮಮ್ಮಿಗಳೆಲ್ಲರೂ ಆತನೊಡನೆಯೆ ಎದ್ದ ರು. ಶಿವದತ್ತವಾದ ಪ್ರಪ್ಪಕದಲ್ಲಿ ಎ ಲ್ಲರೊಡನೆ ಕುಳಿತು ಸಾನಂದಗಣೇಶನು ಹೊರಟನು. ಮುಂದೆ ಕಹಳಗ ಳು ಭೇರಿಗಳು ಧ್ವನಿಮಾಡಿದುವು. ಯಮಪುರದ ಸವಿಾಪಕ್ಕೆ ಹೋಗುವು ದರೊಳಗಾಗಿ ಚಾರನೊಬ್ಬನು ಓಡಿಹೋಗಿ, ಮಹಾ ತೇಜಸ್ವಿಯಾದ ಸಾನಂ ದಗಣಾಧೀಶ್ವರನು ಇಲ್ಲಿಗೆ ದಯಮಾಡಿಸುತ್ತಿರುವನೆಂದು ತನ್ನ ರಾಜನಾದ ಅಂತಕನೊಡನೆ ಬಿನ್ನೆ ಸಿದನು. ಯಮನು ಝಗ್ಗನೆದ್ದು, ಪುರವೀಧಿಗಳನ ಲಂಕರಿಸುವಂತೆ ಅಪ್ಪಣೆವಾಡಿ, ಪರಿವಾರದೊಡನೆ ಇದಿರ್ಗೊಳ್ಳುವುದಕ್ಕಾಗಿ ಪಟ್ಟಣದ ಹೊರಬಾಗಿಲಿಗೆ ಬಂದನು, ಅತ್ತ ಗಣಾಧೀಶರನು ಪುರದ ಮ ಹಾದ್ವಾರದಲ್ಲಿ ವಿಮಾನದಿಂದಿಳಿದು, ಹಾವುಗೆಗಳನ್ನು ಮೆಟ್ಟ ಬನ್ನಿ
ಪುಟ:ಚೆನ್ನ ಬಸವೇಶವಿಜಯಂ.djvu/೩೭೧
ಗೋಚರ