ಪುಟ:ಚೆನ್ನ ಬಸವೇಶವಿಜಯಂ.djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೀರಶೈವಕರಣರ ಚರಿತ್ರ ನುಡಿಸಿದನು. ಅನಂತರ ತಂದೆಯು ತನಗೆ ಮಾಡಬೇಕೆಂದಿದ್ದ ಉಪನಯ ವನ್ನು ತಿರಸ್ಕರಿಸಿ, ತನ್ನ ಅಕ್ಕನೊಡನೆ ಕೂಡಿ ಕಲ್ಯಾಣಕ್ಕೆ ಬಂದು, ಅಲ್ಲಿನ ಮಂತ್ರಿಯಾದ ಬಲದೇವನ ಮಗಳನ್ನು ಮದುವೆಯಾಗಿ, ಮಾವನು ಸತ್ತ ಬಳಿಕ ಅವನ ಸ್ಥಾನದಲ್ಲಿ ತಾನೇ ಮಂತ್ರಿಯಾಗಿ ನಿಂತು, ಬಿಜ್ಜಳನ ಸಭೆ ಯಲ್ಲಿ ದೇವಲಿಪಿಯನ್ನೋದಿ, ಗದ್ದುಗೆಯ ಕೆಳಗಿದ್ದ ಅರುವತ್ತು ಕೋಟೆಯ ಹೊನ್ನನ್ನು ತೆಗೆಸಿ, ರಾಜನಿಗೆ ಕೊಟ್ಟನು. ತನ್ನ ಮನೆಗೆ ನುಗ್ಗಿದ ಕಳ್ಳರ ನ್ನು ಲಿಂಗವಂತರನ್ನಾಗಿಯೇ ಮಾಡಿದನು. ಜೋಳವನ್ನು ಮುತ್ತನ್ನಾಗಿ ಮಾ ಡಿ ಜಂಗಮರಿಗಿತ್ತು, ಕನ್ನಡಿಯಲ್ಲಿ ಹಣೆಗಣ್ಣನ್ನು ತೋರಿಸಿಯೂ, ಲೆಕ್ಕ ದ ಒಪ್ಪಿತವನ್ನು ಮಾಡುವ ಸಮಯದಲ್ಲಿ ೧೧ ದಿನಗಳವರೆಗೆ ಸೂನನ್ನು ತಡೆದೂ, ಗೊಲ್ಲತಿಯ ಮಜ್ಜಿಗೆಯ ಗೋಡೆಯನ್ನು ಹಿಡಿದೂ, ಮಂಚಣ್ಣನ ಚಾಡಿಯಿಂದ ರಾಜನಿಗೆ ನಾನಾಸಂದರ್ಭಗಳಲ್ಲಿ ಉಂಟಾಗಿದ್ದ ಸಂಶಯಗಳ ನೆಲ್ಲ ಬಗೆಬಗೆಯಾಗಿ ಪರಿಹರಿಸಿಯೂ, ಗಡಿಗೆಯೊಳಗಣ ನೀರನ್ನು ಗಟ್ಟಿ ಮಾಡಿಯ, ಶಿವನಾಗಯ್ಯನ ಬೆರಲಿನಿ ಹಾಲನ್ನು ಕರೆದೂ, ಕಣಗಿ ಲೆಯ ಹೂವನ್ನು ಸಂಪಗೆಹೂವನ್ನಾಗಿ ಮಾಡಿಯೂ, ತನ್ನ ದೇಹವನ್ನು ಕಚ್ಚಿ ಸತ್ತ ಹಾವಿಗೆ ಪ್ರಾಣವನ್ನು ಕೊಟ್ಟೂ, ಚಿತ್ರದಲ್ಲಿ ಬರೆದಿದ್ದ ಹಲಸಿನ ಹಣ್ಣನ್ನು ನಿಜವಾದ ಹಣ್ಣನ್ನಾಗಿ ಮಾಡಿಯೂ, ಹೆಂಡವನ್ನು ಆಮೃತವ ನ್ನು ಮಾಡಿಯೂ, ವಿಷವನ್ನು ಅಮೃತದಂತೆ ಮಾಡಿಯೂ, ದೊರೆಯ ರಾ ಣಿವಾಸದವರನ್ನೆಲ್ಲ ಜಂಗಮರನ್ನಾಗಿ ಮಾಡಿಯೂ, ತೊಗರಿಯನ್ನು ರತ್ನಗಳ ನ್ನು ಮಾಡಿಯೂ, ಜಂಗಮಕ್ಕೆ ತನ್ನ ಹೆಂಡತಿಯನ್ನು ಕೊಟ್ಟೂ, ಜಂಗಮ ನೊಡನೆ ತನ್ನ ಪ್ರಾಣವನ್ನು ಬಿಟ್ಟೂ, ಆಗ್ಗಣಿಯ ಹೊನ್ನಯ್ಯನ ಕುಪ್ಪವನ್ನು ಪರಿಹರಿಸಿಯ, ಹೀಗೆ ಬಸವೇಶನು ನಾನಾವಿಧವಾದ ಪವಾಡಗಳನ್ನು ಆಪ ರಿಮಿತವಾಗಿ ನಡೆಯಿಸಿರುವನು. ಅವುಗಳನ್ನೆಲ್ಲ ಇಷ್ಟೆಂದು ಹೇಳುವುದಕ್ಕೆ ನನಗೆ ಅಸಾಧ್ಯವು, ಎಲೆ ಸಿದ್ದರಾಮೇಶನೆ, ಪೂರದಲ್ಲಿ ಅಲ್ಲಮಪ್ರಭುವು ನಿ ರಾಯನೆಂಬ ಗಣನಾಥನಿಗೂ ನಿರಹಂಕಾರಸುಜ್ಞಾನಿಗೂ ಮಗನಾಗಿ ಅವತ ರಿಗೆ, ಮಾಯೆಯನ್ನು ಜರೆದು ಬಂದು, ಅನಿಮಿಫಯ್ಯನ ಕೈಗೆ ನಂದೀಶನು ಕೊಟ್ಟಿದ್ದ ಲಿಂಗವನ್ನು ತೆಗೆದು ಕೊಂಡು, ಗೊಗ್ಗಯ್ಯ ಮುಕ್ಕಾಯಿಗಳ ನ್ನು ಲಿಂಗಾಂಗಸಾಮರಸ್ಯಬೋಧೆಯಿಂದ ಮುಕ್ತರನ್ನು ಮಾಡಿದನು. ಅ