] ರವಶರಣರ ಚರಿತ್ರೆ ರುವಿಲ್ಲದೆ ಲಿಂಗವನ್ನು ಸಂಪಾದಿಸಿ ತಂದಿರುವೆ ! ನಿನ್ನಾಟವೇನು ಸುಮಾ ನೃವೆ ? ನಿಮ್ಮಿಬ್ಬರ ಮುಖವನ್ನೂ ನೋಡಬಾರದು, ಎನ್ನಲು, ಅಲ್ಲಮ ನು- ನಾನು ಗುರುವನ್ನು ಬಿಟ್ಟು ಲಿಂಗವನ್ನು ತಂದಿಲ್ಲ ; ಈ ಲಿಂಗದಲ್ಲೇ ಗುರುವಿನ ಚಿತ್ತಳೆಯೂ ಅಡಕವಾಗಿದೆ ನೋಡು, ಎಂದನು. ಮತ್ತೂ ದೀ ತೀಮಶಂಭುವಾದ ಬಸವೇಶನು ಗುರುವಾಗಿಯೂ, ನೀನು ಪರಮಗುರು ವಾಗಿಯೂ ಇರುವಾಗ, ಗುರುವನ್ನು ಬಿಟ್ಟುದು ಹೇಗೆ ? ಎನ್ನಲು, ಅದ ನ್ನು ಕೇಳಿದ ಶರಣರೆಲ್ಲರೂ ಚಕಿತರಾಗಿ ಆನಂದಗೊಂಡರು. ಆಗ ಸಿದ್ದರಾ ಮನು ಬೆರಗಾಗಿ, ಪ್ರಭುವಿನ ಪಾದಕ್ಕೆ ಬಿದ್ದು, ಮುಂದೆ ನನ್ನ ಗತಿಯೇನೆಂ ದು ಕೇಳಿದನು. ನೀನು ಇಮ್ಮಲಿಂಗವನ್ನು ಪಡೆದುಕೊಂಡಲ್ಲದೆ ಬೇರೆ ಮಾರ್ಗವಿಲ್ಲವೆಂದು ಪ್ರಭುವು ಹೇಳಲು, ನನಗೆ ಇಹ್ಮಲಿಂಗದೀಕ್ಷೆಯನ್ನು ಮಾಡುವರಾರೆಂದು ಬೆಸಗೊಂಡನು. ಪ್ರಭುವಾದರೂ- ಈಬಸವೇಶ ಮೊ ದಲಾದ ಏಳುನೂರೆಪ್ಪತ್ತಮರಗಣಂಗಳು ಭೂಮಿಯಲ್ಲಿ ವೀರಶೈವಮಾರ್ಗ ವನ್ನುದ್ದರಿಸುವುದಕ್ಕಾಗಿ ಬಂದಿರುವರು; ಇವರಿಗೆ ಪ್ರಾಣಲಿಂಗಸಂಬಂಧದ ಪಟ್ಟಅತತ್ಯವನ್ನು ಬೋಧಿಸುವುದಕ್ಕಾಗಿ ಶಿವನ ಚಿತ್ತಳಾಕುಮಾರನೇ ಈ ಚೆನ್ನಬಸವೇಶನಾಗಿ ಅವತರಿಸಿರುವನು. ಈತನೇ ನಿನಗೆ ಇಷ್ಟಲಿಂಗ ವನ್ನು ಅನುಗ್ರಹಿಸುವನು, ಎಂದು ನುಡಿದನು. ಸಿದ್ದರಾಮೇಶನು ಹರ್ಷದಿಂ ದೆದ್ದು ಚೆನ್ನಬಸವೆಶನಿಗೆ ದೀರ್ಘದಂಡವಾಗಿ ನಮಸ್ಕರಿಸಿ,.- ಎಲೈ ಗುರುವೆ, ಜೀವರಾಶಿಗಳಲ್ಲಿ ತಾರತಮ್ಯಗಳನ್ನು ತಾವು ಸೂಚಿಸಿದಿರ; ಆ ಜೀವಭೇ ದಗಳನ, ಮನ.ಸ್ಮಜನ್ಮದ ವಿಂಡಲಕ್ಷಣ ಮೊದಲಾದುವನ್ನೂ ನನ್ನ ಮೇಲೆ ಕರುಣವಿಟ್ಟು ನಿರೂಪಿಸಿ, ಇಷ್ಟಲಿಂಗದೀಕ್ಷೆಯನ್ನಿತ್ತು ಕೃತಾ ರ್ಥನನ್ನು ಮಾಡಬೇಕೆಂದು ಪ್ರಾರ್ಥಿಸಿದನೆಂಬಿಲ್ಲಿಗೆ ನಾಲ್ಕನೆ ಅಧ್ಯಾಯವು ಸಂಪೂರ್ಣವು. ೫ ನೆ ಅಧ್ಯಯವು. ವಿ : ಡೆ ೬ ತಿ ಕ ರ ೧ ಹ ಸು ಗೆ ಗ ಳು . ಎಲೆ ಸಿದ್ಧರಾಮೇಶನೆ ಕೇಳು.- ಹಿಂದೆ ನಾನು ವಿವರಿಸಿದಂತೆ ಸ ತ್ಯಾಚಾರಿಗಳು ಸ್ವರ್ಗವನ್ನನುಭವಿಸಿ, ಪಾವಿಗಳು ಯಮಲೋಕದಲ್ಲಿ
ಪುಟ:ಚೆನ್ನ ಬಸವೇಶವಿಜಯಂ.djvu/೩೯೦
ಗೋಚರ