ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಸವೇಳವಿಜಯಂ [ಅಧ್ಯಯ ಸಾಧನೆಯನ್ನು ಮಾಡಿ ರಾಜನ ಭಂಡಾರಕ್ಕೆ ಹೇರಳವಾದ ದ್ರವ್ಯವನ್ನು ಕೂಡಿಸುವುದರಲ್ಲಿ ಸಮರ್ಥರಾದ ಮಂತ್ರಿಗಳು (ಬಸವೇಶಹೊರತಾಗಿ) ಎ ಡಬಲಗಳಲ್ಲಿ ಒಪ್ಪುತ್ತಿದ್ದರು. ದಿನ ವರ್ಗ ಮಾಸ ವರ್ಷಗಳ ಲೆಕ್ಕವನ್ನು ಕನ್ನಡಿಯಂತೆ ಚೊಕ್ಕಟವಾಗಿಟ್ಟುಕೊಂಡಿರುವ ಗಟ್ಟಿಗರಾದ ಕೇ ಣಿಕ ರೂ, ವೇದವೇದಾಂತ ಪುರಾಣಾಗು ದರ್ಶನಾದಿಗಳಲ್ಲೆಲ್ಲ ಘನತರಮಾಂ ಡಿತ್ಯವನ್ನು ಸಂಪಾದಿಸಿರುವ ವಿಬುಧಸಮೂಹವೂ, ಚರಕ ಸುಶ್ರುತ ಮೊ ದಲಾದ ವೈದ್ಯ ವಿದ್ಯೆಯಲ್ಲಿ ಪರಿಣತಪಂಡಿತರೆನಿಸಿದ ವೈದ್ಯಶಿಖಾಮಣಿಗಳೂ, ನಾನಾ ಚಿತ್ರ ಧ್ವನಿ ಕಾವ್ಯಗಳನ್ನು ಸರಸವಾಗಿಯೂ ತ್ವರಿತವಾಗಿಯೂ ವಿರಚಿಸುವ ಅದ್ಭುತವಾದ ಸಮಸ್ಯಾಪೂರಣಗಳನ್ನು ಮಾಡುವ ಕವಿಶ್ರೀ ವ್ಯರೂ, ಪರಸೈನ್ಯಕ್ಕೆ ಕಾಲನಂತೆ ಭಯಂಕರರಾದ ಶೂರದಳಪತಿಗಳ, ಜಾಣ್ಣುಡಿಗಳಿಂದ ರಾಜನ ವಿಚಿತ್ರಹರಿತವನ್ನೂ ಸದ್ದು ಣಾತಿಶಯವನ್ನೂ ಪ್ರಾಸ ಛಂದೋಬದ್ದವಾಗಿ ಕವಿತೆಯೆಸಗಿ ಕೈಯೆತ್ತಿ ಉದ್ಯೋ ಸುತ್ತಿ ರುವ ಸ್ತುತಿಪಾಠಕರುಗಳ, ಸಾಂದಗ್ಗಲಾನಣ್ಣವಿಭ ಮಾತಿರಯದಿಂದ ಸಭಿಕರ ಮನಸ್ಸನ್ನೆಲ್ಲ ಸೂರೆಗೊಳ್ಳುತ್ತ, ಇಂಪಾದ ಗಾನದಿಂದಲೂ, ಚಪ ಲತರವಾದ ನರ್ತನದಿಂದಲೂ, ಚತುರತರವಾದ ಅಭಿನಯದಿಂದ , ರಸಜ್ಞರ ತಲೆದೂಗಿಸುತ್ತ ವಿದ್ಯುಲ್ಲತೆಗಳಂತೆ ಕಾಂತಿಮಯರಾಗಿ ಹೊಳೆ ಯುತ್ತಿರುವ ವಾರಾಂಗನೆಯರೂ, ನಾನಾಬಿರುದಾಂಕಗಳ ಮಾದಕಟಕವ ನ್ನು ಧರಿಸಿರುವ ಮಾವುತರಾಹುತರುಗಳೂ, ಇವರೇ ಮೊದಲಾದ ಅಂಗನೆ ಲ್ಲವೂ ಸಭೆಯಲ್ಲಿ ಪರಿಪೂರ್ಣವಾಗಿದ್ದಿತು. 'ಜೀಯಾ ! ಈತನು ಜೋಳ ರಾಜನು, ಈತನು ಪಾಂಡ್ಯ, ಈತನು ಮಾಗಧನು, ಈತನು ಬರ್ಬರು, ಇದು ಮಂತ್ರಿಸಮೂಹ, ಇದು ದಳಪತಿಸಮೂಹ, ಚಿಸು, ರ್ಪಾ ಕು ! ಬಹುಪರಾಕು ! !” ಎಂದು ಮೊದಲಾಗಿ ಕಂಚುಕಿಗಳು ಮಾಡು ತಿರುವ ಉದ್ಯೋಪವು ತುಂಬಿಕೊಂಡಿದ್ದಿತು. ಆ ಸಮಯದಲ್ಲಿ ನೆರೆದಿದ್ದ ಜನಸಂದಣಿಯಲ್ಲಿ ಚಾಡಿಕೋರರಲ್ಲಿ ಅಗ್ರಗಣ್ಯನಾದ ಮಂಚಣ್ಣನು ದಾರಿಬಿ ಡಿಸಿಕೊಂಡು ಒಳನುಗ್ಗಿ ರಾಜಾಧಿರಾಜರಿಗೆ ಕೈಯೆತ್ತಿ ಮುಗಿದು, ನಿಷ್ಕಾಸ ನದ ಪಕ್ಕಕ್ಕೆ ಬಂದು ತಲೆವಾಗಿ, ಬಾಯಜ್ಞ ಅತಿವಿನಯದಿಂದ ನಿಂತು, ದೊರೆಯ ಕಿವಿಯಲ್ಲಿ ಅವನಿಗೆ ನಂಬುಗೆ ಹುಟ್ಟುವಂತೆ ಹೀಗೆ ಚಾಡಿ ಹೇಳಿ