ಪುಟ:ಚೆಲುವು.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವ ದೇವಿ ವಿಂಧ್ಯಪರ್ವತದ ಮಲೆಗಳ ಮಾಲೆ ಸುತ್ತ ಸಾಗರದ ಅಲೆಯ ಮಾಲೆಯ ತೆರದೆ ಬಳೆದು, ಚೆಂದದಲಿ ನೋಟವೋಡುವವರೆಗೆ ಹರಿದು, ಆಗಸದ ಅಂಚನೆಲ್ಲೆಡೆಯ ಮುಟ್ಟಿಹುದು ; ಬಣ್ಣ ಬಣ್ಣದ ಎಲೆಯ ಸೊಗಸಿನಲಿ ವನವು ಕಣ್ಣ ತಣಿಸುತಲಿಹುದು ; ಸೋಲುತಿದೆ ಮನವು. ನೇಸರಿಳಿದಿಹನು ಬಾಂದಳದ ಪಡುಗಡೆಗೆ, ಈ ಪುಟವಿಡಿದ ಹೊಂದಬೈವೊಲು ತೊಳಗುತಿಹನು; ಮಾಸಲಾಯ್ಕೆಲ್ಲ ಜಸವಿಲ್ಲೆಂದು ಕಣ್ಣ ಮಿಟಿಕಿಸದೆ ನಭವು ಅವನನೆ ನೋಡುತಿಹುದು ; ಕಟ್ಟಕಡೆಯಾ ಗಿರಿಯ ಆಡುಮದ ಕೂಗು ಮುಟ್ಟಿತನನನು ; ಅದನ್ನು ಸೇರುವನು ಬೇಗ ಸೇರುವನು; ಸೇರಿ ಮರೆಯುವನು ಇನಿತರೊಳೆ ; - ಆಮುನ್ನ ಜಗವ ಬೆಳಕಿಂದ ತುಂಬಿಹನು ; ನೂರು ವರ್ಣದ ಎಲೆಯ ಸೊಬಗೆಸೆವ ವನಕೆ ಪ್ರೇಮಪೂರಿತ ಹಾಸವನು ಸೂಸುತಿಹನು. ಕಣ್ಣಿನಾಸೆಯ ತೀವಿ ಬಗೆಯ ಮಗನುಗಿಸಿ ಎನ್ನೊಳಗ ಸೋಕಿಹುದು ಸಂಜೆಯಾ ಸೊಗಸು.