ಪುಟ:ಚೆಲುವು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾಡುಹೂಗಳು ಕಲ್ಲು ಮಣ್ಣು ಹೆಂಟೆ ಮುಳ್ಳು

  • ಅವುಗಳ ನಡುವೆ ಇದೆಕೋ ರತ್ನ ; ಮುಳ್ಳು ಮಣ್ಣು ನೊರಜಿನ ನಡುವೆ

ಇಕೊ ಹೊಚ್ಚ ಹೊಸ ಹೊನ್ನಕ್ಷತ್ರ. ಇದೆಕೊ ದಾರಿಯ ಬದಿಯಲ್ಲಿ ಹುಲ್ಲಲಿ ವಿಷ್ಟು ಕ್ರಾಂತಿಯ ಪರಿಮಿತ ನೀಲ; ಇಲ್ಲಿ ಬೇರೆ ಯಾವುದೊ ಬಹು ನೀಲದ ಮಡಲಲಿ ಹಳದಿಯ ಕುಸುರಿಯ ಲೋಲ, ರಾಗಿಯ ಪೈರಿನ ಮಧ್ಯದಿ ಮುಳ್ಳಲಿ ಕೊಂಬಿನ ಸುಂದರ ಇಕೊ ಗುಬ್ಬಚ್ಚಿ ; ಬದುವಿನ ಗಿಡದಲಿ ಊದಾ ಬಣ್ಣದ ಚಳತುಂಬಿನ ಚೆಲುಹೂವಿನ ಕುಚ್ಚು, ಹೊಲದಲಿ ಹೊಂಬಣ್ಣದ ಹೊಳೆ ಹರಿಸಿ ದತ್ತೂರಿ; ಆರಂಬದ ಕರೆ ಕರೆ; ನನ್ನ ವೊಲಲೆಯುವ ಸೋಂಬರ ಮೆಚ್ಚು; ಇಲ್ಲೆ ಇದರ ಸೋದರ ನೇಸರಮರಿ;