ಪುಟ:ಚೆಲುವು.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುನ್ನುಡಿ ಈ ಕವಿತೆಗಳ ಗುಚ್ಚದಲ್ಲಿ ಸೇರಿರುವ ಅಂಗಾಮಿಪ್ರೇಮ ಗೀತವು ಅಸ್ಸಾಮ್‌ದೇಶದ ಅಂಗಾಮಿನಾಗರೆಂಬ ಕಾಡು ಜನರ ಒಂದು ಗೀತದ ಅನುವಾದ. ಈಗ ಇಂಡಿಯಾದೇಶದ ಸೆನ್ಸಸ್ ಕಮಿಷನರಾಗಿರುವ ಡಾಕ್ಟರ್ ಹಟನ್‌ರವರು ಈ ಜನರ ವಿಚಾರವಾಗಿ ತಾವು ಬರೆದಿರುವ ಒಂದು ಗ್ರಂಥದಲ್ಲಿ ಆ ಗೀತವನ್ನು ಇಂಗ್ಲೀಷಿಗೆ ಭಾಷಾಂತರಮಾಡಿದಾರೆ. ಅದನ್ನು ಓದಿದಾಗ ನನಗೆ ಕಾಡಿನವರೆಂಬ ಜನರ ಮನಸ್ಸು ಎಷ್ಟು ಸಂಸ್ಕೃತವಾಗಿರಬಹುದೆಂದು ತೋರಿ ಅನುವಾದದಲ್ಲಿ ಅರ್ಥ ವನ್ನು ಕೆಡಿಸಿಯೇನೆಂಬ ಭೀತಿಯಿದ್ದರೂ ಅದು ನಮ್ಮ ಜನಕ್ಕೆ ತಿಳಿದಿರಬೇಕೆಂಬ ಉದ್ದೇಶದಿಂದ ಅದನ್ನು ಕನ್ನಡದಲ್ಲಿ ಬರೆದಿದ್ದೇನೆ. ಗೀತದಲ್ಲಿ ಬರುವ ಸೊರೊಳು ಎನ್ನುವುದು ಒಂದು ಸ್ವಳ; ಕೆನ್ನೂರು ಎನ್ನುವುದು ಮೂಲದ ಕೆಟ್ಟೂರು ಎನ್ನುವುದಕ್ಕೆ ಭಾಷಾಂತರದಲ್ಲಿ ಸಂಭವಿಸಿದ ರೂಪಾಂತರ. ಬೆಂಗಳೂರು, ಪ್ರಜೋತ್ಪತ್ತಿ ಸಂli | ಕಾರ್ತಿಕ ಬಹುಳ ತ್ರಯೋದಶಿ. | ಶ್ರೀನಿವಾಸ