ಪುಟ:ಚೆಲುವು.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉದ್ಯಾನದಲ್ಲಿ ಏನು ಚೆಲುವಿದು ಏನು ಸೊಗಸಿದು

  • ಈವ್ರದಯದಣಿಯರವಿದು ? ನ್ಯೂನತೆಯ ಧಿಕ್ಕರಿಸಿ ತೊಳಗುವ

ದೇವಲೋಕದ ಬೆಳಕಿದು ? ದೇವನಂದನವೆಂದು ಮನುಜನು ಕನಸೋಳೆಣಿಸಿದ ವನದಲಿ ಹೂವ ಮೋಹರವಿನಿತು ನೆರೆಯದು ಇನಿತು ಬಣ್ಣದಿ ಮೆರೆಯದು. ಏನು ಚೆಲುವಿದು ಜಗದಲಿ ! ಹಾಸವೆನಿತೀ ಮೊಗದಲಿ ! ಮೊಗದೆ ನಗೆಯಿರೆ ಅರಿವೆ ಮರೆಯಲಿ ನಲಿದ ಬಗೆಯಿದೆ ಎಂಬುದ; ಜಗದೆ ಹೂವಿಂತರಳೆ ಸೃಷ್ಟಿಯ ಒಳಗು ನಲಿದುದು ಕಾಂಬುದು. ಯಾವ ಬಗೆ ಯಾವುದೋ ಸೊಗ ಅಲ್ಲಿ ಇರುವುದರಿಂದಲೆ ಹೂವೆನಗೆ ಸೊಗಯಿಸುವ ನಗೆಯನು ಇಲ್ಲಿ ಚೆಲ್ಲುತ ಬಂದಿದೆ; ಬಗೆಯ ತಣಿಸುವುದೆಲ್ಲವೂ ಬಗೆಯೊಳೊಗೆವುದು ಒಲ್ಲೆವು. ೫೯