೧೦೮ | ಜಾಗರ
ಬಿ ಚಂದ್ರಶೇಖರ ರಾವ್, ಸ್ತ್ರೀಪಾತ್ರಗಳನ್ನು ನಾಜೂಕಾಗಿ ನಿರ್ವಹಿಸುವ ಚತುರ
ವಾಗಿ, ಪ್ರಸಿದ್ಧ ವೇಷಧಾರಿ ಕೊಳ್ಳೂರು ರಾಮಚಂದ್ರರಾವ್ ಈ ರಂಗದ
ಮಹತ್ವದ ಅರ್ಥಧಾರಿಗಳು.
ಅನುಭವಿ ಮಾತುಗಾರರಾದ ಎನ್ ವಿ ಕೃಷ್ಣ ಭಟ್, ಅಡ್ಡೆ ವಾಸು ಶೆಟ್ಟಿ
ಮುಂಬಯಿ, ವೇಣೂರು ಎನ್ ಕೃಷ್ಣರಾವ್, ಅಂಬಾತನಯ ಮುದ್ರಾಡಿ, ಸಿದ್ದ ಕಟ್ಟೆ
ವಾಸುಶೆಟ್ಟಿ, ಅಡ್ಕ ಗೋಪಾಲಕೃಷ್ಣ ಭಟ್, ಮಂಗಳೂರು ಮಾಧವಾಚಾರ, ಬರೆ
ಕೇಶವ ಭಟ್, ಅಮಾಸೆಬೈಲು ಕರುಣಾಕರ ಹೆಗ್ಡೆ, ರಘುರಾಮ ಶೆಟ್ಟಿ ಇವರು ಈ
ರಂಗದಲ್ಲಿ ಬಹುಕಾಲದಿಂದ ಹೆಸರಾಂತವರು.
ಪ್ರವಚನ ಕ್ಷೇತ್ರದಲ್ಲಿ ಹೆಸರಾದ ಎಚ್ ನಾರಾಯಣ ರಾವ್ ಪೌರಾಣಿಕ
ಲೋಕವನ್ನು ಚೆನ್ನಾಗಿ ಚಿತ್ರಿಸಬಲ್ಲ, ಬಿಗಿಮಾತಿನ ಸಮರ್ಥ ಅರ್ಥಧಾರಿ, ಹೆಗ್ಗೇರಿ
ಕೊರಗಯ್ಯ ಶೆಟ್ಟಿ ಸೌಮ್ಯ ಸುಂದರ ಮಾತಿನಿಂದ ತುಂಬ ಭರವಸೆ ಹುಟ್ಟಿಸುವ ಮನ
ಸೆಳೆಯುವ ಮಾತುಗಾರ.
ಸಂಸ್ಕೃತ, ದರ್ಶನ ಶಾಸ್ತ್ರ, ಆಧುನಿಕ ಸಾಹಿತ್ಯಗಳಲ್ಲಿ ಆಳವಾದ ವೈದುಷ್ಯ
ಹೊಂದಿರುವ ಲಕ್ಷ್ಮೀಶ ತೋಳ್ಪಾಡಿ ಯಕ್ಷಗಾನ ಅರ್ಥಗಾರಿಕೆಗೆ ಅತ್ಯಾಧುನಿಕ
ಚಿಂತನೆಗಳನ್ನು ತರುವ ಪ್ರಯೋಗ ನಡೆಸಿದ್ದಾರೆ. ಅರ್ಥಗಾರಿಕೆ ಇವರ ಮುಖ್ಯ
ಆಸಕ್ತಿಯಲ್ಲ. ಒಟ್ಟು ಅರ್ಥಗಾರಿಕೆಯಲ್ಲಿ ಅಲ್ಲವಾದರೂ, ಅರ್ಥಗಾರಿಕೆಯಲ್ಲಿ
ಹೊಸದಾರಿಯೊಂದನ್ನು ತೆರೆದಿರುವ ಇವರು ಗಮನಾರ್ಹರು.
ಪ್ರಮುಖ ವೇಷಧಾರಿ, ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ಸಾಮಗ,
ಜನಪ್ರಿಯ ವೇಷಧಾರಿ ಎಂ ಆರ್ ವಾಸುದೇವ ಸಾಮಗ, ಪ್ರಾಧ್ಯಾಪಕ ಕೇಶವ
ಉಚ್ಚಿಲ್, ಕವಿ ಸತ್ಯಮೂರ್ತಿ ದೇರಾಜೆ, ಕೆ ಶ್ರೀಕರ ಭಟ್, ಸಂಸ್ಕೃತ ವಿದ್ವಾಂಸ
ವೆಂಕಟೇಶ ಉಪಾಧ್ಯಾಯ, ಪಿ ಕೃಷ್ಣ ಭಟ್, ಪ್ರಾಧ್ಯಾಪಕ ಶಂಭುಶರ್ಮ - ಇವರು
ಗಮನಾರ್ಹ ಅರ್ಥಧಾರಿಗಳು,
ಯಕ್ಷಗಾನ ರಂಗದ ಮಹೋನ್ನತ ನಟ ಕೆರೆಮನೆ ಮಹಾಬಲ ಹೆಗ್ಡೆ
ಸಮರ್ಥ ಅರ್ಥಧಾರಿ. ವಿಚಾರ, ಪಾತ್ರಸೃಷ್ಟಿ, ಅಭಿವ್ಯಕ್ತಿಗಳಲ್ಲಿ ಹಿಡಿತ ಇರುವ
ಮಾತುಗಾರ, ಇವರ ಕಂಠವೂ, ಭಾಷೆಯ ಪರಿಣಾಮಕಾರಿ. ಇವರ ಮಾತು
ಗಾರಿಕೆ ಹಲವರಮೇಲೆ ಪ್ರಭಾವ ಬೀರಿದೆ. ಇನ್ನೊರ್ವ ಹಿರಿಯ ನಟ ಕೆರೆಮನೆ
ಶಂಭುಹೆಗ್ಡೆ, ಕೆ ವೆಂಕಟಾಚಲ ಭಟ್ಟ, ಪ್ರಾ. ಮಹಾಬಲೇಶ್ವರ ಹೆಗ್ಡೆ, ವಿಟಿ ಸಿಗೇಹಳ್ಳಿ
ರೋಹಿದಾಸ ಭಂಡಾರಿ, ನಾರಾಯಣ ಶಾಸ್ತ್ರಿ ಇವರೆಲ್ಲ ಉತ್ತರ ಕನ್ನಡದ ಮುಖ್ಯ
ಅರ್ಥಧಾರಿಗಳು.