೧೧೦ | ಜಾಗರ
ವೇಷಗಳ ಬಂಧನ ಇಲ್ಲಿ ಇಲ್ಲದಿರುವುದರಿಂದ.
ತಾಳ ಮದ್ದಲೆಯ ಪರಿಣಾಮವನ್ನು ನಾಟಕೀಯತೆಯನ್ನು ಮತ್ತು ಅಭಿ
ವ್ಯಕ್ತಿ ಸಾಧ್ಯತೆಗಳನ್ನು ಎತ್ತರಿಸುವ ದೃಷ್ಟಿಯಿಂದ ಇನ್ನಷ್ಟು ಸುಧಾರಣೆಗಳಿಗೆ ಅವ
ಕಾಶವಿದೆ. ಈ ನಿಟ್ಟಿನಲ್ಲಿ ಭಾಗವತರು, ವಾದ್ಯವಾದಕರು, ಅರ್ಥಗಾರರು, ವ್ಯವಸ್ಥಾ
ಪಕರು ಮತ್ತು ಪ್ರೇಕ್ಷಕರು ಯೋಚಿಸಬೇಕಾದುದು ಅತೀ ಅಗತ್ಯ.
ಹಿಮ್ಮೇಳದ ಪಾತ್ರ ಹೆಚ್ಚು ಸಕ್ರಿಯವಾಗಬೇಕು.
ಹಾಡುಗಳು ಗಂಟೆ
ಗೊಂದರಂತೆ ಬಂದರೆ ಸ್ವಾರಸ್ಯವಿಲ್ಲ. ಪದ್ಯ-ಅರ್ಥಸೇರಿ ತಾಳಮದ್ದಲೆ. ಪದ್ಯದ
ಪರಿಣಾಮ ಮರೆಯಾದ ಮೇಲೂ ಅರ್ಥ ಉದ್ದ ಹೋಗಬಾರದು. ಯುದ್ಧ,
ಪ್ರಯಾಣ, ಪಾತ್ರಗಳ ಏಳು-ಬೀಳು, ರಥ ಹಾರಿಸುವುದು. ವಿಚಿತ್ರಗಳನ್ನು ತೋರಿಸು
ವುದು. ಇಂತಹ ಹಲವು ಸಂದರ್ಭಗಳಲ್ಲಿ ನೂರುಮಾತಿನ ಬದಲು ಒಂದು ಚೆಂಡೆಯ
ದಸ್ತ ಸಾಕು.
ಹಿಮ್ಮೇಳನವನ್ನು ಮಾತಿನ ಗತ್ತಿಗೆ, ಸಂದರ್ಭಕ್ಕೆ ಪೋಷಕವಾಗಿ
ಬೆಳೆಸುವ ಬಗ್ಗೆ ಇನ್ನಷ್ಟು ಕೆಲಸ ಆಗಬೇಕು. ಪಾತ್ರಗಳ ಸ್ವಗತಕ್ಕೆ ಭಾಗವತರು
ಹೂಂ ಗುಡುವ ಕ್ರಮ ಮರೆಯಾಗುತ್ತಿದ್ದು, ಅದು ಪುನರುಜ್ಜಿವನಗೊಳ್ಳಬೇಕು.
ಕೇವಲ ಮಿತವಾದ ತಿಳುವಳಿಕೆಯಿಂದ, ಭಾವಬಿಂಬಗಳನ್ನು ಸೃಷ್ಟಿಸುವ
ಒಳ್ಳೆಯ ಪೌರಾಣಿಕ ವಾತಾವರಣ ನಿರ್ಮಿಸಬಲ್ಲ ಅನೇಕರನ್ನು ಹಳ್ಳಿಗಳಲ್ಲಿ ನಾನು
ಕಂಡಿದ್ದೇನೆ. ಔಚಿತ್ಯ, ಕಲಾಧರ್ಮ, ಸಮೂಹ ಪ್ರಜ್ಞೆಗಳ ಆವರಣದಲ್ಲಿ ಇತರ
ರೊಂದಿಗೆ ಹೊಂದಿಕೊಂಡು, ನಾವು ಕೆಲಸ ಮಾಡಬೇಕಾದುದು ಬಹುಮುಖ್ಯ.
ತಾಳಮದ್ದಳೆಯ ವಾದ ಭೂಮಿಕೆಯನ್ನು ಸರಿಯಾಗಿ ತಿಳಿದು ವಾದಕ್ಕಾಗಿ ವಾದ
ಮಾಡದೆ ಉದ್ದೇಶಕ್ಕಾಗಿ ವಾದ ಮಾಡುವ ರೀತಿ ಈಗ ಬೆಳೆಯುತ್ತಿದ್ದು, ಅದು ಬಲ
ವಾಗಬೇಕು. ಅರ್ಥದಲ್ಲಿ ನಾವೀನ್ಯ, ವಾಸ್ತವಿಕ ಜೀವನ ದೃಷ್ಟಿ, ಸೌ೦ದರ್ಯ,
ಪಾತ್ರಗಳ ಅಂತರ್ಧ್ವಂದ್ವಗಳಲ್ಲಿ ಹೊಸ ಯೋಜನೆಗಳನ್ನು ತರಬೇಕು. ಆ ಬಗೆ
ನಾವು ಆಧುನಿಕ ಭಾರತೀಯ-ಪಾಶ್ಚಾತ್ಯ ವಿಚಾರ, ವಿಮರ್ಶೆಗಳತ್ತ ಕಣ್ಣು ಹಾಯಿಸ
ಬೇಕು. ಆಧುನಿಕ ಕಾವ್ಯ ಸಾಹಿತ್ಯ ಧೋರಣೆಯನ್ನು ಪರಿಶೀಲಿಸಬೇಕು, ಪೀಠಿಕೆ,
ಸಂಯೋಜನೆ, ಸಂವಾದ, ವಿದ್ಯೆಗಳ ಆಯ್ಕೆಗಳಲ್ಲಿ ಮಾಮೂಲು ಕ್ರಮಕ್ಕೆ
ನೇತಾಡದೆ, ಹೊಸತೇನು ಮಾಡಬೇಕೆಂದು ನೋಡಬೇಕು. ಪೌರಾಣಿಕವೇ ಆದ
ಹೊಸ ರೀತಿಯ ಪ್ರಸಂಗಗಳ ರಚನೆ ಆಗಬೇಕು, ಇರುವ ಪ್ರಸಂಗಗಳ ಸಂಪಾದನ
ಮುದ್ರಣ, ಬಳಕೆ, ಜರೂರಿನ ಸಮಸ್ಯೆ.
ಆರ್ಥಧಾರಿಗಳು ಸೇರಿ ಪ್ರಸಂಗದ ಕುರಿತು, ತಾಳಮದ್ದಲೆ ಸಾಗಬೇಕಾದ
ಸ್ಕೂಲ ಚೌಕಟ್ಟನ್ನು ನಿರ್ಧರಿಸಿದರೆ ತಪ್ಪೇನಿಲ್ಲ. ಇಂತಹ ಪೂರ್ವ ತಯಾರಿ,
ಪುಟ:ಜಾಗರ.pdf/೧೧೮
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ