ಪುಟ:ಜೀರ್ಣವಿಜಯನಗರಾದರ್ಶನಂ .djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀರ್ಣವಿಜಯನಗರಾದರ್ಶ೦ ೧೧ vvvvv vWMMMMMwwwMMMMwwwymrwwwmmmwww ಣ ಪುಷ್ಯ ಬಹುಳ ೧೦ ಶುಕ್ರವಾರದದಿನ ಜನ್ನಿಸಿದಂತೆ ರಾಯಬಹದ್ದೂರ್‌ ಕೆ. ವೀರೇಶಲಿಂಗಂ ಪಂಡಿತರು ನಿರ್ದಿಷ್ಟ ಮಾಡಿರುವರು. ವೀರನರಸಿಂಹನು ಮೃತನಾದತರುವಾಯ ಕೃಷ್ಣರಾಯನು ತನ್ನ ತಮ್ಮನಾದ ಅಚ್ಯುತರಾಯನನ್ನೂ, ತನ್ನ ಅಣ್ಣ ನಮಗನಾದ ತಿಮ್ಮರಾಯ ನನ್ನೂ ಚಂದ್ರಗಿರಿ ದುರ್ಗಕ್ಕೆ ಕಳುಹಿ ತಾನು ಶಾಲಿವಾಹನಶಕೆ 1430 ನೇ ಶುಕ್ತ ಸಂವತ್ಸರ ಮಾಘ ಶುದ್ಧ ೧3 ಗೆ ಸರಿಯಾದ ಕ್ರಿ ಶ 1506 ವರುಷದ ಏಬ್ರವರಿ 4 ನೇತಾರೀಕಿನಲ್ಲಿ ಪಟ್ಟಾಭಿಷಿಕ್ತನಾದನು. ಕೃಷ್ಣರಾಯನು ಬಹಳ ಕುಳ್ಯ, ನಿಡುವೂ ಇಲ್ಲದ ಸಾಮಾನ್ಯ ವಾದ ಎತ್ತರ ಉಳ್ಳವನಾಗಿಯೂ, ಸುಂದರಾಕಾರನಾಗಿಯೂ ದೃಢಕಾಯ ನಾಗಿಯ, ತೇಜಃಪುಂಜವಾದ ಮುಖವುಳ್ಳವನಾಗಿಯೂ ಇದ್ದನು. ಅವನ ಮುಖದಮೇಲೆ ಸಿಡುಬಿನ ಕಲೆಗಳು ಕಾಣಬರುತ್ತಿದ್ದವು, ಸುಂದರವಾದ ದಿವನ ವದನಕಮಲವನ್ನು ನೋಡುವವರಿಗೆ ಆತನಲ್ಲಿ ಪೂಜ್ಯ ಬುದ್ಧಿ ಹುಟ್ಟು ತಿತ್ತು. ನಾನಾವಿಧವಾದ ಗರಡಿ ಸಾಧನೆಗಳನ್ನೂ, ಧನುರ್ವಿದ್ಯೆಯನ್ನೂ, ಕತ್ತಿಗಳ ಸಾಧನೆಯನ್ನೂ, ಚೆನ್ನಾಗಿ ಕಲಿತಿದ್ದನು. ಈತನ ವಂಶದವರೂ ಈತನೂ ವೈಷ್ಣವರು. ಇವನು ವಿಷ್ಣು ಭಕ್ತನಾಗಿದ್ದರೂ ಶಿವದೇವಿಯಲ್ಲ. ಇವನು ದಯಾಮಯನಾಗಿದ್ದರೂ ಒಂದೊಂದ ವೇಳೆ ಇವನಿಗೆ ಅಧಿಕವಾಗಿ ಕೋಪಬರುತ್ತಿತ್ತಂತೆ ! ಈತನು ಆಂಧ ದೇಶದವನೆಂದು ಕೆಲವರೂ, ಕರ್ಣಾಟಕನೆಂದು ಕಲ ವರೂ ಹೇಳುತ್ತಿರುವರು. ಇವನು ಯಾವದೇಶೀಯನೇ ಆಗಿರಲಿ, ಇವನ ಕಾಲದಲ್ಲಿ ಆಂಧ್ರಭಾಷೆಯು ಮಹೋನ್ನತಸ್ಥಿತಿಗೆ ಬಂತು, ಇವನು ಆ ಭಾಷೆಯನ್ನು ಬಹಳವಾಗಿ ಆದರಿಸಿದನು. ಆದುದರಿಂದ ಈತನನ್ನು ಆಂಧ್ರ ನೆಂದು ಹೇಳುವುದು ನ್ಯಾಯವಾಗಿದೆ. ಈತನ ತಂದೆ ತಾತಂದಿರು ದೊಡ್ಡ , ವಿದ್ವಾಂಸರಾಗಿದ್ದು ಅನೇಕ ಕಾವ್ಯಗಳ ಕೃತಿಪತಿಗಳಾಗಿದ್ದರು. ಈತನು ®