ಪುಟ:ಜೀರ್ಣವಿಜಯನಗರಾದರ್ಶನಂ .djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಕರ್ಣಾಟಕ ಗ್ರಂಥಮಾಲೆ wmmmmmmmmmmmmm. ಇಂತಹ ಪಂಡಿತರಲ್ಲಿ ನಾಲ್ಕಾರುಜನ ಸೇರಿ “ ಮಹಾಪ್ರಭುವೇ ? ತಮ್ಮ ದಿವಾನರು ತಿಮ್ಮರಸರು ಧರಶಾಸ್ತ್ರವಿರುದ್ಧವಾಗಿ ರಾಜ್ಯಾಂಗಗಳನ್ನು ನೆರೆ ವೇರಿಸುತ್ತಿರುವರು. “ ರಾಜಾರಾಷ್ಟ್ರಕೃತಂ ಪಾಪಂ ಎಂದರೆ ರಾಷ್ಟ್ರ ದಲ್ಲಿ ಬೆಳದಪಾಪವು ರಾಯನನ್ನು ಹೊಂದುವುದೆಂದು ಧರಶಾಸ್ತ್ರಗಳು ಮೊರೆಯಿಡುತ್ತಿರುವುವು. ಆದುದರಿಂದ ಮಹಾಸ್ವಾಮಿಯವರು ನಮಗೆ ಮಂತ್ರಿಪದವಿಯನ್ನು ದಯಪಾಲಿಸಿದರೆ ಇದುವರೆಗೆ ಬೆಳೆದಿರುವ ಪಾಸ ಗಳನ್ನು ಪೂಣ್ಯಕ್ರಗಳಿಂದ ಪರಿಹರಿಸಿ ನಮ್ಮ ರಾಷ್ಟ್ರ ದಲ್ಲಿ ಪಾಪಮಹಾ ದೇವತೆಯು ಅಡಿಯಿಡದಂತೆ ಧರಶಾಸ್ತ್ರ ಸಮ್ಮತದಿಂದ ರಾಜ್ಯ ಪರಿಪಾಲನೆ ಮಾಡುತ್ತಾ ಬರುವವು. ” ಎಂದು ರಾಯರೊಂದಿಗೆ ಬಿನ್ನವಿಸಿದರು. ಆಗ ರಾಯರು ತನ್ನ ಮನಸ್ಸಿನಲ್ಲಿ “ ಓಹೋ, ಮೋಸವಾಯಿತಲ್ಲಾ! ನಾನು ಕೋರಿಕೊಳ್ಳರೆಂದು ಇವರಿಗೇಕೆ ಹೇಳಿದೆನು ? " ಎಂದು ಸ್ವಲ್ಪ ಹೊತ್ತು ಚಿಂತಿಸಿ ಯಾವ ರೀತಿಯಿಂದಲಾದರೂ ಇವರಭಿಪ್ರಾಯವನ್ನು ಬಿಡಿಸಿ ನಾನು ತಪ್ಪಿಸಿಕೊಳ್ಳುವೆನೆಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು “ ಪಂಡಿತೋತ್ತಮರಿರಾ ! ನಾನು ಪದವಿಯಿಂದ ತಿಮ್ಮರಸನನ್ನು ತಪ್ಪಿಸ ಬೇಕಾದ ಸಂದರ್ಭದಲ್ಲಿ ಹೊಸದಾಗಿ ಉದ್ಯೋಗದಲ್ಲಿ ಪ್ರವೇಶಿಸಲಿಷ್ಟವುಳ್ಳ ವರಿಗೆ ಒಂದು ಪ್ರಶ್ನೆಯನ್ನು ಕೊಡುವೆನು. ಅದಕ್ಕೆ ಸರಿಯಾದ ಉತ್ತರವ ನ್ನಿತ್ತರೆ ಅಂತವರಿಗೆ ನನ್ನ ಮಂತ್ರಿ ಪದವಿಯನ್ನು ಕೊಡುವೆನು. ಇಲ್ಲದಿದ್ದರೆ ಅಧಿಕಾರವನ್ನು ಕೊಡಲಾಗುವುದಿಲ್ಲ” ಎಂದು ಹೇಳಿದನು ನಮಗೆ ಆ ಪ್ರಶ್ನೆಯನ್ನು ಕೊಟ್ಟರೆ ನಾವು ಅದಕ್ಕೆ ಸರಿಯಾದ ಉತ್ತರವನ್ನು ಕೊಡ ಬಲ್ಲವೆಂದು ಪಂಡಿತರು ಕೇಳಿಕೊಂಡರು. ಎಷ್ಟಾದರೂ ರಾಯನು ಕ್ಷತ್ರಿ ಯೋತ್ತಮನೂ, ಸೂಕ್ಷ್ಮ ಬುದ್ಧಿಯುಳ್ಳವನೂ, ಧೀರನೂ ಆದುದರಿಂದ ಸ್ವಲ್ಪಹೊತ್ತು ಆಲೋಚಿಸಿ, ಪಂಡಿತರನ್ನು ಕುರಿತು “ ಮಹನೀಯರು ಗಳಿರಾ? (1) ಬದುಕಿದರೆ ಬದುಕುವವನು, (2) ಸತ್ತರೆ ಬದುಕುವವನು, ಎದರಿಂದ