ಪುಟ:ಜೀರ್ಣವಿಜಯನಗರಾದರ್ಶನಂ .djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಕರ್ಣಾಟಕ ಗ್ರಂಥಮಾಲೆ ammmmmmmmmmmmmmm ಶ್ರೀ ವೀರಸದಾಶಿವನು ವಿದ್ಯಾನಗರದಲ್ಲಿ ರತ್ನ ಸಿಂಹಾಸನಾರೂಢನಾಗಿ ರಾಜ್ಯವನ್ನಾಳುತ್ತಿರುವಲ್ಲಿ ಶ್ರೀರ್ಮ ಮಹಾಮಂಡಲೇಶ್ವರ ಮಾಧವರಾಯನು ಮಲ್ಲಿರಾಜನ ಮೊಮ್ಮಗನಾದ ವಲ್ಲಭರಾಜನ ಮಗ ತಿಮ್ಮರಾಜಪ್ರಭುವು ವಿದ್ಯಾನಗರದ ದೊಡ್ಡ ಅಂಗಡಿಬೀದಿಯ ಮೈಲಸಂತೆಗೆ ಪಶ್ಚಿಮದಲ್ಲಿರುವ ಮಾಧವದೇವರಿಗೆ ರಂಗಮಂಟಪದ ವೈಶಾಲ್ಯ 25 ಅಂಕಣಗಳು ನಿತ್ಯೋ ತ್ಸವಗಳಲ್ಲಿ ನೃತ್ಯಗೀತವಾದ್ಯಾದಿ ವೈಭವಗಳಿಗೆ ಯೋಗ್ಯವಾಗಿಯೂ ಆ ಚಂದ್ರಾರ್ಕಸ್ಥಾಯಿಯಾಗಿಯೂ ತಮ್ಮ ತಂದೆ ವಲ್ಲಭರಾಜರಿಗೂ ತಮ್ಮ ತಾಯಿ ವೆಂಗಳಮ್ಮನವರಿಗೂ ಪುಣ್ಯವುಂಟಾಗುವಂತೆ ಸಮರ್ಪಿಸಿದನು. “ ಮಂಗಳಂ ಮಹಾ ಶ್ರೀರಸ್ತು” ಎಂದಿದೆ. - ಈ ರಂಗಸ್ವಾಮಿಯ ದೇವಾಲಯಕ್ಕೆ ಉತ್ತರದಲ್ಲಿ ಸ್ವಲ್ಪ ದೂರ ಹೋದರೆ ಮುಂದೆ ಒಂದು ಕೋಟೆಯಗೊಡೆ ಕಾಣಬರುವುದು, ಈ ಕೋಟೆಯ ದಿಡ್ಡಿಬಾಗಿ ಅಲ್ಲಿ ಪ್ರವೇಶಿಸಿ ರಾಜೆಂತಃಪುರಾವರಣವನ್ನು ಸೇರ ಲಾಗುವುದು. - ಈ ಅಂತಃಪುರಾವರಣದಲ್ಲಿ, “ ಸಭಾಭವನ, ” ಎಂಬ ಎರಡಂತಸ್ತು ಗಳ ಕಟ್ಟಡವಿರುವುದು, ಇದರಲ್ಲೆಲ್ಲಾ ಕಮಾನುಗಳು ಕಟ್ಟಲ್ಪಟ್ಟು, ಬಹು ರಮಣೀಯವಾಗಿಕಟ್ಟಲ್ಪಟ್ಟಿರುವುದು. ಇದರ ಉತ್ತರ ಪಾರ್ಶ್ವದಲ್ಲಿ ಮೇಲಿನ ಅಂತಸ್ತಿಗೆ ಹತ್ತುವುದಕ್ಕ ಹಂತಗಳಿರುವುವು. ಮೇಲಿನ ಅಂತಸ್ತು ಕೂಡ ಕೆಳಗಿನಹಾಗೆಯೇ ಕಮಾನುಗಳುಹಾಕಿ ಕಟ್ಟಲ್ಪಟ್ಟಿದೆ. ಇದು ಕಟ ಒಟ್ಟು 500 ವರುಷಗಳಾಗಿದ್ದರೂ ಇಂದಿಗೂ ಸ್ವಲ್ಪವಾದರೂ ಮುಕ್ಕಾ ಗದೆ ಪೂರ್ವದ ಚಾತುರವನ್ನೇ ಮರೆಯಿಸುತ್ತಾ ಅಚ್ಚಳಿಯದೆ ಇದೆ. ಈ ಸಭಾಭವನಕ್ಕೆ ಪಶ್ಚಿಮಭಾಗದಲ್ಲಿ ಗೋಡೆ ಇಲ್ಲದೆ ಎತ್ತರ ವಾಗಿರುವ ತಳಹದಿಯೊಂದಿದೆ. ಇದು ರಾಜಾಂತಃಪುರುವಾಗಿ ಇದ್ದಿರ ಮುದು.