ಪುಟ:ಜೀರ್ಣವಿಜಯನಗರಾದರ್ಶನಂ .djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ಕರ್ಣಾಟಕ ಗ್ರಂಥಮಾಲೆ ಈ ಪರ್ವತರಾಶಿಗೆ ದಕ್ಷಿಣಪಾರ್ಕ್ಷದ ಕೆಳ ಭಾಗದಲ್ಲಿ ಉದ್ದ ಕೂ ಹಸುರುಹುಲ್ಲಿನಿಂದಲೂ, ಅಲ್ಲಲ್ಲಿ ನಾನಾವಿಧಗಳಾದ ಲತೆಗಳು, ವಿವಿಧ ವರ್ಣಗಳುಳ್ಳ ಹೂಗಳು, ಅರಳಿರುವುದರಿಂದಲೂ, ಅಲ್ಲಿನ ಭೂಮಿಯು ರತ್ನಕಂಬಳಿಯನ್ನು ಹಾಸಿದಹಾಗೆ ಕಣ್ಣುಗಳಿಗೆ ಹಬ್ಬವನ್ನುಂಟುಮಾಡು ತಿರುವುದು, ಇದಕ್ಕೆ ಮುಂದಿನ (ದಕ್ಷಿಣ) ಭಾಗದಲ್ಲಿನ ಭೂಮಿಯು ದೊಡ್ಡಮರಗಳಿಗೆನಲೆಯಾಗದಿದ್ದರೂ ಅಲ್ಲಲ್ಲಿ ವಿವಿಧಜಾತಿಗಳ ಸಣ್ಣಗಿಡ ಗಳ ಪೊದರುಗಳಂತೆ ಹೆಣೆದುಕೊಂಡಿರುವ ಲತಾನಿಕುಂಜಗಳೂ ನೇತ್ರ ಪಕ್ಷವನ್ನೊಡರಿಸುತ್ತಿರುವುವು. ಮೃದುಮಧುರವಾಗಿ ದನಿಗೆಯ ಪಕ್ಷಿಗಳು ಆವೃಕ್ಷಗಳ ಮೇಲೆ ಕುಳಿತುಕೊಂಡು ಇಂಪಾಗಿ ಗಾನಮಾಡುತ್ತಾ ಶ್ರವಣ ರಂಧ್ರಗಳಿಗೆ ಕ್ಷೇತನವನ್ನು ಮಾಡುತ್ತಿರುವುವು, ಕೀರಶಾರಿಕಾದಿ ಪಕ್ಷಿಗಳ ಸವಿನುಡಿಗಳು ತೊತ್ರರಸಾಯನವಾಗಿ ಕೇಳಿಬರುತ್ತ ಗುಡ್ಡವನ್ನು ಹತ್ತಿ ದ್ದರಿಂದ ಉಂಟಾದ ಪರಿಶ್ರಮವನ್ನು ತೋರದಂತೆಮಾಡುವುವು. ಇಂತಹ ಸೊಬಗಿನಿಂದ ಮೆರೆಯುವ ಈ ಭುವನವು ಶರಭ, ಸಿಂಹ, ಶಾರ್ದೂಲಾದಿ ಕೊರಮೃಗಗಳ, ಸಂಚಾರಕ್ಕೆ ತಕ್ಕದ್ದಲ್ಲದೆ ಇದ್ದರೂ, ಸುಂದರ ವಿಶಾಲ ಚಂಚಲಲೋಚನಗಳುಳ್ಳ ಹುಲ್ಲೆಗಳು, ಮೊಲಗಳು, ಮರ್ಕಟಿ, ಮಾರ್ಜಾ ಲಾದಿ ಸಾಧಾರಣಮೃಗಸಮೂಹಗಳು ಇವುಗಳಿಗೆ ಸ್ಥಾನವಾಗಿರುವುದೆಂದು ಹೇಳಲು ಅಡ್ಡಿಯಿಲ್ಲ. ಈ ವನದ ದಕಿ೧ಭಾಗದಲ್ಲಿ ತುಂಗಭದ್ರಾ ನದಿಯು ಸಣ್ಣದಾಗಿ ಪಶ್ಚಿಮದಿಂದ ಪೂರ್ವಕ್ಕೆ ಪ್ರವಹಿಸುತ್ತಲಿರುವುದು, ಈ ಪ್ರವಾ ಹಕ್ಕೆ ಮುಂದುಗಡೆ ಬತ್ತದಗದ್ದೆಗಳು ಸಮೃದ್ಧಿಯಾಗಿ ಬೆಳೆದಿರುವುವು. ಅವುಗಳಲ್ಲಿ ಸುವರ್ಣಛಾಯೆಯುಳ್ಳ ಕೆಲವು ಬತ್ತದಗದ್ದೆಗಳಲ್ಲಿನ ಪೈರು ಗಳು ಹೊರಲಾರದಷ್ಟು ಧಾನ್ಯದಕಾಳುಗಳನ್ನುಳ್ಳ ತೆನೆಗಳನ್ನು ತಳೆದು ವಿದ್ಯಾ, ವಿನಯಸಂಪನ್ನರಾದ ಸಜ್ಜನರತ್ರದಿಂದ ವಸುಂಧರೆಗೆ ತಮ್ಮ ತಲೆ ಗಳನ್ನು ಸೂಕುವಂತೆ ಕೌಬರುವುವು, ಅವುಗಳಲ್ಲಿ ಕೆಲ ಇು