________________
ಜ್ಯೋತಿಶ್ಯಾಸ್ತ್ರ ಯಂತ್ರಗಳಲ್ಲಿ ಎಲ್ಲಕ್ಕೂ ದೊಡ್ಡದೆಂದರೆ ಅಮೇರಿಕೆಯ ಶಿಕಾಗೋ ಪಟ್ಟಣದ ವೇಧಶಾಲೆಯಲ್ಲಿಯ “ಎರ್ಕ್ಸ” ಹೆಸರಿನ ಯಂತ್ರವು. ಇದರ ಕೊಳವಯು ೬೦ ಸೂಟು ಉದ್ದವಿದ್ದು ಪ್ರತಿಕೃತಿಕಾರಕದ ವ್ಯಾಸವು ೪೦ ಇಂಚು ಇರುತ್ತದೆ. ದುರ್ಬಿನಿನಂತೆ ಇದನ್ನು ಕೈಯಲ್ಲಿ ಯಾರು ಹಿಡಿಯ ಬಲ್ಲರು ? ಇದನ್ನು ಒಂದು ಬಲವಾಗಿ ಕಟ್ಟಿದ ಕಟ್ಟೆಯ ಮೇಲೆ, ಬೇಕಾದ ಕಡೆಗೆ ತಿರುಗುವಂತೆ ಕೂಡಿಸಿರುತ್ತಾರೆ. ಹೀಗೆ ತಿರುಗಿಸುವುದಕ್ಕಾಗಿ ಒಂದು ಎಂಜಿನವನ್ನು ಇಟ್ಟಿರುತ್ತಾರೆ. ಮಳೆಗಾಳಿಗಳಿಂದ ಇದನ್ನು ಸಂರಕ್ಷಿ ಸುವುದಕ್ಕಾಗಿ ಇದರ ಮೇಲೊಂದು ದೊಡ್ಡ ಗುಮುಟವನ್ನು ಕಟ್ಟಿರುವರು. ಇದರಲ್ಲೊಂದು ಕಿಂಡಿಯಿದ್ದು ಈ ಗುಮುಟವೂ ಯಂತ್ರದೊಡನೆಯೆ ತಿರುಗುವಂತೆ ಮಾಡಿರುವರು. ಇದರ ಶಕ್ತಿಯು ಅಪ್ರತಿಮವಾದುದು. ೨! ಲಕ್ಷ ಮೈಲುಗಳ ಆಚೆಯಲ್ಲಿರುವ ಚಂದ್ರನು ಒಂದು ಸಾವಿರ ಮೈಲುಗಳ ಆಚೆಯಲ್ಲಿರು ವವನಂತೆ ಕಾಣುವನು. ಮಂಗಳನ ಮೇಲಿನ ಕಾಲುವೆಗಳು ಕಾಣುವವು. ೫೦ ಮೈಲು ಮಾತ್ರ ವ್ಯಾಸವುಳ್ಳ ಮಂಗಳನ ಉಪಗ್ರಹವೂ ಕಾಣುವುದು. ಆಕಾಶಗಂಗೆಯಲ್ಲಿಯ ತಾರೆಗಳೆಲ್ಲವೂ ಬಿಡಿ ಬಿಡಿಯಾಗಿ ಕಾಣುವವು. ಇದರ ಬೆಲೆ ೪-೫ ಲಕ್ಷ ರೂಪಾಯಿಗಳಿಗೆ ಮಿಗಿಲಾಗಿರುವುದು. ಅಮರಿಕೆ ಯಲ್ಲಿಯ ಒಬ್ಬ ಧನಾಡ್ಯನು ಇದನ್ನು ಕಾಣಿಕೆಯಾಗಿ ಕೊಟ್ಟಿರುವನು. ಇಂತಹ ಸೂರ್ಯಕಾಂತಗಳನ್ನು ತಯಾರಿಸಲಿಕ್ಕೆ ಬಹಳ ಶ್ರಮವೂ ವೆಚ್ಚವೂ ಬೇಕಾಗುವವು. ಇವು ಕಾಜಿನವಿದ್ದರೂ ಕಾಜು ಬಹಳ ಶುದ್ದವಿರಬೇಕಾಗು ವುದು. ಎಲ್ಲ ಕಡೆಯಲ್ಲಿಯೂ ಒಂದೇ ತರಹದ್ದಿರಬೇಕಾಗುವುದು. ಅದರ ಮೇಲ್ಮೀಯ ಆಕಾರವು ಸಶಾಸ್ತ್ರವಾಗಿರಬೇಕಾಗುವುದು. ಮತ್ತು ಅದರ ಮೇಲೆ ಗೀರು ಮುಂತಾದವುಗಳಿರದಂತೆ ಅದನ್ನು ತಿಕ್ಕಿ ತಿಕ್ಕಿ ಸರಿಪಡಿಸ ಬೇಕಾಗುವುದು. ಆದುದರಿಂದ ಬೇರೆ ಇನ್ನೊಂದು ತರಹದ ದೂರದರ್ಶಕಯಂತ್ರಗಳನ್ನು ಪ್ರಚಾರದಲ್ಲಿ ತಂದಿರುತ್ತಾರೆ. ಇವುಗಳ ಪ್ರತಿಕೃತಿಕಾರಕಗಳ ಸೂರ್ಯ ಕಾಂತಗಳಾಗಿರದೆ ರಾವುಗನ್ನಡಿ(Cnocave mirrors)ಗಳಿರುವವು. ಈ ರಾವುಗನ್ನಡಿಗಳಲ್ಲಿಯೂ ಸೂರ್ಯಕಾಂತಗಳಂತಹ ಗುಣಗಳುಂಟ ; ಮತ್ತು