ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಪಶ್ಚರ್ಯ ತೀರಿಕೊಂಡ ಬಳಿಕಂತೂ ಆತನು ಹಗಲೂ ರಾತ್ರಿಯೂ ಎರಡನೆಯ ವ್ಯವಸಾಯವನ್ನೇ ಮಾಡಲಿಲ್ಲ. ಈ ಶಾಸ್ತ್ರದ ಗುಂಗಿನಲ್ಲಿ ಆತನು ತನ್ನ ಜಹಾಗೀರಿಗೆ ಸೇರಿದ ಕೆಲಸಗಳನ್ನು ದುರ್ಲಕ್ಷಿಸಿದನು. ಆದುದರಿಂದ ಆತನ ಉತ್ಪನ್ನವು ಜಪ್ತವಾಯಿತು. ಮತ್ತು ಆತನು ದೇಶಭ್ರಷ್ಟನಾಗಬೇಕಾ ಯಿತು. ಇಪ್ಪತ್ತು ವರುಷಗಳವರೆಗೆ ಅವ್ಯಾಹತವಾಗಿ ತನ್ನ ಶೋಧ ಗಳನ್ನು ನಡೆಯಿಸಿ, ಆಕಾಶದ ಅನೇಕ ನಕಾಶೆಗಳನ್ನು ತಯಾರಮಾಡಿದನು. ಆಗ ದೂರದರ್ಶಕ ಯಂತ್ರವಿನ್ನೂ ಹುಟ್ಟಿರಲಿಲ್ಲ. ಬರಿಗಣ್ಣಿನಿಂದ ಇಪ್ಪತ್ತು ವರುಷಗಳವರೆಗೆ ಆಕಾಶದ ಕಡೆಗೆ ನೋಡುವಾಗ ಆತನಿಗೆ ಎಷ್ಟು ಶ್ರಮ ವಾಗಿರಬೇಕು ? - ಬ್ರೂನೋ ಎಂಬೊಬ್ಬ ಜ್ಯೋತಿಷಿಯು ಇಟಲಿಯಲ್ಲಿ ಕೋಪರ್ನಿಕಸನ ಸಿದ್ಧಾಂತಗಳನ್ನು ಧರ್ಮಗುರುಗಳ ಆಜ್ಞೆಯನ್ನು ಲೆಕ್ಕಿಸದೆ ಜನರಲ್ಲಿ ಜೋರಿನಿಂದ ಹಬ್ಬಿಸತೊಡಗಿದನು. ಆಗ ಆತನು ೧೬೦೦ನೆಯ ಇಸವಿಯಲ್ಲಿ ರೋಮಪಟ್ಟಣದಲ್ಲಿ ಪಾಷಂಡಿಯೆಂದು ತಿಳಿದು ಜೀವಂತ ಸುಡಲ್ಪಟ್ಟನು ! ಜ್ಯೋತಿಶಾಸ್ತ್ರದಲ್ಲಿ ಗ್ಯಾಲಿಲಿಯೊನ ಹೆಸರನ್ನು ಕೇಳದವರೇ ಇಲ್ಲ. ಆತನು ಇಟಲಿಯಲ್ಲಿ ೧೫೬೪ನೆಯ ಇಸವಿಯಲ್ಲಿ ಜನಿಸಿದನು. ಹಳೆಯ ಅಭಿಪ್ರಾಯಗಳ ವಿರುದ್ದವಾಗಿ ಈತನು ಬಂಡನ್ನೆಬ್ಬಿಸಿದನು. ದೂರದರ್ಶಕ ಯಂತ್ರದ ಮುಖ್ಯ ಶೋಧಕನು ಇವನೇ, ಎರಡು ಪದಾರ್ಥಗಳು ಒಂದು ಎತ್ತರವಾದ ಸ್ಥಳದಿಂದ ಕೆಳಗೆ ಬಿಡಲ್ಪಟ್ಟರೆ ಅವುಗಳಲ್ಲಿ ಜಡವಾದುದು ಮೊದಲು ಭೂಮಿಗೆ ಬೀಳುವುದೆಂದು ಎರಿಸ್ಟಾಟಲನು ಕಲಿಸಿದ್ದನು. ಜನರು ಅದನ್ನೇ ನಂಬುತ್ತಿದ್ದರು. ಅದು ಸುಳ್ಳೆಂದು ಗ್ರಾಲಿಲಿಯೋನು ಹೇಳಿದನು. ಒಂದು ಎತ್ತರವಾದ ಗೋಪುರದ ಮೇಲೆ ನಿಂತುಕೊಂಡು ಎರಡು ಪದಾರ್ಧ ಗಳನ್ನು ಒಗೆದು ತಾನು ಹೇಳಿದ್ದೇ ನಿಜವೆಂಬುದನ್ನು ಪ್ರತ್ಯಕ್ಷವಾಗಿ ಸಿದ್ದ ಮಾಡಿ ತೋರಿಸಿದನು. ಆದರೂ ಜನರು ನಂಬಲೊಲ್ಲರು ! ತನ್ನ ಹೊಸ ಮತಗಳನ್ನು ತನ್ನ ವಿದ್ಯಾರ್ಥಿಗಳಿಗೆ ಕಲಿಸಹತ್ತಿದುದರಿಂದ ಪಂಡಿತರು ಆತನನ್ನು ಪರಿಪರಿಯಿಂದ ಪೀಡಿಸಿದರು. ಕೊನೆಗೆ ಆತನಿಗೆ ತನ್ನ ಸ್ಥಳಕ್ಕೆ ರಾಜೀನಾಮೆಯನ್ನು ಕೊಡಬೇಕಾಯಿತು. ಮತ್ತೊಂದು ಕಡೆಯಲ್ಲಿ ಅಧ್ಯಾಪಕನಾದನು. ಅಲ್ಲಿಯೂ ಇದೇ ಹಣೆಯ ಬರೆಹ. ಅವನು ತೆಗೆದ