________________
೨೨ ಜ್ಯೋತಿಶ್ಯಾಸ್ತ್ರ ಗಳನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ. ನಮಗೆ ಕಾಣುವ ಅರ್ಧಗೋಲವು ಭೂಮಿಯ ಮೇಲೆ ಡಬ್ಬುಹಾಕಿದಂತೆ ತೋರುತ್ತದಷ್ಟೆ, ಆಕಾಶವು ಭೂಮಿಗೆ ಕೂಡುವವರ್ತುಲಕ್ಕೆ ಕ್ಷಿತಿಜವೆನ್ನುವರು. ಈ ಕ್ಷಿತಿಜದವರೆಗಿನ ಭೂಭಾಗವು ಪ್ರೇಕ್ಷಕರ ಸುತ್ತಲು ೫ ಮೈಲುಗಳವರೆಗೆ ಇರುತ್ತದೆ. ನಮ್ಮಿಂದ ೫ ಮೈಲುಗಳ ಮೇಲೆ ಹೀಗೆ ಭೂಮ್ಯಾಕಾಶಗಳು ಹೊಂದಿದಂತೆ ಕಂಡರೂ ಅವು ನಿಜವಾಗಿ ಹೊಂದಿರುವುದಿಲ್ಲ. ಹೀಗೆ ಕಾಣುವುದು ಕೇವಲ ಭಾಸವಾಗಿದೆ. ನಾವು ಮುಂದೆ ಮುಂದೆ ಹೋದಂತೆ ಭೂಮ್ಯಾಕಾಶಗಳು ಕೂಡಿದ ಸ್ಥಳವೂ ಮುಂದೆ ಹೋದಂತೆ ಕಾಣುತ್ತದೆ. ಇದಲ್ಲದೆ ನಾವು ನೆಲದಮೇಲೆ ಎದ್ದು ನಿಂತಾಗ, ಸುತ್ತಲೂ ೫ ಮೈಲುಗಳವರೆಗೆ ಕಂಡರೆ, ನಾವು ಕುಳಿತುಕೊಂಡರೆ ೨-೩ ಮೈಲು ಮಾತ್ರ ಕಾಣುವುದು. ನೆಲದ ಸಮಕ್ಕೆ ಕಣ್ಣುಗಳು ಬರುವಂತೆ ತಗ್ಗಿನಲ್ಲಿ ನಿಂತರೆ ಭೂಮಿಯು ಕಾಣುವುದೇ ಇಲ್ಲ. ಎತ್ತರವಾದ ಗುಡ್ಡದಮೇಲೆ ಹೋದರೆ, ೧೫-೨ ಅಥವಾ ಅದಕ್ಕೂ ಹೆಚ್ಚು ಮೈಲುಗಳವರೆಗೆ ಕಾಣುವುದು. ಆದುದರಿಂದ ನಮಗೆ ಕಾಣುವ ಭೂಭಾಗದ ಅಳತೆಯು, ನಮ್ಮ ಎತ್ತರದಮೇಲೆಯೇ ಅವಲಂಬಿಸಿರುತ್ತದೆ. ಭೂಮಿಯು ಗೋಲಾಕಾರವಿರುವುದರಿಂದ ಹೀಗೆ ಆಗುತ್ತದೆ. ಭೂಮಿಯು ಸಪಾಟಾಗಿದ್ದರೆ ನಮಗೆ ಭೂಮಿಯ ಎಲ್ಲ ಭಾಗವು ಒಂದೇ ಕಾಲಕ್ಕೆ ಕಾಣಬೇಕಾಗಿತ್ತು, ಭೂಮಿಯ ವಿಷಯಕ್ಕೆ ಭಾಸವಾದಂತೆ ಖಗೋಲವೂ ಭಾಸವೇ ಆಗಿದೆ. ಆಕಾಶವೆಂಬುದೊಂದು ಪೊಳ್ಳು, ಅದು ನಿಜವಾಗಿ ಗೋಲವೂ ಅಲ್ಲ; ಪದಾರ್ಧವೂ ಅಲ್ಲ. ನಕ್ಷತಾದಿಗಳು ಇಂಧ ಯಾವ ವಸ್ತುವಿಗೂ ಹೊಂದಿಕೊಂಡಿರದೆ ವಿಶ್ವದಲ್ಲಿ ನಿರಾಧಾರವಾಗಿ ನಿಂತಿರುವವು. ಅವು ಒಂದನ್ನೊಂದು ಆಕರ್ಷಿಸುವುದರಿಂದಲೆ ಅವು ತಮ್ಮ ತಮ್ಮ ಸ್ಥಳದಲ್ಲಿರು ಇವೆ. ನಮ್ಮಿಂದ ಅವುಗಳ ಅಂತರವು ಬೇರೆ ಬೇರೆಯಾಗಿದೆ." * ಈ ಖಗೋಲವನ್ನು ತಿಳಿದುಕೊಳ್ಳಬೇಕಾದರೆ, ನಮಗೆ ನಮ್ಮ ಕಲ್ಪನಾ ಶಕ್ತಿಯ ಸಹಾಯವನ್ನು ಬಲವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲ. ದಿದ್ದರೆ ನಮಗೆ ಅದು ತಿಳಿಯುವುದಿಲ್ಲ. ಒಂದು ಅರಮನೆಯ ಚಿತ್ರವನ್ನು ತೆಗೆಯುವಾಗ ಅಗಸೆಯ ಬಾಗಿಲು, ಅದರ ಹಿಂದಿರುವ ಹೂದೋಟ,