ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಪ್ರಕಾಶವಿಲ್ಲ. ಸೂರ್ಯನ ಬೆಳಕು ಇವುಗಳಮೇಲೆ ಬೀಳುವುದರಿಂದ, ಇವು ಹೊಳೆಯುವಂತೆ ಕಾಣುತ್ತವೆ. ನಕ್ಷತ್ರಗಳಂತೆ ಮಿಣಿಮಿಣಿ ಮಿಂಚುವು ದಿಲ್ಲ; ಸ್ಥಿರಪ್ರಕಾಶವುಳ್ಳವಿರುತ್ತವೆ. ಇವುಗಳಿಗೆ ಗ್ರಹಗಳನ್ನು ವರು. ಈ ನಕ್ಷತ್ರಗಳು ಫಳಫಳ ಹೊಳೆಯುವುದಕ್ಕೆ ಕಾರಣವೇನೆಂದರೆ, ಭೂಮಿಯ ಸುತ್ತಲು ಇರುವ ವಾತಾವರಣವು ಒಂದೇ ಸಮನಾಗಿರುವು ದಿಲ್ಲ. ಕೆಲವು ಕಡೆಗೆ ತೆಳ್ಳಗಾಗಿಯೂ ಕೆಲವು ಕಡೆಗೆ ದಪ್ಪವಾಗಿಯ ಇರುತ್ತದೆ. ಆದುದರಿಂದ ಪ್ರಕಾಶ ಕಿರಣಗಳು ನಡುನಡುವೆ ಸರಳವಾಗಿ ಬರದೆ ತುಸು ವಕ್ರವಾಗುತ್ತವೆ. ಆದಕಾರಣ ಅವು ಧಳಧಳಮಿಂಚಿದಂತೆ ಕಾಣುತ್ತವೆ. ಈ ಕಾರಣದ ಸಲುವಾಗಿಯೆ ಚಳಿಗಾಲದಲ್ಲಿ ಅವು ಹೆಚ್ಚು ಧಳಧಳಿಸುತ್ತವೆ. ಈ ನಕ್ಷತ್ರಗಳೆಲ್ಲವೂ ಈ ಪಟ್ಟಣದೊಳಗಿನ ಸ್ಥಿರವಾದ ಮನೆಗಳೆಂದು ತಿಳಿಯಲು ಅಡ್ಡಿಯಿಲ್ಲ. ಕುದುರೆಯ ಜೀಕಿನಲ್ಲಿ ಕುದುರೆಗಳು ತಿರುಗುವಂತೆ ಈ ಸೂರ್ಯಮಾಲೆಯಲ್ಲಿ ಭೂಮಿಯು ಸೂರ್ಯನ ಸುತ್ತಲು ತಿರುಗುತ್ತದೆ. ಇದರಂತೆ ಬೇರೆ ಬೇರೆ ಅಂತರಗಳಮೇಲೆ ಮಿಕ್ಕ ಗ್ರಹಗಳ ಜೀಕಗಳು ತಿರು ಗುತ್ತವೆ. ಅಧವಾ ಸೂರ್ಯಮಾಲೆ ಎಂಬುದೊಂದು ಆಕಾಶರಾಜ ಪಟ್ಟಣ ದೊಳಗಿನ ದೇವಾಲಯವೆಂದು ತಿಳಿಯಬಹುದು. ಸೂರ್ಯನು ಈ ಗುಡಿ ಯೊಳಗಿನ ದೇವರು, ಅವನ ಸುತ್ತಲು ಬುಧ, ಶುಕ್ರ, ಭೂಮಿ ಇವರೇ ಮುಂತಾದ ೯ ಜನ ಭಕ್ತರು ಬೇರೆ ಬೇರೆ ಅಂತರಗಳಮೇಲೆ (ಒಬ್ಬರ ಹಿಂದೊಬ್ಬರು ಸಾಲಾಗಿ ಅಲ್ಲ) ಪ್ರದಕ್ಷಿಣೆಹಾಕುತ್ತಾರೆಂದು ಹೇಳಬಹುದು. ಆದರೆ ಇವರು ಹಾಕುವ ಪ್ರದಕ್ಷಿಣೆಯು ತುಸು ವಿಲಕ್ಷಣವಾಗಿದೆ. ಇವ ರೆಲ್ಲರು ತಮ್ಮ ಸುತ್ತಲು ತಾವು ತಿರುಗುತ್ತಲೂ ಹಾಗೆಯೆ ಮುಂದೆ ಸಾಗುತ್ತಲೂ ಪ್ರದಕ್ಷಿಣೆ ಹಾಕುತ್ತಿರುತ್ತಾರೆ. ಭೂಮಿಯೆಂಬ ಭಕ್ತನ ಸುತ್ತಲು ಚಂದ್ರನೆಂಬ ಆತನ ಶಿಷ್ಯನೊಬ್ಬನು ತಿರುಗುತ್ತಾನೆ. ಆತನೂ ತನ್ನ ಸುತ್ತಲು ತಾನು ತಿರುಗುತ್ತಲೇ ಭೂಮಿಯ ಸುತ್ತಲೂ ತಿರುಗುತ್ತಾನೆ. ಹೀಗೆ ಭೂಮಿಯ ಚಂದ್ರನೂ ಕೂಡಿಯೇ ಸೂರ್ಯನ ಸುತ್ತಲು ತಿರುಗು ತ್ತಾರೆ. ಹೀಗೆ ತಿರುಗುವುದರಿಂದುಂಟಾಗುವ ನೋಟವೇ ದಿನಗಳು-ತಿಂಗಳು ಗಳು-ವರ್ಷಗಳು ಮುಂತಾದವುಗಳು. ಇದು ಹೇಗೆಂಬುದನ್ನು ಇಲ್ಲಿ ತಿಳುಹಿಸಿ ಹೇಳುವೆವು.