ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಕಾಶರಾಜ ಅಥವಾ ಸೂರ್ಯ ೩೫ ಪಟ್ಟು ಮಾತ್ರ ಇರುತ್ತದೆ. ಇದರಿಂದ ಸೂರ್ಯನು ತನ್ನ ಮಾನದಿಂದ ಪೃಥ್ವಿಯ ಕಾಲು ಪಟ್ಟು ಹಗುರಿದ್ದಾನೆ. ಭೂಮಿಯ ಹೊರಭಾಗವು ಕಲ್ಲು ಮಣ್ಣುಗಳಿಂದಾಗಿದೆ. ಒಳಭಾಗವಾದರೂ ಕರಗಿದ ಕಲ್ಲುಗಳ ರಸದಿಂದಾ ಗಿರುವುದು. ಆದರೆ ಸೂರ್ಯನೆಲ್ಲ ವಾಯುರೂಪನಾಗಿರುವನು. ಈ ವಾಯುಗಳ ಉಷ್ಣತೆಯು ಅತಿಶಯವಾಗಿದೆ. ಅಲ್ಲಿ ಕಬ್ಬಿಣವೂ ಸಹ ಕಾಯು ಕರಗಿ ವಾಯುರೂಪವಾಗಿರುವುದು. ಆದುದರಿಂದ ಸೂರ್ಯನು ಇಂತಹ ವಾಯುಗಳನ್ನು ಒತ್ತಿ ಕಟ್ಟಿದ ಗಂಟಿನಂತಿರುವನು. ಹತ್ತಿಯನ್ನು ಎಷ್ಟು ಒತ್ತಿ ಗಂಟುಕಟ್ಟಿದರೂ ಅದು ಕಲ್ಲಿಗಿಂತ ಹಗು ಇರುವಂತೆ ಸೂರ್ಯನು ತನ್ನ ಮಾನದಿಂದ ಭೂಮಿಗಿಂತ ಹಗುರಾಗಿರುವನು. ಇನ್ನು ಆತನ ಬೆಳಕು ಮತ್ತು ಉಷ್ಣತೆಗಳನ್ನು ಕುರಿತು ಹೇಳು ವೆವು ಕೇಳಿರಿ, ೧೫೭೫,೦೦೦,೦೦೦,೦೦೦,೦೦೦,೦೦೦,೦೦೦ ಮೇಣಬತ್ತಿ ಗಳ ಬೆಳಕು, ಸೂರ್ಯನ ಬೆಳಕಿಗೆ ಸರಿಸಮಾನವಾಗಬಹುದು. ಆದರೆ ಇಷ್ಟೆಲ್ಲ ಪ್ರಕಾಶವು ನಮ್ಮ ಪಾಲಿಗೆ ಬರುವುದೇ ಇಲ್ಲ. ಇದರಲ್ಲಿ o..-ದಷ್ಟು ಮಾತ್ರ ನಮ್ಮ ಪಾಲಿಗೆ ದೊರೆಯುತ್ತದೆ. ಆತನು ಎಷ್ಟು ಉಷ್ಣನಿರುವನೆಂಬ ಕಲ್ಪನೆಯನ್ನು ನಿಮಗೆ ಮಾಡಿಕೊಡುವುದು ಕಠಿನ. ಬಿಸಿಲು ದಿವಸಗಳಲ್ಲಿ ಆತನಿಂದ ೯ ಕೋಟಿ ಮೈಲು ದೂರದಲ್ಲಿರುವ ನಾವು ಒಮ್ಮೊಮ್ಮೆ ಅತಿಶಯವಾಗಿ ತಳಮಳಿಸುತ್ತೇವೆ. ಆತನ ಹತ್ತಿರ ಹೋದರೆ ನಾವು ಎಷ್ಟು ತಳಮಳಿಸಬೇಕಾದೀತು ? ಅಧವಾ ತಳಮಳಿಸುವುದೇ ಇಲ್ಲ. ಏಕೆಂದರೆ ನಾವು ಬದುಕಿದ್ದರಷ್ಟೆ ತಳಮಳಿಸುವುದು ! ನಾವು ಸುಟ್ಟು ಹೊಗೆಯಾಗಿ, ಅದೃಶ್ಯವಾಗಿ ಹೇಳಹೆಸರಿಲ್ಲದೆ ಹೋಗುವೆವು. ಪ್ರೊ! ಯಂಗ್ ಎಂಬವನು ಸೂರ್ಯನ ಉಷ್ಣತೆಯ ಕಲ್ಪನೆಯನ್ನು ಮಾಡಿಕೊಡುವುದ ಕ್ಲೋಸುಗ ಒಂದು ಉದಾಹರಣೆಯನ್ನು ಕೊಟ್ಟಿರುವನು. ಅದನ್ನು ಇಲ್ಲಿ ಹೇಳುವೆವು. ೨!! ಮೈಲು ವ್ಯಾಸವುಳ್ಳ ಮತ್ತು ೯ ಕೋಟಿ ಮೈಲು ಎತ್ತರವುಳ್ಳ ಬರ್ಫದ ಒಂದು ಕಂಬವನ್ನು ನಿಲ್ಲಿಸಿ ಅದರಮೇಲೆ ಸೂರ್ಯನ ಎಲ್ಲ ಉಷ್ಣತೆಯನ್ನು ಏಕೀಕರಿಸಿದರೆ, ಸೂರ್ಯನ ಬಿಸಿಲಿನಿಂದ ಅದು ಕರಗಿ ನೀರಾಗುವುದಕ್ಕೆ ಒಂದು ಗಂಟೆಯೂ ಬೇಡ ; ಒಂದು ಮಿನಿಟೂ ಬೇಡ.