ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಕಾಶರಾಜ ಅಥವಾ ಸೂರ್ಯ ೩೭ ಸುಟ್ಟು ಹೊಗೆಯಾಗಿ ಹೋಗುವುದಕ್ಕೆ ಆರುಸಾವಿರ ವರುಷಗಳು ಸಾಕಾಗು ತಿದ್ದವು. ಸೂರ್ಯನಾದರೂ ಲಕ್ಷಾವಧಿ ವರ್ಷಗಳು ಕಳೆದುಹೋದರೂ ಇದ್ದಕ್ಕಿದ್ದಂತೆಯೇ ಇದ್ದಾನೆ. ಇಷ್ಟೇ ಅಲ್ಲ; ದಿನದಿನಕ್ಕೆ ಹೆಚ್ಚು ಕಾಯು ತಲೇ ಹೋಗುವನೆಂದು ಶಾಸ್ತ್ರಜ್ಞರು ಹೇಳುತ್ತಾರೆ. ಈ ಚಮತ್ಕಾರದ ಗೂಢವೇನು ? ಸೂರ್ಯನು ವಾಯುರೂಪ ಪದಾರ್ಥವಾಗಿರಬೇಕೆಂದು ನಾವು ಮೇಲೆ ಹೇಳಿದೆವಷ್ಟೆ. ಆದರೆ ಈ ವಾಯುರೂಪ ಪದಾರ್ಧದಲ್ಲಿ ಉಷ್ಣತೆಯನ್ನು ಹೊರಚೆಲ್ಲಿದರೂ ಅದು ಕಡಿಮೆಯಾಗದೆ ಹೆಚ್ಚಾಗುವ ಶಕ್ತಿ ಯೆಲ್ಲಿಂದ ಬಂತು ? ಇದಕ್ಕೆ ಕೆಲವು ಕಾರಣಗಳುಂಟು. ಮೊದಲನೆಯ ಕಾರಣವೆಂದರೆ, ಗುರುತ್ವಾಕರ್ಷಣ ಶಕ್ತಿಯು, ಸೂರ್ಯವೆಂದರೊಂದು ವಾಯುರೂಪ ಪದಾರ್ಥಗಳ ಗೋಲವು. ಈ ಗೋಲದ ಎಲ್ಲ ಪರಮಾಣುಗಳು ಗುರುತ್ವಾ ಕರ್ಷಣ ಶಕ್ತಿಯ ಮೂಲಕ, ಮಧ್ಯಬಿಂದುವಿನ ಕಡೆಗೆ ಜಗ್ಗಲ್ಪಡುತ್ತವೆ. ಎಂದರೆ ಸೂರ್ಯನ ಮೇಲಿನ ಭಾಗದಲ್ಲಿರುವ ಪರಮಾಣುಗಳು ಸೂರ್ಯನ ಹೊಟ್ಟೆಯ ಮಧ್ಯಕ್ಕೆ ವೇಗದಿಂದ ಓಡುತ್ತಿವೆ. ಹೀಗೆ ಅವು ಒಳಕ್ಕೆ ಬಿದ್ದ ಕೂಡಲೆ, ಅಲ್ಲಿ ಭಯಂಕರವಾದ ಶಕ್ತಿಯು ಉತ್ಪನ್ನವಾಗುವುದು. ಮತ್ತು ಆ ಶಕ್ತಿಯು ಉಷ್ಣತೆಯಾಗುವುದು. ವೇಗದಿಂದ ಹೋಗುವ ಯಾವ ಪದಾರ್ಧವು ನಿರೋಧಿಸಲ್ಪಟ್ಟರೂ ಅಲ್ಲಿ ಉಷ್ಣತೆಯು ಹೊರಡುವುದೆಂಬು ದಕ್ಕೆ ನಾವು ಅನೇಕ ಉದಾಹರಣೆಗಳನ್ನು ಕೊಡಬಹುದು. ಎರಡು ಕಟ್ಟಿ ಗೆಯ ತುಂಡುಗಳನ್ನು ಒಂದಕ್ಕೊಂದು ತಿಕ್ಕಿದರೆ ಉಷ್ಣತೆ ಹುಟ್ಟುವುದು. ಚಕಮಕಿ ಕಲ್ಲಿನಮೇಲೆ ಉಕ್ಕಿನ ತುಂಡನ್ನು ಹೊಡೆದರೆ ಬೆಂಕಿಯು ಹುಟ್ಟು ವುದು, ಕಡ್ಡಿಪೆಟ್ಟಿಗೆಯಮೇಲೆ ಕಡ್ಡಿಯನ್ನೆಳೆದರೆ ಸಾಕು, ಉರಿಯ ಹತ್ತುವುದು, ಸೂರ್ಯನಲ್ಲಿಯೂ ಇದೇ ಸ್ಪಿತಿಯಾಗುತ್ತದೆ. ಮೇಲ್ಬಾಗವು ಒಳಕ್ಕೆ ಬೀಳುವುದರಿಂದ ಉಷ್ಣತೆಯು ಹುಟ್ಟುತ್ತದೆ. ಇದರಿಂದ ಸೂರನ ಉಷ್ಣತೆಯು ಇದ್ದಕ್ಕಿದ್ದಂತೆ ಉಳಿಯುವುದಕ್ಕೆ ಮಾರ್ಗವಾಗಿರುತ್ತದೆಂದು ಹೆಲ್ಮ ಹೋಜ ಎಂಬವನು ತಿಳಿಸಿಹೇಳಿದನು. ಆದರೆ ಇಷ್ಟೆ ಕಾರಣವು ಸಾಲದು. ಏಕೆಂದರೆ, ಸೂರ್ಯನ ಮೇಲ್ಬಾಗವು ದಬ್ಬನೆ ಒಳಗೆ ಕಡಕೊಂಡು ಬೀಳುತ್ತಿದ್ದ ಬಳಿಕ ಸೂರ್ಯನು ಸಣ್ಣವನಾಗುತ್ತ ಹೋಗಬೇಕಾಯಿತು.