ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಶಾಸ್ತ್ರಜ್ಞರು ಲೆಕ್ಕಹಾಕಿ ನೋಡಿದ್ದಾರೆ. ಈ ಕಾರಣದಿಂದ ಒಂದು ಸಾವಿರ ವರ್ಷಗಳಲ್ಲಿ ಆತನ ವ್ಯಾಸವು ೮೦ ಮೈಲಿನಷ್ಟು ಕಡಿಮೆಯಾಗಬೇಕೆಂದು ತರ್ಕಿಸಿದ್ದಾರೆ. ಆತನ ವ್ಯಾಸವು ಒಟ್ಟು ೮೦ ಲಕ್ಷ ಮೈಲು ಇರುವುದರಿಂದ ಈ ಲೆಕ್ಕದಿಂದ ಆತನು ಒಂದು ಲಕ್ಷ ವರುಷ ಮಾತ್ರ ಬಾಳಬೇಕಾಯಿತು. ಭೂಮಿಯು ಹುಟ್ಟಿ ೧೦ ಸಾವಿರ ಲಕ್ಷ ವರುಷಗಳಾದರೂ ಆಗಿರಬೇಕೆಂದು ಭೂಗರ್ಭಶಾಸ್ತ್ರವು ಹೇಳುತ್ತದೆ. ಆದುದರಿಂದ ಸೂರ್ಯನು ಹುಟ್ಟಿ ಇನ್ನೂ ಎಷ್ಟೋ ವರುಷಗಳಾಗಿರಬೇಕೆಂಬುದು ಸ್ಪಷ್ಟವಿದೆ. ಎಂದಮೇಲೆ ಉಷ್ಣತೆಯ ಉಳಿಯುವುದಕ್ಕೆ ಬೇರೊಂದು ಕಾರಣವಿರಬೇಕು. ಆ ಕಾರಣವು ಯಾವುದು ? ಇತ್ತೀಚೆಗೆ ಕೆಲವು ವರುಷಗಳಲ್ಲಿ, ಪದಾರ್ಧದ ವಿಷಯಕ್ಕೆ ನಮಗಿರುವ ಕಲ್ಪನೆಯು ಹೊಸ ಶೋಧಗಳಿಂದ ತೀರ ಬದಲಾಗಿದೆ. ಪದಾರ್ಧವೆಂದರೆ ಸಣ್ಣ ಸಣ್ಣ ಕಣಗಳಿಂದ ಕೂಡಿದ್ದೊಂದು ಮುದ್ದೆಯು; ಈ ಕಣಗಳು ಅವಿನಾಶಿಗಳು ; ಅವುಗಳನ್ನು ಒಡೆಯುವುದು ಅಶಕ್ಯವು ; ಉದಾ:-ಕಡೆತನಕ ಬಂಗಾರದ ಕಣಗಳು ಬಂಗಾರದವೆ ಉಳಿಯುವವುಎಂದು ತಿಳಿಯಲ್ಪಡುತ್ತಿತ್ತು. ಆದರೆ ಈ ಕಣಗಳು ಪದಾರ್ಥಗಳ ಅಂತಿಮ ತುಣುಕುಗಳಲ್ಲವೆಂದು ಈಗ ತಿಳಿದಿದೆ. ಇವು ನಿಜವಾಗಿ ಸೂರ್ಯಮಾಲೆ ಯಂತಹ ಗುಂಪುಗಳಾಗಿರುವವು. ಎಂದರೆ ಇವುಗಳಲ್ಲಿ, ಪ್ರತಿಯೊಂದು ಕಣದ ಮಧ್ಯದಲ್ಲಿ ಒಂದು ಬ್ರಿಟನ್ (Proton) ಎಂಬ ಗೊಲವಿರುವುದು. ಇದನ್ನು ಸೂರ್ಯನಿಗೆ ಹೋಲಿಸಬಹುದು. ಸೂರ್ಯನ ಸುತ್ತಲು ಗ್ರಹ ಗಳು ತಿರುಗುವಂತೆ ಇದರ ಸುತ್ತಲು ಇದಕ್ಕೂ ಸಣ್ಣ ದ್ರವ್ಯಗಳು ತಿರುಗುತ್ತಿರುವುವು. ಇವುಗಳಿಗೆ ಆಯೆ ನ್ಸ್ (Ions) ಎನ್ನುವರು. ಹೈಡೋಜನ್ ವಾಯುವಿನ ಕಣಗಳಲ್ಲಿ ಒಂದು ಬ್ರಿಟನ್ನಿನ ಸುತ್ತಲು ಒಂದೇ ಆಯನ್ ತಿರುಗುತ್ತಿರುತ್ತದೆ. ಬೆಳ್ಳಿಯ ಕಣಗಳಲ್ಲಿ ಪ್ರೋಟನ್ನಿನ ಸುತ್ತಲು ೪೭ ಆಯನಗಳು ತಿರುಗುತ್ತಿರುವವು. ಎಲ್ಲ ಪದಾರ್ಥಗಳಲ್ಲಿಯ ಪ್ರೋಟನ್ನು ಗಳೂ ಆಯನ್ನ ಗಳೂ ಒಂದೇ ಇರುವವು. ಇವಕ್ಕೆ ದ್ರವ್ಯ ಗಳೆನ್ನು ವುದಕ್ಕಿಂತಲೂ ಇವು ಶಕ್ತಿಮಯವೇ ಆಗಿರುವವೆನ್ನುವುದು ಹೆಚ್ಚು ಸಯ ಕ್ರಿಕವಾಗುವುದು. ಇವು ಶಕ್ತಿಯ ಸಣ್ಣ ಸಣ್ಣ ಗಂಟುಗಳಾಗಿರುವವು. ಭೂಮಿಯ ಮೇಲಿನಂತಹ ಸೌಮ್ಯ ಉಷ್ಣತೆಯಲ್ಲಿ ಈ ಅಣುಸೂರ್ಯ