ವಿಷಯಕ್ಕೆ ಹೋಗು

ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಕಾಶರಾಜ ಅಥವಾ ಸೂರ್ಯ ಮಾಲೆಗಳು ಬಿಚ್ಚದಷ್ಟು ದೃಢವಾಗಿರುವವು. ಆದುದರಿಂದ ಬೆಳ್ಳಿಯು ಬೆಳ್ಳಿಯೆ ಉಳಿಯುವುದು; ಎಂದೂ ಬಂಗಾರವಾಗದು. ಆದರೆ ಸೂರ್ಯನಲ್ಲಿ ಯಂತಹ ಪ್ರಚಂಡ ಉಷ್ಣತೆಯಲ್ಲಿ ಏನಾಗಲಿಕ್ಕಿಲ್ಲ? ಭೂಮಿಯ ಮೇಲೆ ಕೃತ್ರಿಮ ರೀತಿಯಿಂದ ೩,೦೦೦-೪,೦೦೦ ಅಂಶಗಳ ಉಷ್ಣತೆಯನ್ನು ಹುಟ್ಟಿಸಿ ಕೆಲವು ಪದಾರ್ಥಗಳ ಕಣಗಳಲ್ಲಿಯ ಆಯಗಳನ್ನು ಹಾರಿಸಿ ತೋರಿಸಿರು ವರು. ಇದರಿಂದ ಆ ಪದಾರ್ಥಗಳ ಗುಣಧರ್ಮಗಳೆ ಬದಲಾಗುವವು. ಸೂರ್ಯನಲ್ಲಂತೂ ಇಂತಹದೊಂದು ವಿಲಕ್ಷಣವಾದ ಭಟ್ಟಿಯೆ ಇರು ವುದೆಂದು ಹೇಳಬಹುದು. ಅಲ್ಲಿ ಈ ಪದಾರ್ಥಗಳ ಕಣಗಳು ಒಡೆಯ ಲ್ಪಡುವವು. ಅವುಗಳೊಳಗಿನ ಆಯಸ್ಸಗಳು ಚದರಿಸಲ್ಪಡುವವು. ಹೀಗೆ ಚದರಿಸಲ್ಪಟ್ಟ ಕೂಡಲೆ, ಅವು ತಮ್ಮ ಮೂಲರೂಪವಾದ ಶಕ್ತಿಯಾಗಿ ಪರಿಣಮಿಸುವವು. ಒಂದು ತೊಲೆ ಕಲ್ಲಿದ್ದಲಿಯನ್ನು ನಾವು ಸುಟ್ಟರೆ ನಮಗೆ ಎಷ್ಟು ಉಷ್ಣತೆ ದೊರೆಯಬಹುದು ? ಬಹಳ ದೊರೆಯಲಾರದು. ಅದೇ ಒಂದು ತೊಲೆಯಲ್ಲಿಯ ಕಣಗಳೆಲ್ಲ ಒಡೆಯಲ್ಪಟ್ಟು, ಅವುಗಳಲ್ಲಿಯ ಆಯನ್ನ ಗಳೆಲ್ಲ ಶಕ್ತಿರೂಪವಾಗಿ ಪರಿಣಮಿಸಿದರೆ ಒಂದು ಲಕ್ಷ ಟನ್ನು ಕಲ್ಲಿದ್ದಲಿಯನ್ನು ಸುಟ್ಟಷ್ಟು ಉಷ್ಣತೆಯಾಗುವುದು. ಒಂದು ಹನಿ ಎಣ್ಣೆಯನ್ನು ಸುಟ್ಟರೆ ಎಷ್ಟು ಉಷ್ಣತೆಯು ದೊರೆಯಬಹುದು ? ಅದೇ, ಆ ಹನಿಯೊಳಗಿನ ಎಲ್ಲ ಕಣಗಳನ್ನು ಒಡೆದು ಅವುಗಳೊಳಗಿನ ಆಯತ್ನಗಳನ್ನು ಚದರಿಸಿದರೆ, ೫೦ ಸಾವಿರ ಕುದುರೆಗಳ ಶಕ್ತಿಯ ಎಂಜನವನ್ನಿಟ್ಟು ಒಂದು ವಾರದವರೆಗೆ ನಡೆಸುವಷ್ಟು ಶಕ್ತಿಯು ದೊರೆಯುವುದು. ಹೀಗೆ ಈಗ ಸೂರ್ಯನಿಂದ ಹೊರಹೊರಡುವ ಶಕ್ತಿಯನ್ನು ಪೂರೈಸಬೇಕಾದ ದಿನಾಲು ೩೬೦,೦೦೦, ೦೦೦,೦೦೦ ಟನ್ನು ಗಳು ನಾಶಹೊಂದಬೇಕಾಗುವುದು. ಹೀಗೆ ಆಗುತ್ತ ಹೋದರೆ ಸೂರ್ಯನು ಇನ್ನೂ ಅಬ್ಬಾವಧಿ ವರುಷಗಳವರೆಗೆ ಬಾಳಬಹುದು. ಸೂರ್ಯನು ಕಣ್ಣಿಗೆ ಸ್ವಚ್ಛ ಪ್ರಕಾಶವುಳ್ಳವನಾಗಿ ತೋರಿದರೂ ದುರ್ಬಿನುಗಳಿಂದ ನೋಡಿದರೆ, ಆತನಮೇಲೆ ಲಕ್ಷಾವಧಿ ಮೈಲು ದೊಡ್ಡ ವಾದ ಮತ್ತು ವಿಲಕ್ಷಣವಾದ ಕಪ್ಪು ಕಲೆಗಳು ಕಾಣುತ್ತವೆ. ಇವುಗಳ ವಿಷಯವಾಗಿ ಬಹಳ ಶೋಧವು ನಡೆದಿದೆ. ವಿಶ್ವಸನೀಯವಾದ ಸಂಗತಿಗಳು ವಿಶೇಷವಾಗಿ ಗೊತ್ತಾಗಿಲ್ಲ. ಸೂರ್ಯನಮೇಲೆ ಇಷ್ಟು ಉಷ್ಣತೆಯಿರುವುದ