ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಕಪ್ಪು ಕಲೆಗಳೂ ಹೋಗುವವು. ಅವುಗಳ ಬದಲಾಗಿ ಹಳದಿ ಮುಂತಾದ ಬಣ್ಣಗಳಿಂದ ಹೊಳೆಯುವ ಅಸಂಖ್ಯ ಗೆರೆಗಳು ಕಂಗೊಳಿಸುವವು. ಖಗ್ರಾಸ ಸೂರ್ಯಗ್ರಹಣದಲ್ಲಿ ಸೂರ್ಯನ ಸುತ್ತಲು ಲಕ್ಷಾವಧಿ ಮೈಲುಗಳವರೆಗೆ ಒಂದು ಅತ್ಯಂತ ಸುಂದರವಾದ ಮತ್ತು ತೆಳ್ಳಗಾದ ಆವರಣವು ಹಬ್ಬಿದ್ದು ಕಂಡುಬರುತ್ತದೆ. ಇದಕ್ಕೆ ಸೂರ್ಯನ ಸುಂದರ ಮುಕುಟವನ್ನು ತ್ತಾರೆ. ಇದು ಖಗ್ರಾಸ ಸೂರ್ಯಗ್ರಹಣದ ವೇಳೆಯಲ್ಲಿ ಮಾತ್ರವೆ ಬಹಳ ಹೆಚ್ಚಾದರೆ, ೨ ಮಿನಿಟುಗಳವರೆಗೆ ಕಾಣುವುದರಿಂದ ಇದರ ವಿಷಯವಾಗಿ ಇನ್ನೂ ನಿಶ್ಚಿತವಾಗಿ ಏನೂ ತಿಳಿದಿಲ್ಲ. ಖಗ್ರಾಸ ಸೂರ್ಯಗ್ರಹಣವಾಗುವುದೆ ಕ್ವಚಿತ. ಆಗ ಕೂಡ ೧-೨ ನಿಮಿಷಗಳಲ್ಲಿಯೆ ಈ ಮುಕುಟದ ಸಂಬಂಧದ ಎಲ್ಲ ಜ್ಞಾನವನ್ನು ದೊರಕಿಸಬೇಕಾಗುತ್ತದೆ. ಖಗ್ರಾಸ ಸೂರ್ಯಗ್ರಹಣವಾಗುವ ಸ್ಥಳಕ್ಕೆ ಮತ್ತು ಸಮಯಕ್ಕೆ ಜಗತ್ತಿನ ಪ್ರಸಿದ್ಧ ಜ್ಯೋತಿಷಿಗಳು ಧಾವಿಸಿಹೋಗುವುದಕ್ಕೂ ಇದೆ ಕಾರಣ. ಇದರಲ್ಲಿಯ ದ್ರವ್ಯವು ಅತಿ ತೆಳ್ಳಗಾದುದು. ಇದರೊಳಗಿಂದ ನಾವು ಹಾಯ್ದರೂ ನಮಗೆ ಏನೂ ಎನಿಸದು. ಇದು ಇಷ್ಟು ವಿರಲವಾಗಿರು ವುದರಿಂದಲೆ ಮಂದಪ್ರಕಾಶದ್ದಾಗಿರುವುದು. ಆದುದರಿಂದ ಖಗ್ರಾಸ ಗ್ರಹಣದ ವೇಳೆಯ ಹೊರತು ಅದು ಕಾಣುವುದಿಲ್ಲ. ಸೂರ್ಯನಿಂದ ಈ ಮುಕುಟವು ಇಷ್ಟು ದೂರ ಹಬ್ಬಿರುವುದು ಹೇಗೆ ? ಸೂರ್ಯನ ಆಕರ್ಷಣಶಕ್ತಿಯು ಬಲು ದೊಡ್ಡದು. ಸೂರ್ಯನ ಬಹು ಭಾಗವು ಈ ಆಕರ್ಷಣದಿಂದಲೆ ಗೋಲರೂಪವಾಗಿರುವುದು. ತುಸು ಭಾಗವು ಮಾತ್ರವೇ ಮುಕುಟರೂಪವಾಗಿ ಹರಡಿರುವುದು ಹೇಗೆ? ಹೀಗೆ ಹರಡಬೇಕಾದರೆ ಸೂರ್ಯನ ಆಕರ್ಷಣವು ಇದರಲ್ಲಿಯ ಕಣಗಳನ್ನು ಒಳಕ್ಕೆ ಜಗ್ಗುವಂತೆ ಇವುಗಳನ್ನು ಹೊರದೂಡಲಿಕ್ಕೊಂದು ಶಕ್ತಿಯು ಬೇಕಲ್ಲವೆ? ಈ ಶಕ್ತಿಯು ಸೂರ್ಯನಿಂದ ಹೊರಡುವ ಅಸಂಖ್ಯ ಪ್ರಕಾಶ ಕಿರಣಗಳಿಂದ ದೊರೆಯುವುದು. ಈ ಕಿರಣಗಳು, ಅದರಲ್ಲಿಯ ಕಣಗಳು ಒಳಗೆ ಬರಲಿಕ್ಕೆ ಪ್ರಯತ್ನಿಸಿದಂತೆ, ಇವುಗಳನ್ನು ಹೊರಕ್ಕೆ ದೂಡುವವು. ಇವು ಬಹಳದೂರ ಹೋಗಹತ್ತಲು ಗುರುತ್ವಾಕರ್ಷಣವು ಒಳಗೆ ಜಗ್ಗು ವುದು. ಹೀಗಾಗಿ ಇವು ಬಹಳ ದೂರ ಹೋಗದೆಯ ಒಳಕ್ಕೆ ಬರದೆಯೂ ಉಳಿಯುವುವು.