________________
೭ ನೆಯ ಪ್ರಕರಣ ಚಂದ್ರ ಸೂರ್ಯ ಚಂದ್ರರಿಬ್ಬರು ಕಣ್ಣಿಗೆ ಸಮಸಮಾನ ಆಕೃತಿಯುಳ್ಳವರಾಗಿ ಕಂಡರೂ ನಿಜವಾಗಿ ಅವರಿಬ್ಬರಲ್ಲಿ ಬಹಳ ಭೇದವಿದೆ. ಸೂರ್ಯನು ಭೂಮಿಯದಷ್ಟೆ ಅಲ್ಲ ಇಡೀ ಗ್ರಹಮಾಲೆಯ ಅಧಿಪತಿ. ಆದರೆ ಚಂದ್ರನು ಭೂಮಿಯ ಅಂಕಿತನು. ಸೂರ್ಯನ ಸುತ್ತಲು, ಭೂಮಿ, ಮಂಗಳ, ಬುಧ, ಗುರು ಮುಂತಾದ ಗ್ರಹಗಳು ತಿರುಗುತ್ತವೆ. ಆದರೆ ಚಂದ್ರನು ಪೃಥ್ವಿಯ ಸುತ್ತಲು ತಿರುಗುತ್ತಾನೆ. ಸೂರ್ಯನು ನಮ್ಮಿಂದ ೯ ಕೋಟಿ ಮೈಲು ಆಚೆಯಿರುವನು. ಚಂದ್ರನ ಅಂತರವು ನಮ್ಮಿಂದ ೨ ಲಕ್ಷ ಮೈಲು ಮಾತ್ರ, ಸೂರ್ಯಗೊಲದ ವ್ಯಾಸವು ಎಂಟುಲಕ್ಷ ಮೈಲು; ಚಂದ್ರ ಗೋಲದ ವ್ಯಾಸವು ೨ ಸಾವಿರ ಮೈಲು ಮಾತ್ರ, ಚಂದ್ರನಂತಹ ೬೦ ಗೋಲ ಗಳನ್ನು ಕಲೆಹಾಕಿದರೆ, ಭೂಮಿಯಂತಹದೊಂದು ಗೋಲವಾಗುವುದು. ಸೂರ್ಯನು ಸ್ವಪ್ರಕಾಶದಿಂದ ಝಗಝಗಿಸುತ್ತಿದ್ದರೆ, ಚಂದ್ರನು ತನ್ನ ಮೋರೆಯ ಮೇಲೆ ಬೀಳುವ ಸೂರ್ಯನ ಪ್ರಕಾಶದಿಂದ ಮಾತ್ರ ಹೊಳೆಯು ವನು. ಸೂರ್ಯಗೊಲದ ಮೇಲೆ ಎಲ್ಲ ವಸ್ತುಗಳು ವಾಯುರೂಪ ವಾಗುವಷ್ಟು ಶಕೆಯಿದ್ದರೆ, ಚಂದ್ರನು ಆರಿ ತಣ್ಣಗಾದವನು. ಒಂದು ಗಂಟೆಗೆ ೬೦ ಮೈಲಿನಂತೆ ಓಡುವ ಉಗಿಬಂಡಿಯಲ್ಲಿ ಕುಳಿತುಕೊಂಡು ಹೊರಟರೆ, ನಾವು ೬ ತಿಂಗಳಲ್ಲಿ ಚಂದ್ರನ ಬಳಿಗೆ ಹೋಗಬಹುದು. ಚಂದ್ರನು ಕವಿಗಳ ಕಣ್ಣಿಗೆ ಅಂದನಾಗಿ ತೋರಿದರೂ ಜ್ಯೋತಿಷಿಗಳ ಕಣ್ಣಿಗೆ ಆತನು ಅಂದಗೇಡಿಯು. ಏಕೆಂದರೆ ಆತನಿಗುಂಟಾದ ಅಂದವೆಲ್ಲವೂ ಸೂರ್ಯನಿಂದಲೆ ಕಟ್ಟಡ ತೆಗೆದುಕೊಂಡುದು. ಸ್ವತಃ ಚಂದ್ರನನ್ನು ನೋಡಿದರೆ ಸೃದ್ಧಿಯಂತೆ ಕರಿನನು. ಆದರೆ ಪೃಥ್ವಿಯ ಕಠಿನವಾದರೂ ಅದು ಪ್ರಾಣಿಗಳ ಆವಾಸಕ್ಕೆ ಅನುವು ಕೊಡುತ್ತದೆ. ಚಂದ್ರನಾದರೊ ಮೃತಶರೀರನು. ಆದುದರಿಂದ ಅಲ್ಲಿ ಯಾವ ಪ್ರಾಣಿಗಳ ಆವಾಸಕ್ಕೂ ಆಸ್ಪದವಿರುವುದಿಲ್ಲ. ಸೃದ್ಧಿಗೆ ಚಂದ್ರನು ತೀರ ಸಾದನು. ಅದಕ್ಕಿಂತ ಸೃದ್ಧಿಗೆ ಸವಿಾಪವಾದ ಗ್ರಹವು ಬೇರೊಂದಿಲ್ಲ. ಬರಿಗಣ್ಣಿನಿಂದ ನೋಡಿ