ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜ್ಯೋತಿಶ್ಯಾಸ್ತ್ರ ಪ್ರಕಾಶಿಸುವಾಗ ಕೂಡ ನಕ್ಷತ್ರಗಳೆಲ್ಲವೂ ಧಳಧಳನೆ ಹೊಳೆದು ಕಾಣುವವು. ಭೂಮಿಯಮೇಲೆ, ಹಗಲು ನಕ್ಷತ್ರಗಳು ಕಾಣದಿರುವುದಕ್ಕೆ ಕಾರಣ ವೇನೆಂದರೆ, ಸೂರ್ಯನ ಕಿರಣಗಳು ನಮ್ಮ ಹವೆಯಲ್ಲಿ ಹರಡಿಕೊಳ್ಳುವುದ ರಿಂದ, ಅದೊಂದು ಅಡ್ಡ ಪರದೆಯಂತಾಗಿ ನಕ್ಷತ್ರಗಳು ನಮಗೆ ಕಾಣ ದಾಗುವುವು. ಚಂದ್ರಲೋಕಕ್ಕೆ ನಾವು ಹೋದರೆ ಅಲ್ಲಿ ನಮ್ಮ ಕಣ್ಣಿನ ಎದುರಿನಲ್ಲಿ ಇಂತಹ ಅಡ್ಡ ಪರದೆಯು ಇರುವುದಿಲ್ಲ. ಆದುದರಿಂದ ಸೂರ್ಯನ ತೇಜೋಮಯ ಮೂರ್ತಿಯ ಆತನನ್ನು ಆವರಿಸಿರುವ ಜ್ವಾಲೆಗಳೂ ಆತನು ಧರಿಸಿದ ಮುಕುಟವೂ ಎಲ್ಲವೂ ಸ್ಪಷ್ಟವಾಗಿ ಕಾಣುವುವು. ಚಂದ್ರಲೋಕ ದಿಂದ ನೋಡಿದರೆ ನಮ್ಮ ಸೃದ್ಧಿಯು ಇಲ್ಲಿಯ ಚಂದ್ರನಿಗಿಂತ ೧೩-೧೪ ಪಟ್ಟು ದೊಡ್ಡದಾದ ಚಂದ್ರನಂತೆ ಕಾಣುವುದು. ಸೂರ್ಯನು ಮುಳುಗಿ ದರೂ ಈ ಸೃದ್ಧಿ-ಚಂದ್ರನು ಸತತವಾಗಿ ಕಂಡೆ ಕಾಣುವನು. ಅಹಹಾ! ಚಂದ್ರಲೋಕದ ಮೇಲೆ ನಿಂತುಕೊಂಡು ಅತಿದೊಡ್ಡ ಚಂದ್ರನಂತೆ ಸುಂದರ ನಾಗಿ ಕಾಣುವ ನಮ್ಮ ಸೃಥ್ವಿ-ಚಂದ್ರನನ್ನು ನೋಡಿದರೆ ನಮಗೆ ಎಷ್ಟು ಆನಂದವಾಗಬೇಡ! ನಮ್ಮ ಚಂದ್ರನಿಗೆ ವೃದ್ಧಿ ಕ್ಷಯಗಳು ಇರುವಂತೆ ಈ ಪೃಥ್ವಿ-ಚಂದ್ರನಿಗೂ ವೃದ್ಧಿ ಕ್ಷಯಗಳು ಇರುತ್ತವೆ. ನಮಗೆ ಅಮಾವಾಸ್ಯೆ ಯಾದರೆ ಅಲ್ಲಿ ಪೌರ್ಣಿಮೆ, ಇಷ್ಟೇ ಭೇದ. ಹೀಗೆ, ಚಂದ್ರನು ಸ್ವತಃ ಮೃತಶರೀರನಾದರೂ ಆತನಮೇಲೆ ಕವಿಗಳ ಮತ್ತು ಜನರ ಪ್ರೀತಿಯಿರುವುದಕ್ಕೆ ಆತನ ಪರೋಪಕಾರಬುದ್ದಿಯೇ ಕಾರಣವು. ಏಕೆಂದರೆ ಆತನು ವನಸ್ಪತಿ ರಾಜನು, ಬೆಳದಿಂಗಳಿಂದಲೆ ವನಸ್ಪತಿಗಳು ರಸಪುಷ್ಟಿಯನ್ನು ಹೊಂದುತ್ತವೆ. ಆತನು ಸೂರ್ಯನಿಂದ ಪ್ರಖರವಾದ ಬಿಸಿಲನ್ನು ಸಾಲವಾಗಿ ತೆಗೆದುಕೊಂಡರೂ ಅದಕ್ಕೆ ಶೀತಲ ವಾದ ರೂಪವನ್ನು ಕೊಟ್ಟು ಜನರನ್ನು ಆಹ್ಲಾದಗೊಳಿಸುತ್ತಾನೆ. ಚಂದ್ರ ನಿಲ್ಲದಿದ್ದರೆ ದಿನಾಲು ಅಮಾವಾಸ್ಯೆಯೇ ಅಮಾವಾಸ್ಯೆ! ದುರ್ಬನುಗಳಲ್ಲಿ ಕಾಣುವ ಚಂದ್ರಬಿಂಬದ ಸೌಂದರ್ಯವನ್ನು ಬಣ್ಣಿಸಲಳವಲ್ಲ. ಚೊಕ್ಕ ಬಂಗಾರದಂತೆ ಧಳಧಳಿಸುವ ಬಿಂಬ. ಆದುದರಿಂದಲೆ ಆತನು ಮೃತಶರೀರ ನಾಗಿದ್ದರೂ ಆಹ್ಲಾದಕರನಾಗಿದ್ದಾನೆ. ನಿಲ್ಲದಿದ್ದರೆ ಇವನ್ನು ಕೊಟ್ಟ ಸಾಲವಾಗಿ