ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಮ್ಮ ಮನೆ ೫೧ ವರೆಗಿನ ಪ್ರದೇಶವು ಮಾತ್ರ ಕಾಣುತ್ತದೆ. ಅಲ್ಲಿ ಭೂಮಿಗೆ ಮುಗಿಲು ಮುಟ್ಟಿದಂತೆ ತೋರುತ್ತದೆ. ಅದಕ್ಕೆ ಶಾಸ್ತ್ರಜ್ಞರು ಕ್ಷಿತಿಜವೆನ್ನುವರು. ಆದರೆ ಮುಗಿಲು ಭೂಮಿಗೆ ಅಲ್ಲಿ ನಿಜವಾಗಿ ಮುಟ್ಟಿರುವುದೊ ? ನಾವು ಮುಂದೆ ಮುಂದೆ ಹೋದಂತೆ ಅದೂ ಮುಂದಕ್ಕೆ ಹೋಗುತ್ತದೆ. ಇದಕ್ಕೆ ಕಾರಣವೇನು ? ಸ್ವಲ್ಪ ವಿಚಾರಮಾಡಿದರೆ, ಸೃಥ್ವಿಯು ದುಂಡಾಗಿರುವುದೆ ಇದಕ್ಕೆ ಕಾರಣವೆಂಬುದನ್ನು ನಾವು ಮನಗಾಣುವೆವು. ಎಂಟು ಮೈಲುಗಳ ದೊಂದು ಪಟ್ಟಿಯ ನಡುವಿನ ಭಾಗವು ತುಸು ಉಬ್ಬಿರುವುದನ್ನು ನಾವು ಪ್ರತ್ಯಕ್ಷವಾಗಿ ಅಳೆದು ನೋಡಬಹುದು. ಆದರೆ ಹಾಗೆ ಮಾಡುವುದಕ್ಕೆ ಸೂಕ್ಷ್ಮವಾದ ಮಾಪಕಯಂತ್ರಗಳು ಬೇಕಾಗುವವು. ಬರಿಯ ಕಣ್ಣಿಗೆ ಇದು ಹೊಳೆಯಲಾರದು. ಆದರೆ ಸಮುದ್ರದಲ್ಲಿ ಹಡಗಗಳು ಹೋಗು ವಾಗ ಸೃಥ್ವಿಯು ದುಂಡಗಿರುವುದೆಂಬುದನ್ನು ಸಹಜವಾಗಿ ಕಂಡುಹಿಡಿಯ ಬಹುದು. ಸಮುದ್ರದ ದಂಡೆಯಮೇಲೆ ನಿಂತುಕೊಂಡು ಇಂತಹದೊಂದು ಹಡಗಿನ ಕಡೆಗೆ ನೋಡಿದರೆ ಮೊದಲು ಅದರ ಕೆಳಭಾಗವಷ್ಟೆ ಮರೆಯಾಗಿ ಕಟ್ಟಕಡೆಗೆ ಅದರ ಮೇಲಿನ ಎತ್ತರವಾದ ಪತಾಕೆಯ ಕಂಬಗಳ ತುದಿಗಳು ಕಾಣದಂತಾಗುತ್ತವೆ. ಯಾವುದೊಂದು ಪದಾರ್ಧವು ದುಂಡಗಿದ್ದರೆ ಮಾತ್ರವೆ ಹೀಗಾಗುತ್ತದೆ. ಆದುದರಿಂದ ಸೃಥ್ವಿಯು ಗೋಲಾಕಾರವಾಗಿದೆ ಎಂದು ತಿಳಿಯಲು ಅಡ್ಡಿಯಿಲ್ಲ. ಈ ವಿಷಯದಲ್ಲಿ ಎಲ್ಲಕ್ಕೂ ದೊಡ್ಡ ಆಧಾರವೆಂದರೆ ನಕ್ಷತ್ರಗಳು ನಿತ್ಯದಲ್ಲಿ ಚಲಿಸುವ ಮಾರ್ಗಗಳು ಬೇರೆ ಬೇರೆ ದೇಶಗಳಲ್ಲಿ ಬೇರೆಬೇರೆಯಾಗಿ ಕಾಣುವುದು. ಎಲ್ಲ ಕಡೆಯಲ್ಲಿಯೂ ನಕ್ಷತ್ರಗಳನ್ನೆಲ್ಲ ತೆಗೆದುಕೊಂಡು ಖಗೋಳವು ತನ್ನ ಅಕ್ಷದ ಸುತ್ತಲೂ ತಿರುಗಿದಂತೆ ಕಾಣುತ್ತದೆಂದು ಹಿಂದೆ ಹೇಳಿದೆವಷ್ಟೆ? ಈ ಅಕ್ಷವು ಖಗೋಲವನ್ನು ಛೇದಿಸುವ ಎರಡು ಬಿಂದುಗಳಿಗೆ ಧುವಗಳೆನ್ನುವರು. ಅಲ್ಲಿಯ ನಕ್ಷತ್ರಗಳು ಮಾತ್ರ ಸ್ಥಿರ ವಾಗಿರುತ್ತವೆ. ಇನ್ನು ಭೂಮಿಯು ಒಂದು ಬಯಲಾಗಿದ್ದರೆ ಈ ಧುವ ಗಳು ಎಲ್ಲ ದೇಶಗಳಲ್ಲಿಯೂ ಕ್ಷಿತಿಜದಮೇಲೆ ಒಂದೇ ಅಂತರದಲ್ಲಿಯೆ ಕಾಣ ಬೇಕಾಗಿತ್ತು. ಆದರೆ ಧಾರವಾಡದಲ್ಲಿ ಉತ್ತರ ಧ್ರುವನಕ್ಷತ್ರವು ಉತ್ತರಕ್ಕೆ ಕ್ಷಿತಿಜದಮೇಲೆ ೧೫ ಅಂಶ ಮಾತ್ರ ಇರುತ್ತದೆ; ಕಲಕತ್ತೆಯಲ್ಲಿ ೨೬ ಅಂಶ;