ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

وع ಜ್ಯೋತಿಶ್ಯಾಸ್ತ್ರ ಗೊತ್ತುಪಡಿಸುವುದೂ-ಇವೆ ಮುಂತಾದುವುಗಳು ಜ್ಯೋತಿಶಾಸ್ತ್ರದ ಮಹತ್ವದ ವಿಷಯಗಳಾಗಿವೆ. - ಖಗ್ರಾಸ ಸೂರ್ಯಗ್ರಹಣದ ಕಾಲದಲ್ಲಿಯೆ ಸೂರ್ಯನ ಸುತ್ತಲೂ ಇರುವ ಮುಕುಟವು ಕಾಣಿಸುವುದು. ಸೂರ್ಯನ ಸುತ್ತಲಿನ ಜ್ವಾಲೆಗಳೂ ಕೂಡ ಬರಿಗಣ್ಣಿಗೆ ಕಾಣುವವು. ಸೂರ್ಯನಿಗೆ ಬುಧನಿಗಿಂತ ಹತ್ತಿರದಲ್ಲಿ ಗ್ರಹಣಗಳು ಇದ್ದದ್ದೆ ಆಗಿದ್ದರೆ ಅವು ಮುಂಜಾನೆ ಸಂಜೆಗಳಲ್ಲಿ ಬಹಳ ತುಸುಹೊತ್ತು ಮಾತ್ರ ಕಾಣಬಹುದಾಗಿತ್ತು. ಆಗ ಪ್ರಕಾಶವಿರುವುದ ರಿಂದ ಅವುಗಳನ್ನು ನೋಡುವುದು ಸುಲಭವಲ್ಲ. ಖಗ್ರಾಸ ಸೂರ್ಯ ಗ್ರಹಣಗಳಲ್ಲಿ ಮಾತ್ರ ನಾವು ಇವುಗಳನ್ನು ನೋಡಬಹುದು. ಆದರೆ ಇಂತಹ ಯಾವ ಗ್ರಹಗಳೂ ಕಾಣಿಸುವುದಿಲ್ಲವಾದುದರಿಂದ ಬುಧನೇ ಸೂರ್ಯನ ಅತ್ಯಂತ ಸಮೀಪದ ಗ್ರಹವೆಂದು ಹೇಳಬಹುದು. ಸೂರ್ಯನ ಹತ್ತರವಿರುವ ನಕ್ಷತ್ರಗಳೂ ಖಗ್ರಾಸ ಗ್ರಹಣದಲ್ಲಿಯೇ ಕಾಣುವವು. ಖಗ್ರಾಸ ಗ್ರಹಣಗಳು ಮೇಲಿಂದಮೇಲೆ ಆಗುವುದಿಲ್ಲ. ಚಂದ್ರ ಸೂರ್ಯರ ಬಿಂಬಗಳು ಸಾಧಾರಣವಾಗಿ ನೋಡಲಿಕ್ಕೆ ಅಷ್ಟೇ ಆಕಾರದ ವಿರುವುದರಿಂದ ಚಂದ್ರನಿಂದ ಸೂರ್ಯನು ಸಂಪೂರ್ಣ ಮುಚ್ಚಲ್ಪಡಲಿಕ್ಕೆ ಚಂದ್ರನು ಸೂರ್ಯನ ಮುಂದೆ ಬರಬೇಕಾಗುವುದು. ಹೀಗೆ ಬಂದರೂ ಖಗ್ರಾಸ ಗ್ರಹಣವು ಭೂಮಿಯಮೇಲೆ ಸಣ್ಣ ಪ್ರದೇಶದಲ್ಲಿ ಮಾತ್ರ ಕಾಣುವುದು. ಇಂತಹ ಪ್ರದೇಶವು ಬರ್ಫಾಚ್ಛಾದಿತ ಭಾಗದಲ್ಲಾಗಲಿ ಸಮುದ್ರದಮೇಲಾಗಲಿ ಆಫ್ರಿಕಾಖಂಡದ ಮಧ್ಯದಂತಹ ನಿರ್ಮಾನುಷ ವಾದ ಅರಣ್ಯಗಳಲ್ಲಿಯಾಗಲಿ ಇದ್ದರೆ ಅವುಗಳಿಂದ ಏನೂ ಉಪಯೋಗ ವಾಗುವುದಿಲ್ಲ. ಎಲ್ಲ ರೀತಿಯಿಂದಲೂ ಅನುಕೂಲವಾದ ಪರಿಸ್ಥಿತಿಯಲ್ಲಿ ಘಟಿಸುವ ಸೂರ್ಯಗ್ರಹಣಗಳು ತೀರಕಡಿಮೆ. ಹಿಂದುಸ್ತಾನದಲ್ಲಿ ಈಗ ೩೦ ವರುಷಗಳ ಹಿಂದೆ ಇಂತಹದೊಂದು ಯೋಗವು ಬಂದಿತ್ತು. ಆಸ್ಟ್ರೇಲಿಯಾ ಖಂಡದಲ್ಲಿ ೨-೩ ವರುಷಗಳ ಹಿಂದೆ ಒಂದು ಖಗ್ರಾಸ ಗ್ರಹಣವಾಯಿತು. ಇಂಗ್ಲೆಂಡಿನಲ್ಲಿ ೧೭೨೪ನೆಯ ಇಸ್ವಿಯಿಂದ ೧೯೨೭ನೆಯ ಇಸ್ವಿಯವರೆಗೆ ಖಗ್ರಾಸ ಗ್ರಹಣಗಳು ಕಂಡಿರಲಿಲ್ಲ.