ಪುಟ:ಜ್ಯೋತಿಷ್ಯಶಾಸ್ತ್ರ ಗ್ರಂಥ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೮ ಜ್ಯೋತಿಶ್ಯಾಸ್ತ್ರ ಗಳಿಗೊಮ್ಮೆ ಕ್ರಾಂತಿವೃತ್ತದ ಪರ್ಯಟನವನ ಮುಗಿಸುವುದರಿಂದ ದಿನಾಲು ಒಂದು ನಕ್ಷತ್ರದೊಳಗಿಂದ ಹಾಯುವನು. ಈ ೨೭ ನಕ್ಷತ್ರ ಪುಂಜಗಳಿಗೆ ಅಶ್ವಿನೀ, ಭರಣಿ ಮುಂತಾದ ಹೆಸರುಗಳಿರುವವು. ಪಾಶ್ಚಾತ್ಯ ರಲ್ಲಿಯೂ ಅವಕ್ಕೆ ಬೇರೆ ಬೇರೆ ಹೆಸರುಗಳುಂಟು. ಆದರೆ ಅವರಲ್ಲಿ ಇವು ಗಳಿಗೆ ಅಷ್ಟು ಮಹತ್ವವಿಲ್ಲ. - ೧೨ ರಾಶಿಗಳೊಳಗಿನ ಕೆಲವನ್ನಂತೂ ನಾವು ಸುಲಭವಾಗಿ ಗುರುತಿಸ ಬಹುದು. ಇಂತಹವುಗಳಲ್ಲಿ ಮಿಧುನವೊಂದಾಗಿದೆ. ಪುನರ್ವಸು, ಪುಷ್ಯ ಎಂಬವು ಈ ಜೋಡುಗೊಂಬೆಗಳ ತಲೆಗಳು, ಆಕಾಶಗಂಗೆಯಮೇಲೆ ಕಾಲುಗಳನ್ನಿಟ್ಟುಕೊಂಡು ನಿಂತಂತಿರವ ಈ ಗೊಂಬೆಗಳನ್ನು ನಾವು ಸಹಜ ವಾಗಿಯೇ ಗೊತ್ತುಮಾಡಿಕೊಳ್ಳಬಹುದು. ಸಿಂಹರಾಶಿಯು ಸಿಂಹದಂತೆ ಎದ್ದು ಕಾಣುತ್ತದೆ. ಕುಡುಗೋಲಿನಾಕಾರದ ೫ ನಕ್ಷತ್ರಗಳುಳ್ಳ ಮಘಾ ಪುಂಜವೆ ಈ ಸಿಂಹದ ಮೋರೆಕುತ್ತಿಗೆಗಳು, ವೃಶ್ಚಿಕರಾಶಿಗೆ ಯಾರು ಚೇಳೆನ್ನ ಲಿಕ್ಕಿಲ್ಲ? ಚೇಳು ಕೊಂಡೆಯನ್ನೆತ್ತಿ ಕಡಿಯಲಿಕ್ಕೆ ಬರುತ್ತದೆಯೋ ಏನೋ ಎನ್ನುವಂತೆ ಕಾಣುತ್ತದೆ. ಧನುರಾಶಿಯ ಬಿಲ್ಲನ್ನು ಗುರುತಿಸ ವುದು ಕರಿನವಲ್ಲ. ಮೂಾನರಾಶಿಯಲ್ಲಿ ಎರಡು ಮೂಾನಗಳನ್ನು ಕಾಣಬಹುದು. ಉಳಿದ ಭಾಗಗಳಲ್ಲಿ ಉತ್ತರ ಧ್ರುವದ ಸುತ್ತಲಿನ ಭಾಗವು ಮಹ ತ್ವದ್ದು. ಉತ್ತರ ಧ್ರುವದ ಸುತ್ತಲೂ ನಕ್ಷತ್ರಗಳು ತುಂಬಿವೆ. ಈ ರಾಶಿ ಗಳಿಗೆ ನಮ್ಮಲ್ಲಿಗಿಂತ ಪಾಶ್ಚಾತ್ಯರಲ್ಲಿ ಮಹತ್ವ ಬಹಳ, ಉತ್ತರ ಧ್ರುವದ ಹತ್ತರವೆ ವಶಿಷ್ಠ ಮತ್ತು ಅರುಂಧತಿ ಎಂಬ ನಕ್ಷತ್ರಗಳಿರುವವು. ಲಗ್ನದಲ್ಲಿ ವಧೂವರರಿಗೆ ತೋರಿಸುವ ನಕ್ಷತ್ರಗಳು ಇವೆ.