ವಿಷಯಕ್ಕೆ ಹೋಗು

ಪುಟ:ಜ್ವರ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುಟ್ಟಿ ರಾತ್ರಿ ನೀರಲ್ಲಿ ನೆನೆ ಹಾಕಿ ಬೆಳಿಗ್ಗೆ ಸಸಿ ಕdಡಬೇಕು, ಆದರಿಂದ ರಕ್ತ ಪಿತ್ತ ಜ್ವರ, ದಾಹ, ನೀರಡಿಕೆಗಳು ಶಮನವಾಗುತ್ತವೆ. (೧೨) ಕೃತಜನ್ಯಜ್ವರ, ಅಕ್ಷಣ:-ಯಾವುದೆಂದು ಕಾರಣದಿಂದ ಶರೀರಕ್ಕೆ ತೂತು ಬಿದ್ದು ಇಲ್ಲದ ನವಾಗಿ ಈ ಜ್ವರ ಬರುತ್ತವೆ, ಮೈನೋವು, ಅರುಚಿ, ನಿದ್ರಾನಾಶ, ಬಾವು ಮುಂತಾದ ಲಕ್ಷಣಗಳಾಗುತ್ತವೆ. ಇದಕ್ಕೆ ಉಪಾಯ:-ಒಗರು ಮತ್ತು ಮಧುರೋಪಚಾರಗಳನ್ನು ಮಾಡಬೇಕು, ಕತಗಳಿಗೆ ಆಯಾ ರೋಗದ ಉಪಚಾರ ಮಾಡಬೇಕು. (೧೩) ಅಭಿಘಾತ (ಛೇದನ) ಜ್ವರ. ಲಕ್ಷಣ:- ಶಸ್ತಾದಿಗಳ ಕಡತದಿಂದ ಇಲ್ಲವೆ ಕೆಂಡೆ-ಬಡೆಯುವದರಿಂದ ಇಲ್ಲವೆ ಎತ್ತರದಿಂದ ಬೀಳುವದು, ಹಾಗು ವದು ಮತ್ತು ಆಯಕಟ್ಟಿನ ಸ್ಥಳಕ್ಕೆ ಪೆಟ್ಟು ತಾಕುವದು ಮುಂತಾದ ಕಾರಣಗಳಿಂದ ಈ ಜ್ವರಗಳು ಬರುತ್ತವೆ. ಈ ಜ್ವರದಲ್ಲಿ ಅರುಚಿ, ನಿದ್ರಾ ನಾಶ, ಬಾವು, ಸಂತಾಪ, ವೈನೋವು ಮುಂತಾದ ಲಕ್ಷಣಗಳಾಗುತ್ತವೆ, ಇದಕ್ಕೆ ಉಪಾಯಗಳು. * ತುಪ್ಪ ಕುಡಿಸಬೇಕು; ಮೋಹನ, ಭೋಗ ಎಂಬ ಪಕ್ಕಾನ್ನ ಇಲ್ಲವೆ ಕಳು ತುಪ್ಪ ಹಾಕಿ ಮಾಡಿದ ಸಜ್ಜಿಗೆಯನ್ನು ಕೊಡುವದು; ಸರೆ, ಸಿಂದಿ, ಮಾಂಸರಸಗಳನ್ನು ಕೊಡುವದು, ಉಳಿದ ಉಪಾಯಗಳನ್ನು ಆಯಾ ಪ್ರಕರಣ ದಲ್ಲಿ ಹೇಳಿದಂತೆ ಮಾಡುವದು, (೧೪) ಶ್ವೇದಜನ್ಯ ಜ್ವರ, ಲಕ್ಷಣ:-ಹೆಚ್ಚು ಶ್ರಮ ಮಾಡುವದು, ಏರಿಯನ್ನು ಏಶುವದು, ಓಡು ವದು, ಹೆಚ್ಚು ಬೆವರು ಬರುವಂತೆ ವ್ಯಾಯಾಮ ಮುಂತಾದ ಕೃತ್ಯಗಳನ್ನೆಸಗುವದು, ಒಲಿಷ್ಠ ಸೊಡನೆ ಕುಸ್ತಿ ಹಿಡಿಯುವದು, ಸಹಸ ಮಾಡುವದು, ಕುದುರೆಯನ್ನು ಹತ್ತಿ ಹೆಚ್ಚಾಗಿ ಓಡಿಸುವದು ಮುಂತಾದ ಕೃತ್ಯಗಳಿಂದ ಹೆಚ್ಚು ಬೆವರೊಡೆದು ಈ ಜ್ವರಬರುತ್ತವೆ. ಈ ಜ್ವರದಲ್ಲಿ ಮೈ-ಕೈಗಳು ಸೇದುವದು, ಬಿಗಿದಂತಾಗುವದು, ಅತಿ ವೇಹ, ಮರ್ಚ್ಛೆ, ಗ್ಲಾನಿ, ಉಬ್ಬು ಸ, ಸ್ವಚ್ಛತೆ, ಕಣ್ಣು ಮುಚ್ಚ ವದು, ನಡುಗು, ಮೆಲ್ಲಗೆ ಮಾತಾಡುವದು, ಕಣ್ಣಲ್ಲಿ ನೀರು ಸುರಿಯುವದು ಮುಂತಾದ ಲಕ್ಷಣಗಳಾಗುತ್ತವೆ.