ಪುಟ:ತಿಲೋತ್ತಮೆ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಯೆಷೆಯ ಪೌರುಷ. ೨೫ 'ಹೆಮ್ಮೆ ಪಡುತ್ತಿದ್ದದ್ದೇ ಇಂದು ತನ್ನ ನಾಶಕ್ಕೆ ಕಾರಣವಾಯಿತೆಂದು ಆತನು ತಿಳಿದನು. ಆತನ ಬರ್ಚಿಯಂತು ಕೆಳಗೆ ಬಿದ್ದುಹೋಗಿತ್ತು. ಆಗ ತುಬಾಕಿಯ ಉಪಯೋಗವು ಆಗುವಹಾಗಿದ್ದಲ್ಲ, ಖಡ್ಗವನ್ನು ಹಿರಿಯಲಿಕ್ಕೆ ಅವಕಾಶವು ದೊರೆಯಲೊಲ್ಲದು. ಇದರಿಂದ ಖಾನನು ನಿರಾಶೆಪಟ್ಟು, ಹುಲಿಯೊಡನೆ ಕುಸ್ತಿಯ ಹಿಡಿಯಬೇಕೆಂದು ನೆಲಕ್ಕೆ ದುಮುಕುತ್ತಿರಲು, ಹುಲಿಯ ಹಣೆಗೆ ಆಯೇಷೆಯ ಗುಂಡುತಾಕಿ ಅದು ಅರ್ಭಟಿಸುತ್ತ ನೆಲಕ್ಕುರಳಿ, ಪ್ರಾಣಸಂಕಟ ವನು ತಾಳಲಾರದೆ, ಅದು ರೊಚ್ಚಿ ನೀದ ಖಾನನಮೇಲೆ ಮತ್ತೆ ದುಮು ಕಿತು; ಅಷ್ಟರಲ್ಲಿ ಆಯ್ಕೆಯು ಮಂಜುಳ ಸ್ವರದಿಂದ 11 ಕಕ್ಕಾ, ಹೆದತ ಬೇಡಿರಿ ” ಎಂದು ನುಡಿಯುತ್ತ ಬರ್ಚಿಯಿಂದ ಹುಲಿಯಹೊಟ್ಟೆಗೆ ಇರಿದಳು. ಅಷ್ಟರಲ್ಲಿ ಉಸ್ಮಾನನೂ ಅಲ್ಲಿಗೆ ಬಂದು ಹುಲಿಗೆ ಖಡ್ಡ ಪ್ರಹರಮಾಡಿದನು. ಕೂಡಲೆ ಹುಲಿಯು ನೆಲಕ್ಕುರಳಿ, ಕಾತಲೂಖಾನನು ದೊಡ್ಡ ಗಂಡಾಂತ ರದಿಂದ ಪಾರಾದನು. ಜಗಂಗನ ಮೇಲಿದ್ದ ಆಯೇಷೆಯ ಪ್ರೇಮವೇ ಅಷ್ಟು ಪವಿತ್ರವಾ ದದೂ, ಬಲವತ್ತರವಾದದ್ದೂ ಇತ್ತೆಂದು ಹೆಳಬೆಕಾಗುವದು; ಅಂತೇ ಆಯೇ ಷೆಯು ಹೊತ್ತು ಸಾಧಿಸಿ ಹುಲಿಗೆ ಗುಂಡುಹಾಕಿ, ಕೂಡಲೇ ಅದನ್ನು ಬರ್ಚಿ ಯಿಂದ ಇರಿದು ಪ್ರಾಣದಾನಮಾಡಿದ ಭಾರವನ್ನು ಕಕ್ಕನಮೇಲೆ ಹೊರಿಸಿ ದಳು. ಆಗ ಕಾತಲೂಖಾನನು ಅತ್ಯಂತ ಕೃತಜ್ಞತೆಯಿಂದ ಮಗಳನ್ನು ತಬ್ಬಿಕೊಂಡು- “ ನನ್ನ ಕುಲದೀ ಪವಾದ ಆಯೇಷೆಯೇ, ನೀನೇ ಇಂದು ನನಗೆ ಪ್ರಾಣದಾನಮಾಡಿದೆ. ನೀನಿಲ್ಲದಿದ್ದರೆ ನಾನು ನಿಶ್ಚಯವಾಗಿ ಹುಲಿಯ ಬಾಯಿಗೆ ತುತ್ತಾಗುತ್ತಿದ್ದೆ ನು. ನಿನ್ನ ಉಪಕಾರಕ್ಕೆ ನಾನೇನು ಪ್ರತ್ಯುಪ ಕಾರಮಾಡಲಿ? ಏನು ಮಾಡಿದರೆ ನಿನಗೆ ಸಂತೋಷವಾಗುವದು ಹೇಳು * ಎಂದು ಕೇಳಲು, ಆಯೇಷೆಯು- 11 ಅಪ್ಪಾ, ತಂದೆಯಮೇಲೆ ಮಗಳು ಮಾಡುವ ಉಪಕಾರವೇನು? ಹೊತ್ತಿಗೆ ನಿಮ್ಮ ಸಹಾಯಕ್ಕೆ ಒದಗಿದ್ದಕ್ಕಾಗಿ ನನಗೆ ಬಹಳ ಸಂತೋಷವಾಗಿರುತ್ತದೆ. ಇದಕ್ಕೂ ಹೆಚ್ಚಿನ ಸಂತೊಷವು ಬೇರೆ ಯಾತರಿಂದಲೂ ನನಗೆ ಆಗುವಹಾಗಿಲ್ಲ. ಸದ್ಯಕ್ಕೆ ನೀವು ಬಹಳವಾಗಿ ದಣಿದಿ ರುವಿರಿ, ನಿಮಗೆ ಹಸಿವೆಯು ಆಗಿರಬಹದು, ಮೊದಲು ಊಟಮಾಡಿ ಆಮೇಲೆ ನನ್ನ ಯೋಗಕ್ಷೇಮವನ್ನು ತಕ್ಕೊಳ್ಳಿರಿ, ” ಎಂದು ಹೇಳಿದಳು. ಅದನ್ನು ಕೇಳಿ