ಪುಟ:ತಿಲೋತ್ತಮೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ತಿಲೋತ್ತಮ' 'ಸುಯೋಗವೆಂದು ಉಣ್ಣುವವರು ಉಣ್ಣುತ್ತಿದ್ದರು. ಕಕ್ಕನ ಮನಸ್ಸನ್ನು ಒಲಿಸಿಕೊಳ್ಳುವದಕ್ಕಾಗಿಯೇ ಆಯೇಷೆಯು ಬುದ್ಧಿ ಪೂರ್ವಕವಾಗಿ ಆತನ ಪ್ರೀತಿಯ ಪದಾರ್ಥಗಳನ್ನು ಮಾಡಿಕೊಂಡು, ಅವನ್ನು ಸಂಗಡ ತಕ್ಕೊಂಡು ಬೇಟಿಗೆ ಹೊರಟಿದ್ದಳು. ಆಯೇಷೆಯು ಮಹಾ ನಿರ್ಧಾರದ ಮನುಷ್ಯಳು, ಹಿಡಿದ ಕೆಲಸವನ್ನು ಮಾಡದೆ ಎಂದೂ ಬಿಡುವ ವಳಲ್ಲ, ಕಾತಲೂಖಾನನು ಬೇಟೆಗಾಗಿ ಸಂಚರಿಸುತ್ತಿರುವಾಗ, ಆಯೇಷೆಯೂ, ಉಸ್ಮಾನನೂ ಆತನ ಮೈನೆರಳಿನಂತೆ ಆತನ ಬೆನ್ನ ಹತ್ತಿ ತಿರುಗುತ್ತಿದ್ದರು. ಮಧ್ಯಾಹ್ನವಾಯಿತು. ಅಷ್ಟರಲ್ಲಿ ಕಾತಲೂಖಾನನು ಅಂದು ಪೆಟ್ಟಿನಮೇಲೆ ಸೆಟ್ಟು ಮೂರು ಹುಲಿಗಳನ್ನು ಕೊಂದದ್ದರಿಂದ ಆವೇಶಗೊಂಡಿದ್ದನು. ಆತನ ಬೇಟೆಯ ಉತ್ಸಾಹವು ಕುಗ್ಗ ಲೋಲ್ಲದು. ಆತನ ಅನುಯಾಯಿಗಳು ಬೇಟೆ ಯಾಡಿ ದಣಿದಿದ್ದರು. ತಮ್ಮ ಒಡೆಯನು ಯಾವಾಗ ಬೇಟಿಯನ್ನು ಮುಗಿಸು ವನೋ ಎಂದು ಅವರು ಹಾದಿಯ ನೋಡುತ್ತಿದ್ದರು, ತನ್ನ ತಂದೆಯ ಅಂದಿನ ಬೇಟೆಯ ಉತ್ಸಾಹವನ್ನು ನೋಡಿ, ಉಸ್ಮಾನನೂ, ಆಯೇಷೆಯೂ ಉತ್ಸಾ ಹಗೊಂಡಿದ್ದರು. ಇನ್ನೊಂದು ಹುಲಿಯನ್ನು ಹೊಡೆದು, ಮನೆಗೆ ಹೋಗ ಬೇಕೆಂದು ಕಾತಲೂಖಾನನು ನಿಶ್ಚಯಿಸಿ, ಹುಲಿಯನ್ನು ಹುಡುಕಹ ದನು. ಬಹಳ ಹೊತ್ತಾದರೂ ಹುಲಿಯು ಸಿಗಲಿಲ್ಲ. ಅಷ್ಟರಲ್ಲಿ ಕಾತಲೂ ಖಾನನ ಆನೆಯು ನಿಃಶಂಕೆಯಿಂದ ಒಂದು ಕೊಳ್ಳವನ್ನು ಇಳಿಯುತ್ತಿರಲು, ಒಂದು ಭಯಂಕರವಾದ ಹುಲಿಯು ನೆರೆಯ ಸೆಳೆಯೊಳಗಿಂದ ಅರ್ಭಟಿಸಿತು. ಆ ಅರ್ಫಾಟದ ಅಬ್ಬರಕ್ಕೆ ಆನೆಯು ಬೆದರಿ ಹಿಂದಕ್ಕೆ ಸರಿ ಯುತ್ತಿರಲು, ಹುಲಿ ಯು ಆನೆಯ ಕುಂಭಸ್ಥಳಕ್ಕೆ ನೆಗೆಯಿತು, ಈ ಅವಸರದಲ್ಲಿ ಕಾತಲೂ ಖಾನನು ಹುಲಿಗೆ ಇರಿದ ಬರ್ಚಿಯ ಇಂತದ ಗುರಿತಪ್ಪಿ ಬರ್ಚಿಯು ಕೈ ಜಾರಿ ಕೆಳಗೆ ಬಿದ್ದಿತು. ತುಬಾಕಿಯನ್ನು ತಕ್ಕೊಂಡು ಹೆಡೆ ಯುವಷ್ಟರೊಳಗೆ ಹುಲಿಯು ಆನೆಯ ಕುಂಭಸ್ಥಳವನ್ನು ತನ್ನ ನಖಪಂಜರಗಳಿಂದ ಸೀಳಹ ತಿತು. ಆಗ ಆನೆಯು ಘೀಳಿಡುತ್ತ ನೆಲಕ್ಕೆ ಕುಳಿತುಕೊಳ್ಳುತ್ತಿರಲು, ಹುಲಿಯು ಮತ್ತೊಮ್ಮೆ ಹಾರಿ ಕಾತಲೂಖಾನನ ಗಂಟಲಕ್ಕೆ ಬಾಯಿಹಾಕಲಿಕ್ಕೆ ಹವಣಿಸ ಹತ್ತಿತು, ಅದನ್ನು ನೋಡಿ ಖಾನನು ಬೆದರಿದನು. ಆತನ ಕಸುವು ಕಡಿ ಮೆಯಾಗಹತ್ತಿತು. ತಾನು ಹುಲಿಯ ಬೇಟೆಯಲ್ಲಿ ಮಹಾ ಪ್ರವಿಣನೆಂದು