ಪುಟ:ತಿಲೋತ್ತಮೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಯೇಷೆಯ ಪೌರುಷ. ಬಹುಕಷ್ಟದಾಯಕವಾಗುತ್ತಿತ್ತು, ಆಕೆಯು ಜಗತ್ಸಂಗನ ಬಂಧವಿಮೋಚ ನದ ಉಪಾಯಗಳನ್ನು ಚಿಂತಿಸತೊಡಗಿದಳು. ಜಗಕ್ಸಿಂಗನು ಓಡಿಹೊಗ ಲಿಕ್ಕೆ ಒಡಂಬಟ್ಟಿದ್ದರೆ, ಆಕೆಯು ಯಾವಾಗೋ ಆತನನ್ನು ಸೆರೆಮನೆಯಿಂದ ಪಾರಮಾಡುತ್ತಿದ್ದಳು. ಆದರೆ ಕಳ್ಳತನವು ಜಗತ್ಸಂಗನಿಗೆ ಸೇರದ್ದರಿಂದ, ಆಯೇಷೆಯು ಆತನ ಬಂಧವಿಮೋಚನಕ್ಕೆ ಅನ್ನೊ ಪಾಯಗಳನ್ನು ಯೋಚಿ ಸಬೇಕಾಯಿತು. ತನ್ನ ಕಕ್ಕನಾದ ಕಾತಲೂಖಾನನ ಮನಸ್ಸನ್ನು ಒಲಿಸಿ ಕೊಂಡಹೊರತು ಪ್ರಸಿದ್ಧ ರೀತಿಯಿಂದ ಜಗತ್ತಿಂಗನ ಬಂಧವಿಮೋಚನವಾಗ ಲಿಕ್ಕೆ ಮಾರ್ಗವಿದ್ದಿಲ್ಲ. ಕಕ್ಕನು ತನ್ನ ಮಾತನ್ನು ಕೇಳುತ್ತಿದ್ದರೂ, ಮೊಗಲಪಠಾಣರಲ್ಲಿ ಅತ್ಯಂತ ದ್ವೇಷವಿರುವಾಗ, ಮೊಗಲಪಕ್ಷಪಾತಿಯಾದ ಜಗತ್ಸಂ ಗನಂಥ ಗೌರವದ ಮನುಷ್ಯನ ಬಂಧವಿಮೋಚನಕ್ಕೆ ಆತನು ಒಪ್ಪಿಕೊಳ್ಳು ವನೋ ಇಲ್ಲವೋ ಎಂಬ ಸಂಶಯವು ಆಯೇಷೆಯನ್ನು ಬಾಧಿಸಹತ್ತಿತು ಆಕೆಯು ಹಲವು ಹಂಚಿಕೆಗಳನ್ನು ಹಾಕಿ ನೋಡಿದಳು; ಆದರೆ ಒಂದೂ ಬಗೆಹರಿಯಲಿಲ್ಲ. ಹೀಗಿರುವಾಗ, ಒಂದುದಿನ ಕಾತಲೂಖಾನನು ಬೇಟೆಗಾಗಿ ಹೊರಟನು. ಆ ತಸಿಗೆ ಬೇಟಿಯ ಲಕ್ಕು ಬಹಳ, ಹುಲಿಯ ಬೇಟೆಯಲ್ಲಿ ಆತನು ಒಳ್ಳೆಯ ಪ್ರಸಿದ್ಧನಾಗಿದ್ದನು. ಆನೆಯಮೇಲೆ ಕುಳಿತು ಹುಲಿಯ ಬೇಟೆಯಾ ಡುವ ಫ ತಕ ಪ್ರಸಂಗಕಂತು ಆತನು ಬಹಳವಾಗಿ ಮೆಚ್ಚಿದ್ದನು. ಇಂಥ ಪ್ರಸಿದ್ದ ಬೇಟೆಗಾರನು ತನ್ನ ಪರಿವಾರದೊಡನೆ ಬೇಟೆಗೆ ಹೊರಡಲು, ಆಯೇ ಸೆಯ ಆತನನ್ನು ಹಿಂಬಾಲಿಸಿದಳು, ಆಯೇಷೆಯ ಪೌರುಷವೃತ್ತಿಯನ್ನು ನೋಡಿದರೆ, ಆಕೆಯು ಸ್ತ್ರೀ ಜಾತಿಗೆ ಅಪವಾದವಾಗಿದ್ದಳೆಂದು ತಿಳಿಯಬೇಕಾ ಗುವದು; ಯಾಕಂದರೆ, ಸ್ತ್ರೀಯರಲ್ಲಿ ಆಯೇಷೆಯಂಥ ಪೌರುಷವೃತ್ತಿಯ ವರು ಸಿಗುವದು ತೀರದುರ್ಬಭವ, ಆಕೆಯು ಮಹಾಧೈರ್ಯಶಾಲಿನಿಯೂ, ಯುದ್ದ ಕಲೆಯನ್ನು ಒಳಿತಾಗಿಬಲ್ಲವಳೂ ಇದ್ದಳು, ಅಡಿಗೆ ಮಾಡುವಲ್ಲಿಯಂತು ಆಕೆಯನ್ನು ಯಾವ ಹೆಂಗಸೂ ಸರಿಗಟ್ಟುವಂತೆ ಇದ್ದಿಲ್ಲ. ಆಕೆಯ ಕೈಮುಟ್ಟಿ ಮಾಡಿದ ಅಡಿಗೆಯನ್ನು ಉಂಡವರು ಪರಮಸಂತುಷ್ಟರಾಗುತ್ತಿದ್ದರು; ಆದರೆ ಆಯೇ ಷೆಯಂಥ ಸದ್ಗುಣಸಮುಚ್ಚಯದ ನಬಾಬಜಾದಿಗೆ ಆಡಿಗಮಾಡುವ ಪ್ರಸಂಗಗಳು ಹೇಗೆ ಬರಬೇಕು? ಆ ತೀಕ್ಷ್ಯ ಬುದ್ದಿ ಯ ಹೆಣ್ಣು ಮಗಳು ತನ್ನ ವರ ಸಂತೋಷಕ್ಕಾಗಿ ತನ್ನ ಸಂತೋಷಬಂದಾಗ ಅಡಿಗೆಮಾಡಿದರೆ ಅದೊಂದು