ಪುಟ:ತಿಲೋತ್ತಮೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܢ ತಿಲೋತ್ತಮೆ. (Jಂದ ಎಂದೂ ಹೊರಡವು, ತಂದೆಯ ಬಳಿಯಲ್ಲಿಯ ಆಕೆಯ ಬೇಡಿಕೆಗಳ ಪರೋಪಕಾರಕ್ಕೆ ಸಂಬಂಧಿಸಿದವಾಗಿರುತ್ತಿದ್ದವು, ಆಕೆಯ ಇಪ್ಪತ್ತೆರಡು ವರ್ಷದವಳಾಗಿದ್ದರೂ ಲಗ ಮಾಡಿಕೊಳ್ಳಬೇಕೆಂಬ ವಿಚಾರವು ಆಕೆಯ ಮನ ಸ್ಸಿನಲ್ಲಿ ಹುಟ್ಟಿದ್ದಿಲ್ಲ, ಸದ್ಗುಣಗಳ ಪುತ್ತಳಿಯೆನಿಸುವ ಆ ಸೌಂದರ್ಯ ದ ಖನಿ ಯನ್ನು ಸ್ವಾಧೀನಪಡಿಸಿಕೊಂಡೇನೆಂಬ ನಂಬಿಗೆಯು ಯಾವ ಪುರುಷತ್ತಷ್ಣ ನಲ್ಲಿಯೂ ಇದ್ದಿಲ್ಲವೆಂದು ಹೇಳಬಹುದು. ಆಯೇಷೆಯಂಥ ಅಲೌಕಿಕ ಸ್ತ್ರೀಯ ಪಾಣಿಗ್ರಹಣಕ್ಕೆ ತಾವು ಯೋಗ್ಯರಲ್ಲೆಂದು ಭಾವಿಸುವ ಪುರುಷರೇ ವಿಶೇಷ ಹಾಗಿದ್ದರು. ಆಯೇಷೆಯು ಪುರುಷರ ಬಾಹ್ಯಾಡಂಬರಕ್ಕೆ, ಅಥವಾ ಐಶ್ವರ್ಯಬಲಗಳಿಗೆ ಮೆಚ್ಚತಕ್ಕವಳಿದ್ದಿಲ್ಲ. ಇಂಥ ಕೃತ್ರಿಮವಾದ ಯಾವ ಸಾಧನಗೆ ಇಂದಲೂ ಆಯೇಷೆಯಲ್ಲಿ ವೈವಾಹಿಕ ಸೇಮವು ಉಂಟಾಗುವಹಾಗಿಲ್ಲ. ಅಂತೇ ಉಸ್ಮಾನನಂಥ ಸರ್ವಗುಣಸಂಪನ್ನನಾದ ತರುಣನು ಬಹು ಪ್ರಯ ಶಪೂರ್ವಕವಾಗಿ ಯಶ್ನಿಸುತ್ತಲಿದ್ದರೂ ಆಯೇಷೆಯು ಆತನಿಗೆ ತನ್ನ ಹೃದ ಯದಲ್ಲಿ ಸ್ಥಳವನ್ನು ಕೊಟ್ಟಿದ್ದಿಲ್ಲ. ಉಸ್ಮಾನನಲ್ಲಿ ಯಾವ ಕುಂದುಕೊರತೆಗೆ; ಇನ್ನೂ ಎಣಿಸುವಹಾಗಿದ್ದಿಲ್ಲ. ಮೇಲಾಗಿ ಅವರಿಬ್ಬರು ಚಿಕ್ಕಂದಿನಿಂದ ಒಂದೆ? ಮನೆಯಲ್ಲಿ ಕೂಡಿ ಆಡಿದವರು, ಇಂಥವನನ್ನು ಲಗ್ನವಾಗದ ಆಯೆ? ಹೆಯು ಅತ್ಯಂತ ದುರ್ಲಭಳೆಂದು ಯಾಕೆ ಬರೆಯಬೇಕು? ಇಂಥ ದುರ್ಲಭ ಳಾದ ಆಯೇ ಷೆಯು ದರ್ಶನಮಾತ್ರದಿಂದ ಜಗತ್ತಿಂಗನಿಗೆ ತನ್ನ ಹೃದಯದಲ್ಲಿ ಸ್ಥಳವನ್ನಿತ್ತಿದ್ದು ಪರಮಾಶ್ಚರ್ಯವಲ್ಲವೆ? ( ಮನೋಹಿ ಜನ್ಮಾಂತರಸಂಗ ಶಿಜ್ಞಂ” ಎಂಬ ಕಾಲಿದಾಸೋ ಕಿಯಂತೆ, ಆಯೇಷೆಯ ಮನಸ್ಸಿನ ಜನ್ಮಾಂ ಕರ ಸಂಗತಿಯ ಜ್ಞಾನದಿಂದ ಅದು ಜಗತ್ತಿಂಗನಲ್ಲಿ ಆಶ್ರಯವನ್ನು ಪಡೆದಿರ ಬಹುದು. ಆಯೇಷಾ-ಜಗಕ್ಸಿಂಹರಲ್ಲಿ ಅಂಥ ಜನ್ಮಾಂತರದ ಸಂಬಂಧವೆ? ನಾದರೂ ಇದ್ದಹೊರತು ಆಯೆಷೆಯು ಜಗಕ್ಸಿಂಗನನ್ನು ತನ್ನ ಪ್ರಾಣೇಶ್ವರ ಕೆಂದು ತಿಳಿದುಕೊಳ್ಳುವದು ಯುಕ್ತಿಗೆ ಹೊರಗಾದದ್ದೇ ಸರಿ. ಜಗತ್ನಿಂಗನು ಆಯೇಷೆಯ ಗೌರವಕ್ಕೆ ಸರಿಯಾಗಿ ಆಕೆಯನ್ನು ಪ್ರೀತಿ ಸಲಿ-ಪ್ರೀತಿಸದಿರಲಿ, ಆಯೇಷೆಯಂತು ಜಗತ್ಸಂಗನ ವಿಷಯವಾಗಿ ನಿರ್ಹ ತು ಕವಾದ ಉತ್ಕಟಸ್ರೇಮವನ್ನು ವಹಿಸಿದ್ದಳು. ಜಗಕ್ಸಿಂಗನ ಸೇವೆಯಲ್ಲಿ ಆಕೆಗೆ ಪರಮಾನಂದವಾಗುತ್ತಿತ್ತು, ಜಗತ್ನಿಂಗನನ್ನು ಅಗಲಿ ಇರುವದು ಆಕೆಗೆ