ಪುಟ:ತಿಲೋತ್ತಮೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಹಜಪ್ರೇಮ. ಎ ಆಡುತ್ತಿದ್ದೆನೆಂಬದನ್ನು ಹೇಳುತ್ತೇನೆ ಕೇಳು. ನಾನು ಇವರಿಗೆ-ನಿಮ್ಮನ್ನೂ, ತಿಲೋತ್ತಮಾ-ವಿಮಲಾದೇವಿಯರನೂ ಬಂಧುಮುಕ್ತ ಮಾಡುವೆನೆಂದು ಹೇಳಿದೆನು. ಒಪ್ಪಿಕೊಂಡಿದ್ದರೆ ಇವರನ್ನಂತು ಇಷ್ಟು ಹೊತ್ತಿಗೆ ಮುಕ್ತಮಾ ಡಿಸಿಬಿಡುತ್ತಿದ್ದೆನು. ಹಾಗಾಗಿದ್ದರೆ ನಿನಗೆ ಇವರ ನಖದ ದರ್ಶನವು ಕೂಡ ಆಗುದಿಲ್ಲ. ಉಸ್ಮಾನ, ಪ್ರಸಂಗ ಒದಗಿದರೆ ನನ್ನ ಕಕ್ಕಂದಿರ ಮುಂದೆ ನಾನು ಹೀಗೆಯೇ ಹೇಳತಕ್ಕವಳು, ಎಂದು ನುಡಿದು, ರಾಜಪುತ್ರನಾದ ಜಗ ತ್ರಿಂಗನನ್ನು ಕುರಿತು ವಿನಯದಿಂದ- “ ನಾನು ನಿರ್ಲಜ್ಜೆಯಿಂದ ತಮ್ಮ ಮುಂದೆ ಆಡಿದ ಈ ಮಾತುಗಳಿಗಾಗಿ ನನ್ನನ್ನು ಕ್ಷಮಿಸಬೇಕು. ಉಸ್ಸಾ ನನು ನನ್ನ ಹೃದಯವನ್ನು ಪೀಡಿಸದಿದ್ದರೆ, ನನ್ನ ಕಾಮದಗ್ನ ಹೃದಯವು ಎಂದಿಗೂ ನಿಮ್ಮ ಕಣ್ಣಿಗೆ ಬೀಳುತ್ತಿದ್ದಿಲ್ಲ. ಬಹಳ ಹೇಳುವದೇನು? ಕಾಲ ತಯದಲ್ಲಿ ಯಾರ ಕಿವಿಗೂ ಈ ಮಾತು ಮುಟ್ಟುತ್ತಿದ್ದಿಲ್ಲ ” ಎಂದು ನುಡಿದು ಪುನಃ ಆಕೆಯು ಉಸ್ಮಾನನ ಕಡೆಗೆ ತಿರುಗಿ ಅಣ್ಣಾ, ಉಸ್ಮಾನಾ, ತಂಗಿ ಯನ್ನು ಪ್ರೀತಿಸುವಂತೆ ನೀನು ನನ್ನನ್ನು ಪ್ರೀತಿಸುವದರಲ್ಲಿ ಅಂತರಿಸಬೇಡ, ಎಂದು ನುಡಿದು ಆಕೆಯು ಅಲ್ಲಿಂದ ತಟ್ಟನೆ ಹೊರಟು ಹೋದಳು. ಉಸ್ಕಾ ನನಾದರೂ ಹತಬುದ್ಧನಾಗಿ ಅಲ್ಲಿಂದ ಹೊರಬಿದ್ದು ನಡೆದನು. - ( ° ) ೩ನೆಯ ಪ್ರಕರಣ, ಆಯೇ ಷೆಯ ಪೌರುಷ. ಆಯೇನೆಯು ಅಲೌಕಿಕ ಗುಣವತಿಯಾಗಿದ್ದಳು. ಆಕೆಯ ಸದ್ದು ೯ ಗಳ ಯೋಗದಿಂದ ಆಕೆಯ ಸೌಂದರ್ಯಕ್ಕೆ ವಿಲಕ್ಷಣ ಗೌರವವುಂಟಾಗಿತ್ತು.. ಆಯಸೆಯನ್ನು ಬಹುಮಾನ ಪೂರ್ವಕವಾಗಿ ಆದರಿಸದವರೇ ವಿರಲ, ಆಕೆಯ ನೈತಿಕ ನಿಷ್ಟುರತೆಯ ವರ್ಚಸ್ಸು ಎಲ್ಲರಮೇಲೆ ಬಿದ್ದಿ ತ್ತು. ಆಯೇಷೆಯು ನಬಾಬಕಾತಲೂಖಾನನ ಪಂಚ ಪ್ರಾಣವಾಗಿದ್ದಳು. ಖಾನನು ಮಗಳ ಮಾತನ್ನು ಉಗುಳುಹಾಕಿ ದಾಟುತ್ತಿದ್ದಿಲ್ಲ. ನಿರರ್ಥಕ ಮಾತುಗಳು ಆಯೇನೆಯ ಮುಖ