ಪುಟ:ತಿಲೋತ್ತಮೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ತಿಲೋತ್ತಮೆ. ಯಾದ ಆಯೇ?ಸೆಯು ಉಸ್ಮಾನನನ್ನು ಕುರಿತು- C ಉಸ್ಮಾನ, ಒಳ್ಳೆಯ ಕೆಲಸವೇನು ” ಎಂದು ಕೇಳಲು, ಆತನು ವ್ಯಂಗೊ ಕೈಯಿಂದ- ರಾತ್ರಿ ಒಬ್ಬಳೇ ಸೆರೆಯಾಳಿನ ಸಂಗಡ ಏಕಾಂತವಾಡುವದು ನವಾಬನ ಮಗಳಿಗೆ ಬಹು ಇವಾಗಿ ಒಪ್ಪುತ್ಮದಲ್ಲವೆ” ಎಂದು ಕೇಳಿದನು. ಇದರಿಂದ ಆಯೇ ಸೆಯ ಹೃದಯಕ್ಕೆ ಬಹಳ ವ್ಯಥೆಯಾಯಿತು. ಆಕೆಯು ಉಸ್ಮಾನನನ್ನು ಕುರಿತು ಸ್ಪಷ್ಟವಾಗಿ-ಉಸ್ಮಾನ, ಇನ್ನು ಸಂಕೋಚವೇಕೆ? ಯಾವಮಾತನ್ನು ಹೊರ ಗೆಡವಿ ತೋರಿಸುವ ಅವಶ್ಯವಿದ್ದಿಲ್ಲವೋ, ಆ ಮಾತನ್ನು ಈಗ ಆಡಿತೋರಿಸುವ ಪ್ರಸಂಗವನ್ನು ನೀನು ಒದಗಿಸಿಕೊಟ್ಟದ್ದರಿಂದ, ಸ್ಪಷ್ಟವಾಗಿ ಆಡಿಬಿಡುತ್ತೇನೆ, ಚೆನ್ನಾಗಿ ಕೇಳು, ಈ ಸೆರೆಯಾಳು ನನ್ನ ಪ್ರಾಣೇಶ್ವರನಿರುತ್ತಾನೆಂಬದನ್ನು ಚನ್ನಾಗಿ ಲಕ್ಷದಲ್ಲಿಡು. ಹಾಗಲ್ಲದಿದ್ದರೆ ಈ ರಾಜಕುಮಾರರ ಸಂಗಡ ಆಯೆ? ಷೆಯು ಈ ಪ್ರಕಾರ ಎಂದೂ ನಡೆದುಕೊಳ್ಳುತ್ತಿದ್ದಿಲ್ಲ. ಮಂದಾರಣಗಡದ ಅಂತರ್ಗೃಹದಲ್ಲಿ ನಿನ್ನೊಡನೆ ಪುರುಷವೇಷದಿಂದ ನಾನು ಬಂದಾಗ ಈ ರಾಜಕು ಮಾರರನ್ನು ನೋಡಿ ನನ್ನ ಹೃದಯವು ಇವರಲ್ಲಿ ಅನುರಕ್ತವಾಯಿತು. ಇನ್ನು ನನ್ನ ಆ ಹೃದಯದಲ್ಲಿ ಅನ್ಯ ಪುರುಷನಿಗೆ ಆಸ್ಪದವು ಸರ್ವಥಾ ದೊರೆಯಲಾ ರದು. ನಾನು ಬದುಕಿರುವವರೆಗೆ ಅನ್ಯ ಪುರುಷನನ್ನು ಕಣ್ಣೆತ್ತಿ ನೋಡಲಾ ರೆನು, ನಾನು ಮುಸಲ್ಮಾನ ಸ್ತ್ರೀಯ - ಜಗತ್ತಿ೦ಗರವರು ರಜಪೂತ ಪುರು ಷರೂ ಇರುವದರಿಂದ, ನಮ್ಮಿಬ್ಬರ ದಾಂಪತ್ಯ ಸಂಬಂಧಕ್ಕೆ ದೊಡ್ಡ ನಿಮ್ಮ ವಿರು ತಿದ್ದರೂ, ಜಗತ್ಸಂಗರೆ: ನನ್ನ ಪ್ರಾಣೇಶ್ವರರೆಂಬ ನನ್ನ ಭಾವನೆಯಲ್ಲಿ ಎಂದೂ ಅಂತರವಾಗಲಾರದು. ಇನ್ನೊಂದು ಕ್ಷಣದಮೇಲೆ ಜಗತ್ತಿ೦ಗರ ವರು ನನ್ನ ಕಣ್ಣು ಮರೆಯಾಗಿ, ನನ್ನ ಮರಣಪರ್ಯ೦ತರ ನನಗೆ ಅವರ ದರ್ಶನವಾಗದಿದ್ದರೂ, ಅವರು ನನ್ನ ಮುಖಾವಲೋಕನಮಾಡದೆ ಅನ್ಯ ಯಲ್ಲಿ ರಮಮಾಣರಾದರೂ, ರಣಭೂಮಿಯಲ್ಲಿ ಅವರು ದೇಹವನ್ನಿಟ್ಟರೂ, ಅವರು ನನ್ನನ್ನು ದ್ವೇಷಿಸಿದರೂ ಅವರು ನನ್ನ ಪ್ರಾಣೇಶ್ವರರೇ ಆಗಿರು ವರು! ನನ್ನ ಪತಿಪ್ರೇಮದಲ್ಲಿ ಎಂದೂ ಆಂತರವಾಗಲಿಕ್ಕಿಲ್ಲ. ನಾನು ಯಾವಾ ಗಲೂ ಅವರ ಪ್ರೇಮವನ್ನಿಚ್ಚಿಸುವ ದಾಸಿಯಾಗಿರುವೆನು. ನನ್ನ ಹೃದಯ ಮಂದಿರದಲ್ಲಿ ಅವರನ್ನು ಸ್ಥಿರವಾಗಿರಿಸಿಕೊಂಡು ಯಾವಾಗಲೂ ಅವರನ್ನು ೬Tಧಿಸುತ್ತಿರುವೆನು, ಉಸ್ಮಾನ, ನಾನು ಅವರೊಡನೆ ಏಕಾಂತವನ್ನೆ° ನು