ಪುಟ:ತಿಲೋತ್ತಮೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಯೇಷೆಯ ಪೌರುಷ. ೨೭ ವೆನು, ಮಗುವೇ, ಜಗಕ್ಸಿಂಗನು ನಮ್ಮ ವೈರಿಯಿದ್ದರೂ ಆತನು ಮುಸಲ್ಮಾನ ನಾದರೂ ಆಗಿದ್ದರೆ, ಒಂದು ಪಕ್ಷದಲ್ಲಿ ಸಮಾಧಾನಪಡಬಹುದಾಗಿತ್ತು; ಆದರೆ ಇನ್ನು ನನ್ನ ಸಮಾಧಾನ-ಅಸಮಾ ಧಾನಗಳನ್ನು ತಕ್ಕೊಂಡು ಮಾಡುವ ದೇನು? ನಿನಗೆ ವಚನಕೊಟ್ಟಂತೆ ನಾನು ಜಗತ್ವಿಂಹನನ್ನೂ, ತಿಲೋತ್ತಮಾ ವಿಮಲಾದೇವಿಯರನ್ನೂ ಕಾರಾಗೃಹದಿಂದ ಮುಕ್ತರಾಗಮಾಡುವನು. ಪ್ರೇಮದ ವಿಷಯದಲ್ಲಿ ಒತ್ತಾಯವು ಕೆಲಸದಲ್ಲವಾದ್ದರಿಂದ, ನೀತಿಸಂಪನ್ನ ಳಾದ ನೀನು ನಿನ್ನ ಮನಸ್ಸಿಗೆ ಬಂದಂತೆ ಮಾಡಬಹುದು. ಸದ್ಯಕ್ಕೆ ತಿಲೋ ತಮಾ- ವಿಮಲಾದೇವಿಯರನ್ನು ಬಿಡುತ್ತೇನೆ. ಮೊಗಲರೊಡನೆ ಒಪ್ಪಂದ ವಾದ ಬಳಿಕ ಜಗಕ್ಸಿಂಗನನ್ನೂ ಬಿಡುವೆನು, ನಿನ್ನ ಮಾತನ್ನು ನಡಿಸು ವದಕ್ಕಾಗಿಯೇ ನಾನು ನಾಳೆ ರಾಜಾಮಾನಸಿಂಹರನ್ನು ಸಂಧಿಗಾಗಿ ಯಾಚಿ ಸುವೆನು. ಯಾವಮಾತಿಗೂ ನೀನು ಅಸಮಾಧಾನಪಡಬೇಡ, ಅನೀತಿಕಾರಕ ವಾದ ಯಾವಪಾಪಕೃತ್ಯವೂ ಸಿನಿಂದ ಸಂಘಟಿಸಿರುವದಿಲ್ಲ ಎಂದು ಹೇಳಿ ಆತನು ಎಲ್ಲ ಪರಿವಾರದೊಡನೆ ತನ್ನ ಪಾಳಯಕ್ಕೆ ತೆರಳಿದನು. ಕೂಡಲೆ ಆತನ ಅಪ್ಪಣೆಯಿಂದ ತಿಲೋತ್ತಮೆಯೂ, ವಿಮಲಾದೇವಿಯೂ ಬಂಧಮು ಕರಾದರು. - ತಿಲೋತ್ತಮೆಯ ಕೋಮಲಹೃದಯವನ್ನು ವಾಚಕರುಬಲ್ಲರಷ್ಟೆ, ಆಕೆಯು ಮಹಾಪತಿವ್ರತೆಯೂ, ಪತಿಭಕ್ತಿ ಪರಾಯಣಳೂ ಆಗಿದ್ದಳು. ಕಾರಾಗೃಹದಲ್ಲಿ ರುವಾಗ ಪತಿಯ ಚಿಂತನದಹೊರತು ಅನ್ಯ ವಿಷಯಗಳನ್ನು ಆಕೆಯು ಚಿಂತಿ ಸಳ, ಕಾರಾಗೃಹದಲ್ಲಿ ಕೇವಲ ಔದಾಸೀನ್ಯದಿಂದ ಆಕೆಯ ಕಾಲಹರಣವಾ ಗುತ್ತಿತ್ತು. ಸ್ವಚ್ಚಂದವೃತ್ತಿಯ ಪಠಾಣರು ಕೂಡ ಆ ಕೋಮಲೆಯ ದೈನ್ಯ ಮುದ್ರೆಯನ್ನು ನೋಡಿ ಮರುಗತ್ತಿದ್ದರಲ್ಲದೆ, ಆಕೆಯ ವಿಷಯವಾಗಿ ದುರ್ಬು ದ್ಧಿಯನ್ನು ತಾಳುತ್ತಿದ್ದಿಲ್ಲ, ಸ್ವತಃ ಕಾತಲೂಖಾನನು ತಿಲೋತ್ತಮೆಯನ್ನೂ, ವಿಮಲಾದೇವಿಯನ್ನೂ ತನ್ನ ಜನಾನಖಾನೆಯಲ್ಲಿ ಸೇರಿಸಿಕೊಳ್ಳಬೇಕೆಂದು ಮಾಡಿದ್ದನು, ಆದರೆ ತಿಲೋತ್ತಮೆಯಮುಖವನ್ನು ನೋಡಿದ ಕೂಡಲೆ ಆತನ ಆ ದುಷ್ಟ ಬುದ್ದಿ ಯು ಅಳಿದುಹೋಗಿ, ಅವನು ತನ್ನ ಆ ವಿಚಾರ ವನ್ನು ಬಿಟ್ಟು ಬಿಟ್ಟಿದ್ದನು, ತಿಲೋತ್ತಮೆಯ ವಿಷಯವಾಗಿ ಆತನು ಒಂದು ಪ್ರಕಾರದ ಪೂಜ್ಯ ಬುದ್ದಿಯನ್ನು ತಾಳಿದ್ದನು. ಹೀಗಿರುವಾಗ ತಿಲೋತ್ತಮೆಯು,