ಪುಟ:ತಿಲೋತ್ತಮೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ತಿಲೋತ್ತಮೆ. ಆಯೇಷೆಯ ದೀರ್ಘ ಪ್ರಯತ್ನದಿಂದ ಕಾರಾಗೃಹದಿಂದ ಮುಕ್ತಳಾಗಲು, ಆಕೆಯು ಕಾರಾಗೃಹದಲ್ಲಿರುವ ತನ್ನ ಪತಿಯ ದರ್ಶನಕ್ಕಾಗಿ ಆತುರಪಟ್ಟಳು. ಪತಿಯಬಳಿಗೆ ಹೊರಟಿರುವಾಗ ಆಕೆಯ ಹೃದಯವು ಆನಂದಾತಿಶಯದಿಂದ ಉಕ್ಕಿ ಬರುತ್ತಲಿತ್ತು. ತನ್ನನ್ನು ನೋಡಿದ ಕೂಡಲೆ ಪತಿಯು ಆನಂದಪಟ್ಟು ಸಂತಯಿಸಬಹುದೆಂದು ಆಕೆಯು ಭಾವಿಸುತ್ತಲಿದ್ದಳು, ನಿಷ್ಟಾ ಪಳಾದ ಆಸುಂದ ರಿಯು ಪ್ರತಿಯಬಳಿಗೆ ಹೊರಟಿರುವಾಗ ಆಕೆಯ ಹಾದಿಯೇ ಸಾಗಲೊಲ್ಲದು. ಸಮೀಪದಲ್ಲಿದ್ದ ಕಾರಾಗೃಹವು ಆಕೆಗೆ ಬಹುದೂರವಾಗಿ ತೋರಿತು. ಆಕೆಯು ಅತ್ಯಂತವಾದ ಆತುರತೆಯಿಂದಲೂ, ಪತಿವಿಷಯಕವಾದ ಸುಮಂಗಲ ಕಲ್ಪನೆ ಗಳಿಂದಲೂ ಉಲ್ಲಾಸಪಟ್ಟವಳಾಗಿ ಪತಿಯ ಬಳಿಗೆ ಆಸೆಯಿಂದ ಹೋದಳು' ಆದರೆ ಜಗತ್ತಿ೦ಗನು ಆಕೆಯನ್ನು ಕಣ್ಣೆತ್ತಿ ನೋಡಲಿಲ್ಲ: ಸಂತಯಿಸುವ ದಂತು ಒತ್ತಟ್ಟಿಗೇ ಉಳಿಯಿತು! ಕೈಯಲ್ಲಿ ಸಿಕ್ಕ ಹಿಂದೂ ತರುಣ ಸ್ತ್ರೀಯರ ವಿಷಯವಾಗಿ ಮುಸಲ್ಮಾ ನರ ಮನಸ್ಸು ಅಪವಿತ್ರವಾಗುತ್ತಿರುವದೆಂದು ತಿಳಿಯುವದು ಹಿಂದೂ ಜನರ ವಾಡಿಕೆಯಾಗಿತ್ತು. ಈ ವಾಡಿಕೆಯ ತಿಳುವಳಿಕೆಯಂತೆ ಜಗತ್ತಿಂಗನು ತಿಲೋ? ತಮೆಯ ಪಾತಿವ್ರತ್ಯದ ವಿಷಯವಾಗಿ ಸಂಶಯಗ್ರಸ್ತನಾಗಿದ್ದನು, ತಿಲೋ ತಮೆಯ ಮೇಲಿದ್ದ ಆತನ ದೃಢತರವಾದ ಪ್ರೇಮವೆ: ಆತನ ಸಂಶಯದ ಹೆಚ್ಚ ವಕ್ಕೆ ಕಾರಣವಾಗಿತ್ತು. ಸೆರೆಮನೆಯ ವಾಸದಲ್ಲಿ ಆತನಿಗೆ ಎರಡನೆಯ ಉದ್ಯೋ ಗಗಳೇನೂ ಇಲ್ಲದ್ದರಿಂದ, ಇಲ್ಲದ ದುಷ್ಕಲ್ಪನೆಗಳನ್ನು ಆತನು ಕಲ್ಪಿಸಿಕೊಂಡು ತನ್ನ ಮನಸ್ಸನ್ನು ಕಲುಷಿತವಾಗಿ ಮಾಡಿಕೊಂಡಿದ್ದನು. ಮೊದಲೇ ರಜ ಪೂತರಲ್ಲಿ ಸ್ತ್ರೀಯರ ಪಾತಿವ್ರತ್ಯಕ್ಕೆ ಗೌರವವು ಹೆಚ್ಚು, ಅದರಲ್ಲಿ ಮಾನಸಿಂಗ ನಂಥ ಕುಲೀ ರಜಪೂತನ ಮಗನ ಹೆಂಡತಿಯ ಪಾತಿವ್ರತ್ಯದ ವಿಚಾ ರವು; ಅಂದಬಳಿಕ ಕೇಳುವದೇನು? ದುಷ್ಟ ಕಲ್ಪನೆಯಿಂದ ಪೀಡಿತನಾದ ಜಗ ತಿಂಗಸಿಗೆ ತಿಲೋತ್ತಮೆಯ ಮುಖಾವಲೋಕನವೂ ತ್ರಾಸದಾಯಕವಾಯಿತು. ಆತನು ತಿರಸ್ಕಾರದಿಂದ ತಿಲೋತ್ತಮೆಯನ್ನು ಕೆಕ್ಕರಿಸಿ ನೋಡಿ-ತಿಲೋ? ಇಮೇ, ಕುಲೀನಳಾದ ರಜಪೂತ ತರುಣಿ ಯು ಮುಸಲ್ಮಾನರ ಸೆರೆಯಲ್ಲಿದ್ದು, ತನ್ನ ಪವಿತ್ರತೆಯನ್ನು ಸಿದ್ಧ ಮಾಡಿದಹೊರತು ನಿನ್ನ ಹಾಗೆ ನಿರ್ಲಜ್ಜೆಯಿಂದ ಪತಿಯಎದುರಿಗೆ ನಿಂತುಕೊಳ್ಳಲಾರಳು, ಹೋಗು, ಅಪವಿತ್ರಳಾದ ನಿನ್ನ