ಪುಟ:ತಿಲೋತ್ತಮೆ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ಆಯೇಷೆಯಪೌರುಷ. ಮುಖಾವಲೋಕನವನ್ನು ಕೂಡ ನಾನು ಮಾಡಲಾರೆನು. ಇನ್ನು ಮೇಲೆ ನೀನು ಕಾತಲೂಖಾನನ ಜನಾನಖಾನೆಯಲ್ಲಿ ಆತನ ಪ್ರೀತಿಪಾತ್ರಳಾಗಿರುವದೇ ಯೋಗ್ಯವು, ಇನ್ನು ೨೦ಬರಾಧಿ' ಶ್ವರನಾದ ಮಾನಸಿಂಗನ ಮಗನು ನಿನ್ನೊ ಡನೆ ಭಾಷಣಮಾಡಲಾರನು, ಎಂದು ನುಡಿದು, ಉಸುರ್ಗಳೆದು ಸಂತಾಪ ದಿಂದ ಉರಿಯಹತ್ತಿದನು. ಪತಿಯ ಈ ಕಠೋರ ವಚನಗಳನ್ನು ಕೇಳಿ, ತಿಲೋತ್ತಮೆಯ ಎದೆ ಯೊಡೆದು ನೀರಾಯಿತು. ಆಕೆಯು ಭಯದಿಂದ ಕಂಪಿಸಹತ್ತಿದಳು. ಆಕೆಯ ಕಣ್ಣುಗಳು ಕತ್ತಲುಗೂಡಿಸಿದವು; ಕಾಲುಗಳು ತತ್ತರಿಸಿದವು, ಪತಿಯ ಕಟ್ಟ ಕಡೆಯ ಶಬ್ದವು ಕಿವಿಗೆ ಬಿದಕೂಡಲೆ ದುಃಖಾತಿಶಯದಿಂದ ಆಕೆಯು ಮೈಮ ರೆತು ನೆಲಕ್ಕೆ ಬಿದ್ದಳು; ಆದರೆ ಜಗತ್ತಿಂಗನಿಗೆ ದಯೆಬರಲಿಲ್ಲ. ಆತನು ತಿಲೊ ತಮೆನ್ನು ಎಬ್ಬಿಸಲಿಲ್ಲ. ವಜ್ರದಂತೆ ಕಠಿಣ ಹೃದಯವುಳ್ಳವನಾಗಿ ಆತನು ತಿಲೋತ್ಸಮೆಯನ್ನು ಮನಸ್ಸಿನಲ್ಲಿ ತಿರಸ್ಕರಿಸುತ್ತ ಸಂತಾಪಪಡುತ್ತಲಿದ್ದನು. ಅಷ್ಟರಲ್ಲಿ ಆಯೇಷೆಯು ಅಲ್ಲಿಗೆ ಬಂದು, ಈ ಅನರ್ಥವನ್ನು ನೋಡಿ ಕನಿಕರ ಪಟ್ಟಳು. ಆಕೆಯು ಅತ್ಯಂತ ವಾತ್ಸಲ್ಯದಿಂದ ತಿಲೋತ್ತಮೆಯನ್ನು ಉಪ ಚರಿಸಿ ಎಬ್ಬಿಸಿ ಕುಳ್ಳಿರಿಸಿದಳು, ಆದರೆ ತಿಲೋತ್ತಮೆಗೆ ಪ್ರಜ್ಞೆಯಿದ್ದಿಲ್ಲ. ಆಕೆಯು ಭ್ರಮಿಷ್ಟಳಂತೆ ಆಗಿದ್ದಳು. ಆಯೇಷೆಯು ಆವಾಗ ಹೆಚ್ಚಿಗೆಯೇನು ಮಾತಾಡದೆ, ಜಗತ್ತಿಂಗನಿಗೆ ರಾಜಪುತ್ರರೇ, ತಿಲೋತ್ತಮೆಯು ಸಾಮಾನ್ಯ ಸ್ತ್ರೀಯಲ್ಲ, ಅಂತೇ ಆಕೆಯು ಈವರೆಗೆ ಪಠಾಣರ ಕಾರಾಗೃಹದಲ್ಲಿ ಪ್ರತಿಧ್ಯಾನ ಪರಾಯಣಳಾಗಿ ತನ್ನ ಪಾತಿವ್ರತ್ಯವನ್ನು ಕಾಯ್ದು ಕೊಂಡಿರುವಳು. ಇಲ್ಲ ದಿದ್ದರೆ ಇಷ್ಟು ಹೊತ್ತಿಗೆ ನಮ್ಮ ಕಕ್ಕನ ರಾಣೀವಾಸದಲ್ಲಿ ಸೇರ್ಪಡಿಯಾಗಿ ಹೋಗುತ್ತಿದ್ದಳು. ಈ ಪುಣ್ಯವಂತಳ ಮಂಗಳಕಾರಕವಾದ ಮುಖವನ್ನು ನೋಡಿದಕೂಡಲೆ, ಕಾತಲೂಬಾನನ ದುಷ್ಟಬುದ್ದಿಯು ನಾಶವಾಗಿ, ಆತನಲ್ಲಿ ತಿಲೋತ್ತಮೆಯ ವಿಷಯವಾಗಿ ಪೂಜ್ಯ ಬುದ್ದಿಯು ಉತ್ಪನ್ನವಾಯಿತು. ಇರಲಿ, ಸದ್ಯಕ್ಕೆ ಈಕೆಯನ್ನೂ, ವಿಮಲಾದೇವಿಯನ್ನೂ ಬಂಧುಮುಕ್ತ ಮಾಡಿ ಕಸುವೆನು. ತಮ್ಮ ದರ್ಶನಕ್ಕಾಗಿ ಧಾವಿಸಿಬಂದಿದ್ದ ತಿಲೋತ್ತಮೆಯ ಇವಸ್ಥೆಯು ಹೀಗಾದದ್ದನ್ನು ನೋಡಿ, ನನಗೆ ಬಹಳ ವ್ಯಸನವಾಗುತ್ತದೆ, ಎಂದು ನುಡಿದು, ಆಕೆಯು ತಿಲೋತ್ತಮೆಯನ್ನು ಕರಕೊಂಡು ಹೊರಟು.