ಪುಟ:ತಿಲೋತ್ತಮೆ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮೆ. ಹೋದಳು. ಇತ್ತ ಜಗತ್ಸಂಗನು ಆಯೇಷೆಯ ಈ ಮಾತುಗಳನ್ನು ಕೇಳಿ ತನ್ನ ಕಠಿಣಹೃದಯವನ್ನು ಹಳಿದುಕೊಳ್ಳುತ್ತ ಪಶ್ಚಾತ್ತಾಪ ಪಡ ಹತ್ತಿದನು. --[0]- ೪ನೆಯ ಪ ಕರಣ, ಸಮರ್ಪಕಬೋಧ. ಈಮೇರೆಗೆ `ತಿಲೋತ್ತಮೆಯ ವಿಷಯವಾಗಿ ಆಯೇಷೆಯು ಪಟ್ಟ ಒಳ್ಳೆಯ ಅಭಿಪ್ರಾಯವನ್ನು ಕೇಳಿ ಜಗಂಗನಿಗೆ ಬಹಳ ಪಶ್ಚಾತ್ತಾಪವಾ ಯಿತು, ತನ್ನನ್ನೇ ನಂಬಿ ಬಹುಕಷ್ಟದಿಂದ ಕಾರಾಗೃಹವಾಸಮಾಡಿ ಅತ್ಯಂತ ವಾದ ಪ್ರೇಮದ ಹಂಬಲದಿಂದ ತನ್ನ ಬಳಿಗೆ ಬಂದಿರುವ ಆ ಸುಂದರಿಯ ಗುಣದೋಷಗಳನ್ನು ವಿಚಾರಿಸದೆ, ದುರಭಿಮಾನದಿಂದ ಆಕೆಯನ್ನು ತಿರಸ್ಕ ಶಿಸಿದ್ದಕ್ಕಾಗಿ ಆತನು ಮರಮರನೆ ಮರುಗಿದನು. ಜಗತ್ತಿ೦ಗನಂಥ ಸರಳಹೃದ ಯದ ತರುಣರ ಗತಿಯು ಹೀಗೆಯೇಸು, ಅವರ ಮನಸ್ಸಿನಲ್ಲಿ ಯಾವದೊಂದು ವಿಚಾರವಾಗಲಿ, ವಿಕಾರವಾಗಲಿ, ಕಲ್ಪನೆಯಾಗಲಿ ಉತ್ಪನವಾದರೆ ತೀರಿತು; ಅದು ಬಡಬಡ ದೊಡ್ಡದಾಗಿ ಅದರ ಭವ್ಯ ಸ್ವರೂಪವು ಜನರ ಕಣ್ಣಿಗೆ ಬಿತ್ತೆಂದು ತಿಳಿಯಬೇಕು, ಇಂಥವರಿಗೆ ಸಾವಧಾನದ ಸುದ್ದಿ ಯೇ ಗೊತ್ತಿರುವದಿಲ್ಲ. ಅದರಲ್ಲಿ ಸೃಷ್ಟಿಯ ವಿಷಯದ ಕೆಟ್ಟಕಲ್ಪನೆಯು ಮನಸ್ಸಿನಲ್ಲಿ ಹೊಳೆದರೆ ೩೬ರಿತು, ಅದಕ್ಕೆ ಅವರು ನಿಜವೆಂದು ದೃಢವಾಗಿ ನಂಬಿ, ವಿಕಾರವಶರಾ ಗುವರು. ಇಂಥವರಿಗೆ ತಮ್ಮ ತಪ್ಪು ತಿಳಿಯಲು, ಪಶ್ಚಾತ್ತಾಪವಾಗುವದೂ ತಡವಲ್ಲ, ಎಗೆ ಒಮ್ಮೆ ವಿಕಾರವಶರಾಗಿ ಸಂತಾಪಗೊಳ್ಳುವದೂ, ಒಮ್ಮೆ - ವಿಚಾರವಶರಾಗಿ ಪಶ್ಚಾತ್ತಾಪಪಡುವದೂ ಸರಳಹೃದಯದ ನಿರ್ಧಾರಸ್ವಭಾ ವದ ತರುಣರಪಾಲಿಗೆ ಮೇಲೆಮೇಲೆ ಬರುವದರಿಂದ, ಅವರು ಬಹಳ ಗಾಸಿ ಯಾಗುವರು, ಸದ್ಯಕ್ಕೆ ಜಗತ್ತಿಂಗನ ಸ್ಥಿತಿಯು ಹೀಗೆಯೇ ಆಗಿತ್ತು. ಆತನು ತನ್ನ ಕಠೋರತನಕ್ಕಾಗಿ ವ್ಯಸನಪಡುತ್ತ ಸುಮ್ಮನೆ ಕುಳಿತಿದ್ದನು. ತಿಲೊ