ಪುಟ:ತಿಲೋತ್ತಮೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮರ್ಪಕಬೋಧ. ಇಮೆಯನ್ನು ಕಂಡು ಆಕೆಯನ್ನು ಯಾವಾಗ ಸಮಾಧಾನಪಡಿಸೇನೆನ್ನುವ ಹಾಗೆ ಆತನಿಗೆ ಆಗಿತ್ತು, ಆದರೆ ಪರಾಧೀನನಾದ ಆತನಿಗೆ ಏನುಮಾಡಲಿಕ್ಕೂ ಬರುವಹಾಗಿದ್ದಿಲ್ಲ. ಆತನು ತನ್ನ ದುರವಸ್ಥೆಯನ್ನು ಹಳಿದುಕೊಳ್ಳುತ್ತಿರಲು, ಆಯೇಷೆಯು ಪುನಃ ಅಲ್ಲಿಗೆ ಬಂದಳು. ಆಕೆಯನ್ನು ನೋಡಿದ ಕೂಡಲೆ ಜಗ ಶೃಂಗನಿಗೆ, ತನ್ನ ಒಬ್ಬ ಪರಮ ಆಸ್ಕಳನ್ನು ಕಂಡಂತೆ ಸಂತೋಷವಾಗು ತಿತ್ತು, ಆಕೆಯು ಉಸ್ಮಾನನ ಮುಂದೆ ಜಗಂಗನೆ: ತನ್ನ ಪತಿ ಯೆಂದು ಹೇಳಿದ್ದನ್ನು ಆ ತರುಣ ರಜಪೂತನು ಕಿವಿಮುಟ್ಟ ಕೆಳಿದ್ದನು. ಇಂಥ ಸದು Sಗಳ ಮೂರ್ತಿಯೂ, ಲೋಕೋ ತರ ಸುಂದರಿಯೂ ಆದ ಆಕೆಯಲ್ಲಿ ತನ ಮನಸ್ಸು ಪಭಾವವನ್ನು ವಹಿಸಿಆನಂದ ಪಡದ್ದನ್ನು ನೋಡಿ ಆತನಿಗೆ ಆತ್ಮ ರ್ಯವಾಗುತ್ತಿತ್ತು. ಆಯೇಷೆಯ ಇಚ್ಛೆಯಂತೆ ಆತನು " ನಾನು ನಿನ್ನನು ಪತಿ ಯೆಂದು ಭಾವಿಸುವೆನೆ ” ೦ದು ಆಕೆಯ ಮುಂದೆ ಎಂದೂ ಹೇಳಿದಿಲ್ಲ: ಹಾಗೆ ಹೇಳುವದಂತು ಇರಲಿ, ಆಯೇಷೆಯ ಮಾತಿಗೆ ತೋರಿಕೆಗಾದರೂ ಆತನು ಸಂತೋಷವನ್ನು ವ್ಯಕ್ತ ಮಾಡಿದ್ದಿಲ್ಲ. ಹೀಗಿದ್ದರೂ ಜಗತ್ತಿಂಗನ ಮೇಲಿನ ಆಯೇಷೆಯ ಪ್ರೇಮವು ರವಷ್ಟಾದರೂ ಕಡಿಮೆಯಾಗಿದ್ದಿಲ್ಲ. ಇದನ್ನು ಸ್ಮರಿಸಿ, ಜಗಂಗನು ಆಯೆಷೆಯ ಪ್ರೇಮದದಾರ್ಡ್ಯಕ್ಕಾಗಿ ಆಶ್ಚರ್ಯಪಡುತ್ತ, ಚಂಚಲಪ್ರೇಮದ ತಾನು ತಿಲೋತ್ತಮೆಯನ್ನು ನಿಷ್ಕಾರಣ ತಿರಸ್ಕರಿಸಿದ್ದಕ್ಕಾಗಿ ಬಹಳವಾಗಿ ನಾಚಿದನು. ಆಗ ಆಯೇಷೆಯು ಪ್ರೇಮಪೂರ್ಣವಾದ ದೃಷ್ಟಿಗ ಳಿಂದ ಜಗತ್ತಿಂಗನನ್ನು ನೋಡಿ, ಮುಗುಳು ನಗೆಯಿಂದ ಆಯೇಷ-ನಿಮ್ಮ ತರುಣ ಪುರುಷರ ಪ್ರೇಮವು ಎಷ್ಟು ಚಂಚಲವದು! ನೀವು ಮಂದಾರಣಗಡದಲ್ಲಿ ತಿಲೋತ್ತಮೆಯ ಪ್ರೇಮಪಾಶದಲ್ಲಿ ಸಿಕ್ಕಿದ್ದನ್ನು ನಾನು ಕಣ್ಣು ಮುಟ್ಟಿ ನೋಡಿರುವೆನು; ಆದರೆ ಈಗನೀವು ಏನೂ ವಿಚಾರವಾ ಡದೆ ತಿಲೋತ್ತಮೆಯಮೇಲಿನ ಪ್ರೇಮವನ್ನು ನಷ್ಟ ಪಡಿಸಿಕೊಂಡವರಂತೆ ಆಕೆಯನ್ನು ತಿರಸ್ಕರಿಸಿ, ನಿರಪರಾಧಿಯಾದ ಆ ಸುಕುಮಾರಿಯ ಹೃದಯಕ್ಕೆ ತಾಪವನ್ನುಂಟು ಮಾಡಿದಿರಲ್ಲ! ಇದು ನ್ಯಾಯವೋ? ಈ ಜಗತ್ಸಂಗ-ಸ್ತ್ರೀಯರಿಗೆ ಪಾತಿವ್ರತ್ಯವೇ ಅಲಂಕಾರವು, ಪ್ರಾಣಾಂತ ಸುಮಯ ಒದಗಿದರೂ ಆ ಆಲಂಕಾರವನ್ನು ಕಳೆದುಕೊಳ್ಳದ ಸ್ತ್ರೀ'ಯೇ ಆದ ರಣಿಯಳು, ಪರಸ್ಸಿಲಂಪಟರಾದ ಮುಸಲ್ಮಾನರ ಸೆರೆಮನೆಯಲ್ಲಿ ಬಹು