ಪುಟ:ತಿಲೋತ್ತಮೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܬ ತಿಲೋತ್ತಮೆ. ದಿವಸ ಇದ್ದು ದೇಹತ್ಯಾಗಮಾಡದೆಯಿದ್ದ ತಿಲೋತ್ತಮೆಯನ್ನು ಪರಿಶುದ್ಧ ಇಂದು ನಾನು ಹೇಗೆ ತಿಳಿಯಬೇಕು? ನಾಯಿಮುಟ್ಟದ ಗಡಿಗೆಯಂತೆ ಪತಿವ್ರ ತಯಲ್ಲದ ಸ್ತ್ರೀಯು ಎಲ್ಲರಿಂದ ತಿರಸ್ಕರಿಸಲ್ಪ ಡುವವಳೇ ಸರಿ. ಆಯೇಷ-ನಿಮ್ಮ ಮಾತನ್ನು ನಾನು ಸರ್ವಥಾ ಒಪ್ಪಿಕೊಳ್ಳುವೆನು; ಆದರೆ ಹರಗೃಹವಾಸಮಾಡಿ ಬದುಕಿ ಉಳಿದ ಮಾತ್ರದಿಂದ ಸ್ತ್ರೀಯು ಅಪವಿ ತಳೇ ಎಂದು ನೀವು ಭಾವಿಸುವದೂ, ಮುಸಲ್ಮಾನರೆಲ್ಲರೂ ಪರಸ್ತ್ರೀಲಂಪಟರೇ ಇರುವರೆಂದು ನೀವು ತಿಳಕೊಂಡಿರುವದೂ ನನ್ನ ಮನಸ್ಸಿಗೆ ಬರುವದಿಲ್ಲ. ಪಾತಿವ್ರತ್ಯದ ಭಂಗವಾಗುವ ಪ್ರಸಂಗಒದಗಿದ್ದ ಪಕ್ಷದಲ್ಲಿ ತಿಲೋತ್ತಮೆಯ ಮುಖವು ತಿರುಗಿ ನಿಮ್ಮ ಕಣ್ಣಿಗೆ ನಿಶ್ಚಯವಾಗಿ ಬೀಳುತ್ತಿದ್ದಿಲ್ಲ, ಆಕೆಯು-ನಿಶ್ನ ಯವಾಗಿ ಪ್ರಾಣತ್ಯಾಗಮಾಡುತ್ತಿದ್ದಳು. ಆ ಗುಣಸುಂದರಿಯು ಇಂದು ನಿಮ್ಮ ಕಣ್ಣಿಗೆ ಬೀಳಲಿಕ್ಕೆ,ನಮ್ಮ ಕಕ್ಕಂದಿರಾದ ಕಾತಲೂಖಾನರ ಸದ್ದು ಣವು ಕಾರಣ ವೆಂಬದನ್ನು ನೀವು ಮರೆಯಬೇಡಿರಿ, ನಮ್ಮ ಕಕ್ಕಂದಿರು ತಿಲೋತ್ತಮೆಯನ್ನು ತನ್ನ ಮಗಳೆಂದುಭಾವಿಸಿರುವರು. ಅವರುಹಾಗೆಭಾವಿಸಿದ್ದರಿಂದಲೇ ನನ್ನ ನಿನಂ ತಿಯನ್ನು ಮನ್ನಿಸಿನಿಮ್ಮನ್ನು ಬೇಗನೆ ಅವರು ಕಾರಾಗೃಹದಿಂದ ಮುಕ್ತಮಾಡು ವರು, ಒಡಂಬಡಿಕೆಯನ್ನು ಮಾಡಿಕೊಳ್ಳಬೇಕೆಂದು ನಿಮ್ಮ ತಂದೆಯವರ ಕಡೆಗೆ ಅವರು ತಮ್ಮ ವಕೀಲನನ್ನು ಕಳಿಸಿರುವರು. ಒಡಂಬಡಿಕೆಯಾದ ಕೂಡಲೆ ನಿಮ್ಮ ಬಂಧವಿಮೋಚನೆಯಾಗುವದು. ಈ ಜಗಕ್ಸಿಂಗ-ನಿಮ್ಮ ಕಕ್ಕಂದಿರ ನಡತೆಯನ್ನು ನಾನು ಕೇಳಿಬಲ್ಲೆ ನು; ಅವರು ಇಷ್ಟು ಪರನಾರೀಸೋದರರಲ್ಲ, ಹಿಂದೂ ಸ್ತ್ರೀಯರಂತು ಅವರ ಪಾಸ ವಾಸನೆಯ ಬಲೆಗೆ ಸಿಲುಕದೆ ಪಾರಾಗಲಾರರು. ಆಯೇಷ-ಅದು ಹೇಗೆ ಇರಲಿ, ತಿಲೋತ್ತಮೆಯ ವಿಷಯವಾಗಿ ಅವರ ಮೇಲೆ ಕೆಟ್ಟ ಆರೋ ಪಹೊರಿಸುವವರ ನಾಲಿಗೆಗೆ ಹುಳ ಬೀಳುವದೇ ಸರಿ! ತಿಲೋತ್ತಮೆಯ ಮುಖವನ್ನು ನೋಡಿದ ಕೂಡಲೆ ಅವರಿಗೆ ನನ್ನನ್ನು ನೋಡಿದಂತೆ ಆಗಿ, LC ಬೇಟಾ ಅಯೇಷಾ ೨” ಎಂದು ಅವರು ಒಮ್ಮೆ ಕರೆ ದದು, ನಮ್ಮ ಕಕ್ಕಂದಿರ ಬಾಯಿಂದ ಹೊರಟಶಬ್ದವು ಎಂದೂ ಸುಳ್ಳಾಗ ಲಾರದು. ಒಮ್ಮೆ ಅವರ ಹೃದಯದಲ್ಲಿ ಮೂಡಿದ ಭಾವನೆಯು ಎಂದೂ ಅಳಿಸಲಾರದು. ಒಮ್ಮೆ ಅವರು ತಿಲೋತ್ತಮೆಯನ್ನು ಮಗಳೆಂದು ಭಾವಿ