ಪುಟ:ತಿಲೋತ್ತಮೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮರ್ಪಕಬೋಧ. ೩೩ ಸಿದ್ದು ಭಾವಿಸಿಹೋಯಿತು. ತಿರುಗಿ ಆ ಭಾವನೆಯಲ್ಲಿ ಅಂತರವಾದರೆ ಕಾತಲೂ ಖಾನರ ಚಿತ್ರಸೈರ್ಯಕ್ಕೂ, ಪ್ರಾಮಾಣಿಕತನಕ್ಕೂ ಕೊರತೆಬಂದೀತು. ಜಗತ್ಸಂಗ, ಈ ಆಯೆ ಸೆಯು ಕಾತಲೂಖಾನನ ಮಗಳಲ್ಲವೆ? ನಿಮ್ಮ ವಿಷ ಯವಾಗಿ ಉತ್ಪನ್ನವಾಗಿರುವ ಆಕೆಯ ಪತಿಭಾವನೆಯು, ನೀವು ಆಕೆಯನ್ನು ಪ್ರೀತಿಸರಿ-ಪ್ರೀತಿಸದಿರರಿ, ಆದರಿಸಿರಿ-ಆದರಿಸದಿರರಿ, ಆಕೆಯಮನಪ್ಪಿಗೆವಿಷಾದ ವಾಗಬೇಕೆಂದು ನೀವು ಒಬ್ಬ ಸ್ತ್ರೀಯನ್ನು ಲಗ್ನವಾಗಿರಿ, ಅಥವಾಸಾವಿರಸ್ತ್ರೀಯ ರನ್ನು ಲಗ್ನವಾಗಿರಿ, ಎಂದೂ ನಷ್ಯವಾಗದು. ತನ್ನ ಭಾವನೆಯನ್ನು ಕಾಯು ಕೊಂಡು ತದನುಸಾರವಾಗಿ ವರ್ತಿಸುವದಕ್ಕಾಗಿ ಪರಿಪರಿಯ ಕಷ್ಟ ಗಳನ್ನು ಭೋಗಿಸುವ ದೇಕಾತಲೂಖಾನನ ಮಗಳಾದ ಆಯೇಷೆಯ ಶೀಲವು. ಬಹಳ ಮಾತುಗಳಿಂದೇನು? ಕಾಲತ್ರಯಯದಲ್ಲಿ ಆಯೇಷೆಯ ಮುಖದಿಂದ ಅಸತ್ಯವಾಣಿಯು ಹೊರಡದು, ಅದಕ್ಕೆ ಅಲ್ಲಾನೇ ಸಾಕ್ಷಿಯು! ಇದೇ ಸ್ಥತಿಜೆನ್ನು ನನ್ನ ಕಕ್ಕನ ವಿಷಯವಾಗಿ ನೀವು ನಿಜವೆಂದು ತಿಳಿಯಿರಿ. ಜಗಂಗ-ಆಯೇಷೆ, ನಿನ್ನ ಗುಣಗಳನ್ನು ನಾನು ಬಲ್ಲೆನು. ನಿನ್ನ ಸದ್ಗುಣಗಳ ವರ್ಚಸ್ಸಿನಿಂದ ನನ್ನ ಕಣ್ಣುಗಳು ಕುಕ್ಕುತ್ತಿರುವವು ನಿನ್ನ ಮಾತುಗಳ ವಿಷಯವಾಗಿ ನನ್ನಲ್ಲಿ ಬೇರೆ ಕಲ್ಪನೆಯಿಲ್ಲ, ತಿಲೋತ್ತಮೆಯನ್ನು ತಿರಸ್ಕರಿಸಿದ್ದಕ್ಕಾಗಿ ನನಗೆ ಬಹಳ ಪಶ್ಚಾತ್ತಾಪವಾಗಿರುತ್ತದೆ. ಈ ಅಪರಾಧಕ್ಕೆ ಶಿಕ್ಷೆಯೇನೆಂಬದನ್ನು ನೀನೇ ವಿಧಿಸು. ಆಯೇಷೆ--ನಾನೇನು ಇದಕ್ಕೆ ಶಿಕ್ಷೆಯನ್ನು ವಿಧಿಸುವದು? ನೀವು ಬಂಧವಿಮೋಚನವನ್ನು ಹೊಂದಿದಕೂಡಲೆ ತಿಲೋತ್ತಮೆಯನ್ನು ಲಗ್ನ ಮಾಡಿಕೊಳ್ಳ ಬೇಕು; ಮತ್ತು ಆ ಲಗ್ನಕ್ಕೆ ನನ್ನನ್ನು ಕರೆಸಬೇಕು; ಇದೇ ನಿಮಗೆ ಶಿಕ್ಷೆಯು! ಆಯೇಷೆಯು ವಿಧಿಸಿದ ಈ ಶಿಕ್ಷೆಯನ್ನು ಕೇಳಿ, ಜಗತ್ತಿಂಗನು ಆಕೆಯ ಸರಳ ಹೃದಯಕ್ಕೂ, ನಿರ್ಮಾತ್ಸರ್ಯದ ಸ್ವಭಾವಕ್ಕೂ ಬಹಳವಾಗಿ ಮೆಚ್ಚಿ ದನು; ಆದರೆ ಆಕೆಯನ್ನು ಲಗ್ನವಾಗುವದಕ್ಕೆ ಆತನ ಮನಸ್ಸು ಹರಿಯ ಲಿಲ್ಲ. ಜಗಕ್ಸಿಂಗನು ವಿಷಯವಾಸನಾತೃಪ್ತಿಗಾಗಿ ಬಹುಜನ ಹೆಂಡಿರನ್ನು ಲಗ್ನವಾಗುವಂಥ ಸರ್ವಸಾಧಾರಣ ಮನುಷ್ಯನಾಗಿದ್ದಿಲ್ಲ; ತನ್ನ ಧರ್ಮಪತ್ನಿಗೆ ನಿಜವಾದ ಪ್ರೇಮಸರ್ವಸ್ವವವನ್ನು ಅರ್ಪಿಸುವ ಮಹಾತ್ಮನಾಗಿದ್ದನು. ಆತ