ಪುಟ:ತಿಲೋತ್ತಮೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ತಿಲೋತ್ತಮೆ. ನನ್ನು ಏಕಪತ್ನಿವ್ರತದಲ್ಲಿ ಶ್ರೀರಾಮಚಂದ್ರನಿಗೆ ಹೋಲಿಸಬಹುದು. ಜಗ ತೃಸಿಂಗನು ತನ್ನ ಪ್ರೇಮಸರ್ವಸ್ವವನ್ನು ತಿಲೋತ್ತಮೆಗೆ ಕೊಟ್ಟು ಬಿಟ್ಟಿದ್ದ ದಿಂದ, ಅನ್ಯಸ್ತಿಯನ್ನು ರ್ಪಭಾವದಿಂದ ಪ್ರೀತಿಸಲಿಕ್ಕೆ ಆತನಲ್ಲಿ ಪ್ರೇಮವೇ ಉಳಿದಿದ್ದಿಲ್ಲ.ಜಗತ್ತಿಂಗನ ಸುದೈವದಿಂದ ತಿಲೋತ್ತಮೆಯಾದರೂ ಆತನ ಮನ ಸ್ಪನ್ನು ಯಾವ ಮಾತಿನಲ್ಲಿಯೂ ಎರಡನೆಯ ಸ್ತ್ರೀಯಕಡೆಗೆ ಹರಿಯಗೊಡ ದಂಥ ಸದ್ದು ಣಪರಿಪೂರ್ಣ ಸುಂದರ ಸ್ತ್ರೀಯಾಗಿದ್ದಳು, ಈ ಜಗತ್ತಿನೊಳಗೆ ಗುಣಪರಿಪೂರ್ಣತೆಯಲ್ಲಿ ಇಲ್ಲಿಗೆ ಮುಗಿಯಿತೆಂದು ಮೆರೆಯನ್ನು ತೋರಿಸುವ ಸರ್ವಶ್ರೇಷ್ಠ ವಸ್ತುವು ದೊರೆಯುವದು ದುರ್ಲಭವೆಂಬಂತೆ, ತಿಲೋತ್ತಮೆ ಋನ್ನು ತಲೆಯಿಟ್ಟಿಹಾರುವಂಥ ಸ್ತ್ರೀಯರು ಮತ್ತೊಬ್ಬರಿಲ್ಲೆಂದು ಹೇಳು ನದು ಸಾಹಸದ ಮಾತಾಗಿದ್ದರೂ, ಸದ್ಗುಣಸಮುಚ್ಚಯದಲ್ಲಿ ತಿಲೋತ್ತಮೆ ಮನ್ನು ಹೋಲುವ ಅನ್ಯಸ್ತಿಯು ಸಿಗುವದು ದುರ್ಲಭವೆಂತಲೆ ನಾವು ಸ್ಪಷ್ಟವಾಗಿ ಹೇಳುವೆವು; ಆದರೆ ಆಯೇಷೆಯು ಮಾತ್ರ ಕೆಲವು ಸಂಗತಿಗಳಲ್ಲಿ ತಿಲೋತ್ತಮೆಯನ್ನು ಮೀರಿದವಳಿದ್ದಳು. ಅಂಥ ಲೋ ಕೋ ತರ ಯೋಗ್ಯ ತೆಯ ತರುಣಿಯು ತಾನಾಗಿ ತನ್ನನ್ನು ಪ್ರೀತಿಸುತ್ತಿರಲು, ಆಕೆಯನ್ನು ನಿರಾಕರಿಸುವಾಗಜಗತ್ತಿಂಗನುಪಶ್ಚಾತ್ತಾಪಪಡುತ್ತಿದ್ದನು. ಶ್ರೀರಾಮಚಂದ್ರನಿಗೆ ಸೀತಾಮಾತೆಯ ಹೊರತು ಅನ್ಯಸ್ತ್ರೀಯರ ಪಾಣಿಗ್ರಹಣಮಾಡುವ ಪ್ರಸಂಗ ಒದಗಿದಾಗ ಆತನು ಆ ಧನ್ಯರಾದ ಸ್ತ್ರೀಯರಿಗೆ- C ಈ ರಾಮಾವತಾರದಲ್ಲಿ ನಾನು ಏಕಪತ್ನಿವ್ರತಸ್ಥನಾಗಿರುವೆನು, ಮುಂದೆ ಕೃಷ್ಣಾವತಾರದಲ್ಲಿ ಬಹು ಪತಿಗಳ ಸ್ವೀಕಾರಕ್ಕೆ ಯೋಗವಿರುವದರಿಂದ, ಆಗ ನಿಮ್ಮ ಪಾಣಿಗ್ರಹಣ ಮಾಡುವೆನೆಂದು ವಚನಕೊಡಬೇಕಾಯಿತು, ಅದರಂತೆ ಜಗತ್ತಿಂಗನು ಆಯೇ ಹೆಯ ಸದ್ದು ಣ-ಸೌಂದರ್ಯಗಳಿಗೆ ಒಮ್ಮೊಮ್ಮೆ ಲುಬ್ಬ ನಾಗುತ್ತಿದ್ದರೂ, ಈ ಜನ್ಮದಲ್ಲಿ ತಾನು ತನ್ನ ಪ್ರೇಮವನ್ನೆಲ್ಲ ತಿಲೋತ್ತಮೆಗೆ ಕೊಟ್ಟು ಬಿಟ್ಟಿರುವ ದರಿಂದ, ಆಯೇಷೆಯ ಪಾಣಿಗ್ರಹಣಕ್ಕೆ ಈ ಜನ್ಮದಲ್ಲಿಯಂತು ಆಸ್ಪದವಿ ೮ಂದು ಆತನುನಿಶ್ಚಯಿಸಿದ್ದನು. ಈಮಾತನ್ನು ಚಾಣಾಕ್ಷಳಾದಆಯೇಷೆಯು ಅಂತದ್ದರಿಂದ, ಈ ಜನ್ಮದಲ್ಲಿ ತಾನು ಜಗತ್ತಿಂಗನನ್ನು ಮನಸಾಧ್ಯಾನಿಸುತ್ತ ಬ್ರಹ್ಮಚರ್ಯವ್ರತದಿಂದಲೇ ಕಾಲಹರಣ ಮಾಡತಕ್ಕದೆಂದು ನಿಶ್ಚಯಿ ಇದ್ದಳು.