ಪುಟ:ತಿಲೋತ್ತಮೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ ಸಹಜಪ್ರೇಮ. ಹೀಗಿರುವಾಗ ಮುಂದೆ ಸ್ವಲ್ಪ ದಿವಸಗಳಲ್ಲಿ ಪಠಾಣಕಾತಲೂಖಾ ನನಿಗೂ, ರಾಜಾಮಾನಸಿಂಗನಿಗೂ ಒಡಂಬಡಿಕೆಯಾದದ್ದರಿಂದ ಪತಾಣ ಮೊಗಲರಲ್ಲಿಯ ಯುದ್ದವು ನಿಲ್ಲಲು, ಜಗತ್ವಿಂಗನು ಕಾರಾಗೃಹದಿಂದ ಮುಕ್ತನಾದನು. ಒಂದುದಿನ ಜಗಕ್ಸಿಂಗನು ಕಾರಾಗೃಹದಲ್ಲಿ ತಿಲೋತ್ತ ಮೆಯನ್ನು ಮನಸ್ಸಿನಲ್ಲಿ ಧ್ಯಾನಿಸುತ್ತ, ಅವಿಚಾರದಿಂದ ತಾನು ಆಕೆ ಯನ್ನು ತಿರಸ್ಕರಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತ ಕುಳಿತಿರಲು, ಆಯೇಷೆಯು ಆತನ ಬಳಿಗೆ ಬಂದಳು. ಆಕೆಯ ಸಂಗಡ ಉಸ್ಮಾನನೂ ಬಂದಿದ್ದನು. ಆಯೆಸೆಯು ಜಗಕ್ಸಿಂಗನನ್ನು ಕುರಿತು-ರಾಜಪುತ್ರ ಜಗತ್ಸಂಗ, ನೀವು ಇಂದಿನಿಂದ ಕಾರಾಗೃಹದಿಂದ ಮುಕ್ತರಾದಿರಿ. ನಿಮ್ಮಂಥ ಸದ್ದು ಣಿಗಳು ರಾಜ ಕಾರಣದ ಮೂಲಕ ಇಷ್ಟು ದಿನ ಕಾರಾಗೃಹ ದುಃಖವನ್ನು ಭೋಗಿಸಬೇ ಕಾಯಿತು, ಅದಕ್ಕಾಗಿ ನಮ್ಮೆಲ್ಲರಿಗೆ ಬಹಳ ಪಶ್ಚಾತ್ತಾಪವಾಗಿದೆ. ಈಗ ಮೊಗಲರಿಗೂ ಪಠಾಣರಿಗೂ ಸಖ್ಯವಾಗಿರುವದರಿಂದ ನೀವು ನಮ್ಮ ಮಿತ್ರರಾದಿರಿ. ಈವರೆಗೆ ನಮ್ಮಿಂದ ಉಪಾಯವಿಲ್ಲದೆ, ಅಥವಾ ಪ್ರಮಾದ ದಿಂದ ಘಟಿಸಿದ ಅಪರಾಧಕ್ಕಾಗಿ ನಮ್ಮನ್ನು ಕ್ಷಮಿಸಬೇಕು, ಯಾವಕಾರಣ ದಿಂದೇ ಆಗಲಿ, ಇಷ್ಟು ದಿನ ನಿಮ್ಮಂಥ ಗುಣಿ ಜನರ ಸಹವಾಸವಾದದ್ದರಿಂದ ನಾವು ಧನ್ಯರಾದೆವೆಂತಲೇ ಹೇಳುವೆವು, ಈಗ ನಮ್ಮ ಕಕ್ಕ೦ದಿರಾದ ಕಾತ ಲೂಖಾನರವರು ಬಹುಮಾನಪೂರ್ವಕವಾಗಿ ನಿಮ್ಮನ್ನು ಕರೆತರುವದಕ್ಕಾಗಿ ತಮ್ಮ ಚಿಕ್ಕಮಕ್ಕಳಾದ ಈ ನಬಾಬ ಉಸ್ಮಾನಖಾನರವರನ್ನೂ, ನನ್ನನ್ನೂ ಕಳಿಸಿದ್ದಾರೆ. ಎಂದು ಹೇಳಿ, ಜಗತ್ತಿಂಗನಿಗೆ ಮಂಗಲಸ್ನಾನವನ್ನು ಮಾಡಿಸಿ ಬಹುಮಾನದ ವಸ್ತ್ರಾಭರಣಗಳನ್ನು ಡಿಸಿ ತೊಡಿಸಿ, ಮಿಷ್ಟಾನ್ನ ಭೋಜನವಾ ದನಂತರ ಆತನನ್ನು ಕಾತಲೂಖಾನನ ಬಳಿಗೆ ಕರಕೊಂಡುಹೋದರು. ಖಾನನು ಜಗತ್ತಿಂಗನನ್ನು ನೋಡಿದ ಕೂಡಲೆ ಆಸನದಿಂದ ಎದುಹೋಗಿ ಆತನನ್ನು ಮರ್ಯಾದೆಯಿಂದ ಕೈಹಿಡಿದು ಕರೆತಂದು ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡನು. ಕುಶಲಪ್ರಶ್ನೆಗಳಾದಮೇಲೆ ಖಾನನು ಜಗಕ್ಸಿಂಗನನ್ನು ಕುರಿತು-ರಾಜಕುಮಾರ ಜಗಂಗಜೀ, ನಿಮ್ಮ ಪರಾಕ್ರಮದ ಸುದ್ದಿಗ ಇನ್ನು ನಾನು ಕೇಳಬಲ್ಲೆನು, ನಿಮ್ಮಂಥ ವೀರಶಿರೋಮಣಿಗಳು ಯುದ್ಧ ದಂಥ ಸೂಕ್ಷಪ್ರಸಂಗದಲ್ಲಿ ತಿಲೋತ್ತಮೆಯ ಮೋಹಪಾಶದಲ್ಲಿ ಸಿಕು