ಪುಟ:ತಿಲೋತ್ತಮೆ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮ. ಕಾರಾಗೃಹವಾಸವನ್ನು ಭೋಗಿಸಿದ್ದಕ್ಕಾಗಿ ನನಗೆ ಬಹಳ ಖೇದವಾಗುತ್ತದೆ; ಆದರೂ ನಿಮ್ಮಂಥ ಆಲೌಕಿಕ ಪುರುಷರಿಗೆ ತಿಲೋತ್ತಮೆಯ ಲಾಭವಾದದು ಬಹಳ ಸಂತೋಷವು, ತಿಲೋತ್ತಮೆಯನ್ನು ನಾನು ಮಗಳಂತೆ ನಡಿಸಿ ಕೊಂಡಿರುವನು, ಆಕೆಯು ನನ್ನ ಪ್ರಿಯ ಆಯೇಷೆಗೆ ಸರಿಯಾದವಳು, ಜಗ ಶೃಂಗ, ಇನ್ನು ನೀವು ಹೋಗಿರಿ, ತಿಲೋತ್ತಮೆಯನ್ನು ಮದುವೆಯಾಗಿ ಸಂಸಾರಸುಖವನ್ನು ಭೋಗಿಸಿ, ಪ್ರಸಿದ್ಧ ಅಂಬರಾಧೀಶ್ವರ ಮಾನಸಿಂಗರ ವರ ವಂಶವನ್ನು ಅಭಿವೃದ್ಧಿಗೊಳಿಸಿರಿ, ಕಾತಲೂಖಾನನು ಸದ್ಯಕ್ಕೆ ನಿಮ್ಮ ಮಿತ್ರನಿರುತ್ತಾನೆ. ನಮ್ಮ ನಿಮ್ಮೊಳಗಿನ ಈಮಿತ್ರತ್ವವು ದೃಢವಾಗಿ ಇರಬೇಕೆಂದು ನಾನು ಇಚ್ಚಿಸುವೆನು, ಎಂದು ಆದರಪೂರ್ವಕವಾದ ಮಾತುಗಳನ್ನಾಡಿ ಜಗಕ್ಸಿಂಗನನ್ನು ಕಳಿಸಿಕೊಟ್ಟನು. ಸುಶೀಲೆಯಾದ ಆಯೇ ಷೆಗೆ ಜಗಂಗನ ವಿಯೋಗದಿಂದ ಬಹಳ ಅಸಮಾಧಾನವಾಯಿತು. ಆಕೆಯು ತನ್ನ ಪ್ರಾಣೇಶ್ವರನನ್ನು ಹೃದಯದಲ್ಲಿ ಸ್ಥಾಪಿಸಿ, ಹಗಲಿರುಳು ಆತನನ್ನು ಧ್ಯಾನಿಸಹತ್ತಿದಳು. ಇತ್ತ ಜಗತ್ತಿ೦ಗನು ಅಶ್ವಾರೂಢನಾಗಿ ಕಾತಲೂಖಾನನು ಕಳಿಸಿದ್ದ ಪರಿಜನರೊಡನೆ ಮಂದಾ ರಣಗಡದ ಹಾದಿಯನ್ನು ಹಿಡಿದು ಸಾಗಿದನು. ತಾನು ತಂದೆಯ ಆಜ್ಞೆ. ಯನ್ನು ಮೀರಿ ತಿಲೋತ್ತಮೆಯ ಹಂಬಲಕ್ಕೆ ಬಿದ್ದು ಸೆರೆಮನೆಯ ಸೋಬತಿಯಾದದ್ದರಿಂದ, ದಿಲ್ಲಿ ಬಾದಶಹನ ವಿಜಯಸಂಪಾದನೆಗೆ ದೊಡ್ಡ ಎಷ್ಟವುಂಟಾಗಿರಲು, ಸ್ವಾಮಿನಿಷ್ಠನಾದ ತನ್ನ ತಂದೆ ಮಾನಸಿಂಗನು ತನಗೆ ಏನು ಶಾಸನಮಾಡುವನೋ ಎಂದು, ಜಗತ್ತಿಂಗನು ಅಂಜುತ್ತಲಿದನು. ಆಗಿನ ಅಕಬರನ ಆಳಿಕೆಯಲ್ಲಿ ಮಾನಸಿಂಗನಂಥ ತೇಜಸ್ವಿಗಳು ಇಡಿಯ ದರ್ಬಾರದಲ್ಲಿ ಮತ್ತೊಬ್ಬರಿದ್ದಿಲ್ಲವೆಂದು ಹೇಳಬಹುದಾಗಿತ್ತು, ಅಕಬರನ ಸಾಮ್ರಾಜ್ಯದಲ್ಲಿ ಅರ್ಧ ಸಾಮ್ರಾಜ್ಯದ ಸಂಪಾದನೆಯ ಶ್ರೇಯಸ್ಸು ಮಾನ ಸಿಂಗನಪಾಲಿಗೆ ಇತ್ತು, ಸ್ವತಃ ಆಕಬರಬಾದಶಹನು ಕೂಡ ಮಾನಸಿಂಗನ 'ಸಂಗಡ ಬಹುಮಾನಪೂರ್ವಕವಾಗಿನಡೆದುಕೊಳ್ಳುತ್ತಿದ್ದನು, ಮಾನಸಿರಿಗನು “ಮುಸದರಅನ್ಯರಿಆತನನ್ನು ಸಮಾಧಾನಗೊಳಿಸುವದು 'ಅನ್ಯರಿಗೆಬಹು ಕಷ್ಟವಾ ಗಿತ್ತು. ಇಂಥದರ್ಪದ ತಂದೆಯಬ ಳಿಗೆಅಪರಾಧಿಯಾದ ನಾನು ಹೇಗೆಹೋಗ ಇಂದು ಜಗತ್ಸಂಗನು ಆಲೋಚಿಸುತ್ತಿದ್ದನು; ಹೇಗಿದ್ದರೂ ತಂದೆಯ ಬಳಿಗೆ